ಬೆಂಗಳೂರು: ನಗರದ ಪ್ರತಿಷ್ಠಿತ ಬಿಲ್ಡರ್ ಸಂಸ್ಥೆಯಾಗಿರುವ ಮಾನ್ಯತಾ ಗ್ರೂಪ್‌ನ ಮೇಲೆ ಬುಧವಾರ ಮುಂಜಾನೆಯಿಂದಲೇ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಯುತ್ತಿದೆ (ED raid). ಬೆಂಗಳೂರಿನ ರಿಚ್ಮಂಡ್ ರೋಡ್‌ನಲ್ಲಿರುವ ಕೇಂದ್ರ ಕಚೇರಿಯೂ ಸೇರಿದಂತೆ ಹತ್ತಾರು ಕಡೆಗಳಲ್ಲಿ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಮಾನ್ಯತಾ ಪ್ರಮೋಟರ್ಸ್, ಮಾನ್ಯತಾ ಪ್ರೊಜೆಕ್ಟ್ ಪ್ರೈವೇಟ್ ಲಿಮಿಟೆಡ್, ರೆಡ್ಡಿ ವೀರಣ್ಣ ಇನ್‌ವೆಸ್ಟ್‌ಮೆಂಟ್, ರೆಡ್ಡಿ ವೀರಣ್ಣ ಕನ್‌ಸ್ಟ್ರಕ್ಷನ್, ಮಾನ್ಯತಾ ಡೆವಲಪರ್ಸ್,ಮಾನ್ಯತಾ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳ ಮೇಲೆ ದಾಳಿ ನಡೆದಿದೆ.
ಇನ್ನೋವಾ ಕಾರುಗಳಲ್ಲಿ ಆಗಮಿಸಿರುವ ಇ.ಡಿ. ಅಧಿಕಾರಿಗಳ ತಂಡ ಸಂಸ್ಥೆಯ ಮುಖ್ಯಸ್ಥರಿಗೆ ಸೇರಿದ ಸದಾಶಿವ ನಗರ ಮನೆ ಮೇಲೆಯೂ ದಾಳಿ ಮಾಡಿದೆ. ಮಾನ್ಯತಾ ಗ್ರೂಪ್ ಮಾಲೀಕರು ಸೇರಿ ಹಲವರ ವಿಚಾರಣೆ ನಡೆಯುತ್ತಿದ್ದು, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಕ್ರಮ ಹಿನ್ನಲೆ ದಾಳಿ ಪರಿಶೀಲನೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ | Xiaomi | ಇ.ಡಿ.ಯಿಂದ ಶವೊಮಿಯ 5551 ಕೋಟಿ ರೂ. ಜಪ್ತಿ, ಸಕ್ಷಮ ಪ್ರಾಧಿಕಾರ ಓಕೆ