Site icon Vistara News

Vijayapura tremor : ವಿಜಯಪುರದ ತಿಕೋಟಾ ತಾಲೂಕಿನ ಹಲವು ಹಳ್ಳಿಗಳ್ಳಲ್ಲಿ ಮತ್ತೆ ಕಂಪಿಸಿದ ಭೂಮಿ

Tremor at Vijayapur

#image_title

ವಿಜಯಪುರ: ಕಳೆದೆರಡು ವರ್ಷಗಳಿಂದ ವಿಜಯಪುರ ಜಿಲ್ಲೆ ಕಂಪನದ (Vijayapura tremor) ಕಾವಲಿಯಲ್ಲಿ ಕೂತಂತಿದೆ. ಯಾವಾಗ ಬೇಕೆಂದರೆ ಆಗ ಭೂಮಿ ಕಂಪಿಸಿ ಭಯ ಹುಟ್ಟಿಸುತ್ತಿದೆ. ದೊಡ್ಡ ಪ್ರಮಾಣದಲ್ಲಿ ಅದುರಿ ಭೂಮಿ ಬಾಯಿ ಬಿಡುವ ಪರಿಸ್ಥಿತಿ ನಿರ್ಮಾಣವಾಗಿಲ್ಲವಾದರೂ ಆಗಾಗ ಸಂಭವಿಸುತ್ತಿರುವ ನಡುಕದಿಂದ ನಿದ್ದೆಯಲ್ಲೂ ಜನರು ಬೆಚ್ಚಿಬೀಳುವಂತಾಗಿದೆ.

ಗುರುವಾರ ರಾತ್ರಿ ವಿಜಯಪುರ ಜಿಲ್ಲೆಯ ಮಹಾರಾಷ್ಟ್ರದ ಗಡಿಭಾಗದಲ್ಲಿ ಮತ್ತೆ ಭೂಕಂಪನದ ಅನುಭವವಾಗಿದ್ದು, ತಿಕೋಟಾ ತಾಲೂಕಿನ ಮಹಾರಾಷ್ಟ್ರದ ಗಡಿ ಭಾಗದ ಗ್ರಾಮಗಳಲ್ಲಿ ನಡುಕ ಉಂಟಾಗಿದೆ.

ತಿಕೋಟಾ ತಾಲೂಕಿನ ಘೋಣಸಗಿ, ಕಳ್ಳಕವಟಗಿ, ಹುಬನೂರ, ಟಕ್ಕಳಕಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಸಿದ್ದಾಪುರ ಕೆ…ಸೇರಿದಂತೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಕಿ ಹಾಗೂ…ಮಹಾರಾಷ್ಟ್ರದ ಬಿವರಗಿ, ಮೊರಬಗಿ ಗ್ರಾಮದ ಸುತ್ತಮುತ್ತ…ಭೂಮಿ ಕಂಪಿಸಿದ ಅನುಭವವಾಗಿದೆ.

ರಾತ್ರಿ 10.05ರ ಹೊತ್ತಿಗೆ ಹಾಗೂ ನಸುಕಿನ 1.47 AM ಭೂಕಂಪನದ ಅನುಭವವಾಗಿದ್ದು, ನಸುಕಿನ ಜಾವ 1.47ಕ್ಕೆ ಆದ ಭೂಕಂಪನ ರಿಕ್ಟರ್ ಮಾಪಕದಲ್ಲಿ 2.7ರಷ್ಟು ಪ್ರಮಾಣ ದಾಖಲಾಗಿದೆ.

ಭೂಕಂಪನದ ಕೇಂದ್ರ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಬಿವರಗಿ ಗ್ರಾಮದಲ್ಲಿದೆ ಎಂದು ಹೇಳಲಾಗಿದೆ.

ನಿರಂತರ ಕಂಪನಕ್ಕೆ ನಡುಗುತ್ತಿರುವ ಜನರು
ವಿಜಯಪುರ ಜಿಲ್ಲೆಯಲ್ಲಿ 2022ರಲ್ಲಿ ಅಕ್ಟೋಬರ್​, ನವೆಂಬರ್​ ಮತ್ತು ಡಿಸೆಂಬರ್​ ತಿಂಗಳಲ್ಲಿ ಹಲುವು ಭಾರಿ ಭೂಕಂಪನದ ಅನುಭವವಾಗಿತ್ತು. ಅಕ್ಟೋಬರ್​ 2 ರಂದು ಭಾರೀ ಸ್ಫೋಟದ ಸದ್ದಿನೊಂದಿಗೆ ಭೂಮಿಯು ಕಂಪಿಸಿತ್ತು . ಕಂಪನದ ತೀವ್ರತೆಯು ರಿಕ್ಟರ್​ ಮಾಪಕದಲ್ಲಿ 2.5ರಷ್ಟು ದಾಖಲಾಗಿತ್ತು. ವಿಜಯಪುರ ಬಳಿಯ ಅಲಿಯಾಬಾದ್​​​​ ಭೂಕಂಪನದ ಕೇಂದ್ರವಾಗಿತ್ತು.

ವಿಜಯಪುರ ನಗರದಲ್ಲಿ ಅಕ್ಟೋಬರ್​ 2 ರ ನಸುಕಿನಲ್ಲಿಯೂ 3 ಬಾರಿ ಲಘು ಭೂಕಂಪನವಾಗಿತ್ತು. ಶುಕ್ರವಾರ ಮುಂಜಾನೆ 3.45, 3.46 ಹಾಗೂ 5.56ಕ್ಕೆ ಭೂಕಂಪನ ದಾಖಲಾಗಿತ್ತು. ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ 2.0, 1.9 ಮತ್ತು 3.2 ಎಂದು ದಾಖಲಾಗಿತ್ತು. ಜನರು ನಿದ್ದೆಯಲ್ಲಿದ್ದ ಕಾರಣ ಹೆಚ್ಚಿನವರಿಗೆ ಭೂಕಂಪನದ ಅನುಭವ ಅಷ್ಟಾಗಿ ಆಗಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ವಿಜಯಪುರದಲ್ಲಿ ಪದೇಪದೆ ಭೂಕಂಪನದ ಅನುಭವ ಜನರಿಗೆ ಆಗುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ | Vijayapura Earthquake | ವಿಜಯಪುರದಲ್ಲಿ ಸರಣಿ ಭೂಕಂಪನ; ತಜ್ಞರ ಭೇಟಿ, ಭಯಗೊಳ್ಳದಂತೆ ಸಲಹೆ

Exit mobile version