Site icon Vistara News

Earthquake in Karnataka | ಕೊಡಗಿನಲ್ಲಿ ಒಂದೇ ದಿನ ಎರಡು ಬಾರಿ ಕಂಪಿಸಿದ ಭೂಮಿ

Earthquake in Karnataka

ಕೊಡಗು : ಮಂಗಳವಾರ (ಜೂನ್‌ 28) ಬೆಳಗ್ಗೆ ಭೂ ಕಂಪನವಾದ ಬೆನ್ನಲ್ಲೆ ಚೆಂಬು ಗ್ರಾಮದಲ್ಲಿ ಮತ್ತೆ ಭೂ ಕಂಪಿಸಿದೆ. ಒಂದೇ ದಿನ ಎರಡು ಬಾರಿ ಭೂಮಿ ಕಂಪಿಸಿದ್ದು, ಸಂಜೆ 4.40ರ ಸುಮಾರಿಗೆ ಭೂ ಕಂಪನದ ಅನುಭವ ಆಗಿದೆ ಎಂದು ಹೇಳಲಾಗಿದೆ.

ಮಂಗಳವಾರ (ಜೂನ್‌ 28) ಬೆಳಗ್ಗೆ 7.45ಕ್ಕೆ 3.4 ಸೆಕೆಂಡುಗಳ ಕಾಲ ಕಂಪನದ ಅನುಭವ ಆಗಿತ್ತು. ಕೊಡುಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿಪ್ರದೇಶವಾಗಿರುವ ಕರಿಕೆ, ಪೆರಾಜೆ, ಭಾಗಮಂಡಲ, ಮಡಿಕೇರಿ, ನಾಪೋಕ್ಲು ಸೇರಿದಂತೆ ಹಲವೆಡೆ ಭೂ ಕಂಪಿಸಿತ್ತು.

ಇದನ್ನೂ ಓದಿ | Earthquake in Karnataka | ಕೊಡಗಲ್ಲಿ ಮತ್ತೆ ಕಂಪಿಸಿದ ಭೂಮಿ: ಮನೆ ಬಿಟ್ಟು ಹೊರ ಬಂದ ಜನ

ಸಂಜೆ ವೇಳೆ ಎಷ್ಟು ಹೊತ್ತು ಭೂ ಕಂಪಿಸಿದೆ ಎನ್ನುವ ಮಾಹಿತಿ ತಿಳಿದು ಬಂದಿಲ್ಲ. ಸಂಪಾಜೆ ಮತ್ತು ಪೆರಾಜೆ ಸುತ್ತಮುತ್ತಲೂ ಕಂಪನದ ಅನುಭವ ಆಗಿದ್ದು, ಗ್ರಾಮದ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಚೆಂಬು ಗ್ರಾಮಕ್ಕೆ ವಿಪತ್ತು ನಿರ್ವಹಣಾ ತಂಡ ಭೇಟಿ ನೀಡಿದೆ. ಯಾವುದೇ ಅಪಾಯದ ಮುನ್ಸೂಚನೆ ಇಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ತಜ್ಞ ಅನನ್ಯ ವಾಸುದೇವ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ | Earthquake in Karnataka |ವಿಜಯಪುರ, ಕೊಡಗು, ಮಂಗಳೂರಿನಲ್ಲಿ ಮತ್ತೆ ಅದುರಿದ ಭೂಮಿ

Exit mobile version