ಬೆಂಗಳೂರು: ನಗರದ ಡಿ.ಜೆ ಹಳ್ಳಿ ಪೊಲೀಸರು ಗಾಂಜಾ ಮೂಲದ (Drugs case) ದೊಡ್ಡ ಜಾಲವನ್ನೇ ಹಿಡಿದು, 2.4 ಕೋಟಿ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ಡಿಜೆ ಹಳ್ಳಿ ನಿವಾಸಿಗಳಾದ ನವಾಜ್ ಹಾಗೂ ರೆಹಮಾನ್ ಎಂಬ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.
ಏರಿಯಾಗಳಲ್ಲಿ ತಮ್ಮದೇ ನೆಟ್ವರ್ಕ್‌ಗಳನ್ನು ಹೊಂದಿರುವ ಈ ಇಬ್ಬರು ಪೆಡ್ಲರ್‌ಗಳು, ಗಾಂಜಾ ಮಾರಾಟವನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ಬಂಧಿತರಲ್ಲಿ ರೆಹಮಾನ್‌ಗೆ ಜೈಲುವಾಸ ಮೊದಲಲ್ಲ. ಈ ಹಿಂದೆ 2017ರಲ್ಲಿ ಗಾಂಜಾ ಕೇಸ್‌ನಲ್ಲಿ ಸಿಸಿಬಿಗೆ ಸಿಕ್ಕಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದ. ಆಂಧ್ರದ ವೈಜಾಗದ ಲಿಂಕ್ ಹೊಂದಿದ್ದ ಈತ ಪೊಲೀಸರಿಗೆ ಸಿಗದಂತೆ ಬೇರೆ ಮಾರ್ಗದ ಮೂಲಕ ವ್ಯವಹಾರ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
ಟ್ರೈನ್‌ನಲ್ಲಿ ಗಾಂಜಾ ಸಾಗಟ
ವೈಜಾಕ್‌ನ ಅರಕು ಎಂಬ ಊರಿನಲ್ಲಿ ಸಿಗುವ ಗಾಂಜಾಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಹೀಗಾಗಿ ಬಂಧಿತ ರೆಹಮಾನ್ ಅಲ್ಲಿನ ಡೀಲರ್ ಜತೆ ವ್ಯವಹಾರ ನಡೆಸಿ ಮಾಲ್‌ಗಳನ್ನು ಟ್ರೈನ್‌ನಲ್ಲಿ ತುಂಬಿಕೊಂಡು ಬರುತ್ತಿದ್ದ. ಈ ಮೊದಲೇ ನಿರ್ಧರಿಸಿದಂತೆ ಯಾವುದೇ ಕಾಲ್, ಮೆಸೇಜ್ ಇಲ್ಲದೆ ಬೆಂಗಳೂರಿನ ಅದೊಂದು ಏರಿಯಾದಲ್ಲಿ ಚಲಿಸುತಿದ್ದ ಟ್ರೈನ್‌ನಿಂದಲೇ ಗಾಂಜಾದ ಮೂಟೆಗಳನ್ನು ಎಸೆದು ಹೋಗಲಾಗುತ್ತಿತ್ತು. ಬಳಿಕ ಅಲ್ಲೇ ಕಾದುಕುಳಿತ್ತಿರುದ್ದ ರೆಹಮಾನ್, ನವಾಜ್ ಇಬ್ಬರೂ ಸೇರಿ ಗಾಂಜಾ ತಂದು ಮಾರಾಟ ಮಾಡುತಿದ್ದರು.
ಇದನ್ನೂ ಓದಿ: Book Release: ಮಾ.6ರಂದು ಪ್ರಕಾಶ್ ಶೇಷರಾಘವಾಚಾರ್‌ರ ಆತ್ಮನಿರ್ಭರ ಭಾರತ ಪುಸ್ತಕ ಲೋಕಾರ್ಪಣೆ
ಸದ್ಯ ಇಬ್ಬರು ಆರೋಪಿಗಳನ್ನು ಡಿ.ಜೆ ಹಳ್ಳಿ ಪೊಲೀಸರು ಮಾಲ್ ಸಮೇತ ಬಂಧಿಸಿದ್ದಾರೆ. ಪೆಡ್ಲರ್‌ಗಳು ಮಾತ್ರವಲ್ಲದೆ ಡೀಲರ್‌ಗಳನ್ನೇ ಖೆಡ್ಡಾಕ್ಕೆ ಕೆಡವಲು ಪೊಲೀಸರು ಬಲೆ ಬೀಸಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ