ಹಾಸನ: ಜಿಲ್ಲೆಯ ವಿವಿಧೆಡೆ ಭೂಮಿ ಕಂಪಿಸಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಮಂಗಳವಾರ ಬೆಳಗ್ಗೆ 10.25ರ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಒಮ್ಮೆಲೆ ಜನರಿಗೆ ಏನಾಗುತ್ತಿದೆ ಎಂಬುದು ಗೊತ್ತಾಗಿಲ್ಲ. ಮನೆಯಲ್ಲಿ ಪಾತ್ರೆಗಳು ಸೇರಿದಂತೆ ಒಮ್ಮೆ ವಸ್ತುಗಳು ಅಲುಗಾಡಿವೆ. ಹೀಗಾಗಿ ಗಾಬರಿಯಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಬಳಿಕ ಭೂಕಂಪನ (Earthquake in Hasana) ಸಂಭವಿಸಿದೆ ಎಂಬುದು ಗೊತ್ತಾಗಿದೆ.
ಅರಕಲಗೂಡು ಪಟ್ಟಣದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಕೆಲ ಕಾಲ ಭಯದಿಂದ ಮನೆಯ ಹೊರಗಡೆಗೆ ಇದ್ದರು. ಅಲ್ಲದೆ, ತಮಗೆ ಒಂದು ಸಂದರ್ಭದಲ್ಲಿ ಏನಾಗಿದೆ ಎಂಬುದೇ ಗೊತ್ತಾಗಲಿಲ್ಲ. ಮನೆಯಲ್ಲ ನಡುಗಿದಂತೆ ಭಾಸವಾಯಿತು. ಹೀಗಾಗಿ ಭಯಗೊಂಡು ಮನೆಯವರೆಲ್ಲ ಹೊರಗೆ ಬಂದಿದ್ದೇವೆ. ವಯಸ್ಸಾದವರು ಸಹ ಮನೆಯಲ್ಲಿದ್ದರು. ಅವರನ್ನೂ ಸಹ ಹೊರಗೆ ಕರೆತಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Rain News: ಭಾರಿ ಮಳೆಗೆ ಗುಡ್ಡ ಕುಸಿದು ಮನೆಗೆ ಅಪ್ಪಳಿಸಿದ ಬಂಡೆಗಲ್ಲು; ಕರಾವಳಿಗಿಂದು ಆರೆಂಜ್ ಅಲರ್ಟ್
ಬಳಿಕ ಈ ವಿಷಯವನ್ನು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದು, ಭೂಕಂಪನ ತೀವ್ರತೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ಭಯ ಪಡುವುದು ಬೇಡ ಎಂದು ಹೇಳಿದ್ದಾರೆ.
ಸುಮಾರು ಮೂರ್ನಾಲ್ಕು ಸೆಕೆಂಡ್‌ಗಳ ಕಾಲ ಮನೆಯಲ್ಲಿ ಕಂಪನ ಆದಂತೆ ಆಯಿತು. ಪಾತ್ರೆಗಳು ಅಲುಗಾಡಿದವು. ಹೀಗಾಗಿ ನಮಗೆ ಭಯವಾಯಿತು. ಎಲ್ಲರೂ ಹೊರಗೆ ಬಂದೆವು. ಇದೇ ರೀತಿ ಅಕ್ಕಪಕ್ಕದ ನಿವಾಸಿಗಳೂ ಹೊರಗೆ ಬಂದರು. ನಮಗೆಲ್ಲರಿಗೂ ಈಗಲೂ ಭಯವಾಗುತ್ತಿದೆ ಎಂದು ಮಹಿಳೆಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.