Site icon Vistara News

ಶನಿವಾರದಿಂದ ರಾಜ್ಯಾದ್ಯಂತ ಮದ್ಯದಂಗಡಿ ಬಂದ್: ಎಸ್. ಗುರುಸ್ವಾಮಿ ಎಚ್ಚರಿಕೆ

guruswamy

ಚಿತ್ರದುರ್ಗ: ಅಬಕಾರಿ ಇಲಾಖೆಯ ಇ-ಇಂಡೆಂಟಿಂಗ್ ವ್ಯವಸ್ಥೆಯಲ್ಲಿ ಸಮಸ್ಯೆಯಿದ್ದು, ಇತ್ಯರ್ಥಪಡಿಸದಿದ್ದರೆ ರಾಜ್ಯಾದ್ಯಂತ ಶನಿವಾರ (ಜು.9) ಮದ್ಯದಂಗಡಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಮದ್ಯ ಮಾರಾಟಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್‌.ಗುರುಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಚಿತ್ರದುರ್ಗ ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಎಸ್‌. ಗುರುಸ್ವಾಮಿ, ಎಪ್ರಿಲ್ 4ರಿಂದ ಹೊಸ ಇ-ಇಂಡೆಂಟಿಂಗ್ ವ್ಯವಸ್ಥೆಯನ್ನು ಸರ್ಕಾರ ಜಾರಿ ಮಾಡಿತ್ತು. ಈ ವ್ಯವಸ್ಥೆಯಿಂದಾಗಿ ಮದ್ಯ ಮಾರಾಟಗಾರರಿಗೆ ಸಕಾಲಕ್ಕೆ ಮದ್ಯ ಸಿಗದ ದುಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಮದ್ಯ ಖರೀದಿಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಮಸ್ಯೆಯನ್ನು 24 ಗಂಟೆಯೊಳಗೆ ಪರಿಹರಿಸುವಂತೆ ಆಗ್ರಹಿಸಿದ ಎಸ್‌. ಗುರುಸ್ವಾಮಿ, ಒಂದು ವೇಳೆ ಸಮಸ್ಯೆಯನ್ನು ಬಗೆಹರಿಸಿದಿದ್ದರೆ ಶನಿವಾರದಿಂದಲೇ ರಾಜ್ಯಾದ್ಯಂತ ಮದ್ಯದಂಗಡಿಗಳನ್ನು ಬಂದ್ ಮಾಡಿ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ| Video: ಸಾರಾಯಿ ಅಂಗಡಿಗೆ ಸೆಗಣಿ ಎಸೆದ ಉಮಾ ಭಾರತಿ; ಕೊಟ್ಟ ಸ್ಪಷ್ಟನೆ ಹೀಗಿದೆ

Exit mobile version