ಮೈಸೂರು: ಗಾಂಜಾ ಗುಂಗಿನಲ್ಲಿ (Ganja Case) ಯುವಕ-ಯುವತಿಯರ ಹುಚ್ಚಾಟಕ್ಕೆ ಜನರು ಕಂಗಾಲಾಗಿದ್ದಾರೆ. ಮಾದಕ ವಸ್ತು ಸೇವಿಸಿ ಗುಂಗಿನ ನಶೆಯಲ್ಲಿ ಎಲ್ಲೆಂದರಲ್ಲಿ ಒದ್ದಾಡುತ್ತಿರುವ ವಿಡಿಯೋ ವೈರಲ್ (Viral News) ಆಗಿದೆ. ಕರ್ನಾಟಕ-ಕೇರಳ ಗಡಿಯಲ್ಲಿ ಬರುವ ಸರಗೂರು ತಾಲೂಕಿನ ಗೋಳೂರಿನಲ್ಲಿ ರಾಜಾರೋಷವಾಗಿ ಮಾದಕ ವಸ್ತುಗಳ (Drugs case) ಅಕ್ರಮ ಮಾರಾಟ ನಡೆಯುತ್ತಿದೆ.
ಮೈಸೂರು ಜಿಲ್ಲೆಯ ಗಡಿಭಾಗದಲ್ಲಿ ಯುವಕ ಯುವತಿಯರು ಗಾಂಜಾ ಸೇವಿಸಿ, ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದು ಒದ್ದಾಡಿದ್ದಾರೆ. ಮತ್ತಿನ ಲೋಕದಲ್ಲಿ ಅವರು ಹೇಗೆ ವರ್ತಿಸುತ್ತಾರೆ ಎನ್ನುವುದೇ ಗೊತ್ತಾಗದ ಪರಿಸ್ಥಿತಿಯಲ್ಲಿ ನಶೆಯನ್ನು ಏರಿಸಿಕೊಂಡಿದ್ದಾರೆ.
ಇದನ್ನೂ ಓದಿ: Food Poisoning : ಚಿಕನ್ ಸೇವಿಸಿದ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ
ಇನ್ನು ಗಾಂಜಾ ಗುಂಗಿನಲ್ಲಿದ್ದ ಯುವಕ- ಯುವತಿಯರನ್ನು ಈ ಬಗ್ಗೆ ಪ್ರಶ್ನಿಸಲು ಹೋದರೆ ಗ್ರಾಮಸ್ಥರ ಮೇಲೆಯೇ ಗಾಂಜಾ ನಶೆ ಏರಿಸಿಕೊಂಡವರು ಹಲ್ಲೆಗೆ ಯತ್ನಿಸಿದ್ದಾರೆ. ಅಂತರಸಂತೆ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ದಂಧೆ ಜೋರಾಗಿದೆ. ಆದರೆ ಸ್ಥಳೀಯ ಆಡಳಿತ, ಪೊಲೀಸರು ಕಣ್ಮಚ್ಚಿ ಕುಳಿತಿದ್ದಾರೆ. ಯುವ ಜನತೆಯನ್ನು ರಕ್ಷಿಸಿ, ಗಾಂಜಾ ಮಾರಾಟ ತಪ್ಪಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಗಾಂಜಾ ಗುಂಗಿನಲ್ಲಿದ್ದವರು ಎಲ್ಲೆಂದರಲ್ಲಿ ಬಿದ್ದು ಒದ್ದಾಡುತ್ತಿದ್ದವರನ್ನು ಗೋಳೂರು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಇವರೆಲ್ಲರೂ ಮಲಯಾಳಂ ಭಾಷೆ ಮಾತನಾಡುತ್ತಿದ್ದು, ಕಾಲೇಜು ವಿದ್ಯಾರ್ಥಿಗಳಾ ಅಥವಾ ಏನು ಎಂಬುದು ತಿಳಿದು ಬಂದಿಲ್ಲ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ