Site icon Vistara News

Drugs Case: ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನ ಜೈಲಿಗೆ ಅಟ್ಟಿದ ಪೊಲೀಸರು

Drug

ಶಿರಸಿ: ಇಲ್ಲಿನ ನೀಲೆಕಣಿ ಅರಣ್ಯ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಬಂಧಿಸಲಾಗಿದೆ. ನಗರದ ಹಾಲೋ ಹೊಂಡ ಬಡಾವಣೆಯ ಸೋಹನ ಭಂಡಾರಿ (21) ಬಂಧಿತ ಆರೋಪಿ ಆಗಿದ್ದಾನೆ.

ಶಿರಸಿ ನಗರದ ಸುತ್ತಮುತ್ತ ಈತ ಗಾಂಜಾ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಹೀಗಾಗಿ ಖಚಿತ ಮಾಹಿತಿ ಮೇರೆಗೆ ನಗರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತನಿಂದ 333 ಗ್ರಾಂ ಗಾಂಜಾ ಹಾಗೂ 550 ನಗದು ವಶಕ್ಕೆ ಪಡೆಯಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಕುಡಿದ ಅಮಲಿನಲ್ಲಿ ಕಾರು ಚಾಲನೆ

ಬೆಂಗಳೂರಿನ ಬಾಳೆಕುಂದ್ರಿ ಸರ್ಕಲ್ ಬಳಿ ಅತಿ ವೇಗದ ಚಾಲನೆಯಿಂದಾಗಿ ಕಾರು ಅಪಘಾತ ಸಂಭವಿಸಿದೆ. ಕುಡಿದ ಅಮಲಿನಲ್ಲಿ ವಾಹನ ಚಾಲನೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಕಾರಲ್ಲಿ ಮೂರು ಯುವಕರು ಹಾಗೂ ಒಬ್ಬ ಮಹಿಳೆ ಇದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:Drugs Case: ಪತಿಯ ಗಾಂಜಾ ದಂಧೆ ಮುಂದುವರಿಸಿದ ಖತರ್‌ನಾಕ್‌ ಕಳ್ಳಿಯ ಬಂಧನ, ಮಕ್ಕಳೇ ಅಸ್ತ್ರ!

ಕಾರನ್ನು ಅತಿ ವೇಗವಾಗಿ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಅಂಗಡಿ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನ ಏರ್ ಬ್ಯಾಗ್ ಓಪನ್ ಇದ್ದ ಕಾರಣ ಯಾವುದೇ ಅನಾಹುತವಾಗಿಲ್ಲ. ಪಾರ್ಟಿ ಮುಗಿಸಿ ವಾಪಸ್‌ ಆಗುವಾಗ ಈ ಘಟನೆ ನಡೆದಿದ್ದು, ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version