ಬೆಂಗಳೂರು/ನವದೆಹಲಿ: ಆಟವಾಡುವ ವಯಸ್ಸಿನಲ್ಲಿ ಆ್ಯಪ್ ಡೆವಲಪ್ ಮಾಡಿದ ಬೆಂಗಳೂರು ಮೂಲದ, ಎಂಟು ವರ್ಷದ ಪೋರ ರಿಷಿ ಶಿವಪ್ರಸನ್ನಗೆ 2023ನೇ ಸಾಲಿನ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (Bal Puarskar) ದೊರೆತಿದೆ. ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಿಷಿ ಪ್ರಸನ್ನ ಸೇರಿ 11 ಬಾಲಕರಿಗೆ ಬಾಲ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಹಾಗೆಯೇ, ಈತನಿಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಶುಭ ಹಾರೈಸಿದ್ದಾರೆ.
ಮೂರು ಆ್ಯಪ್ ಅಭಿವೃದ್ಧಿ
ರಿಷಿ ಶಿವಪ್ರಸನ್ನ ಎಂಟನೇ ವಯಸ್ಸಿನಲ್ಲಿಯೇ ಮೂರು ಆ್ಯಪ್ ಅಭಿವೃದ್ಧಿಪಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಮಕ್ಕಳಿಗಾಗಿ ‘ಐ ಕ್ಯೂ ಟೆಸ್ಟ್’, ಕಂಟ್ರೀಸ್ ಆಫ್ ದಿ ವರ್ಲ್ಡ್ ಹಾಗೂ ಕೋವಿಡ್ ಹೆಲ್ಪ್‌ಲೈನ್ ಬೆಂಗಳೂರು ಎಂಬ ಆ್ಯಪ್ ಅಭಿವೃದ್ಧಿಪಡಿಸಿದ್ದಾನೆ. ಅಲ್ಲದೆ, ವಿಜ್ಞಾನದ ಕುರಿತು ಮಾಹಿತಿ ನೀಡಲು ಯುಟ್ಯೂಬ್ ಚಾನೆಲ್‌ಅನ್ನು ಕೂಡ ಮುನ್ನಡೆಸುತ್ತಿದ್ದಾನೆ. ಇದರ ಜತೆಗೆ, ಪುಸ್ತಕವೊಂದನ್ನು ಬರೆಯುತ್ತಿದ್ದಾನೆ.
ಐನ್‌ಸ್ಟೀನ್‌ಗಿಂತ ಹೆಚ್ಚಿನ ಐಕ್ಯು
ರಿಷಿ ಶಿವಪ್ರಸನ್ನನ ಬುದ್ಧಿಮತ್ತೆ (IQ) ನೊಬೆಲ್ ಪುರಸ್ಕೃತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್‌ಗಿಂತ ಜಾಸ್ತಿ ಇದೆ. ಆಲ್ಬರ್ಟ್ ಐನ್‌ಸ್ಟೀನ್ ಅವರ ಐಕ್ಯು 160 ಇತ್ತು. ಆದರೆ, ರಿಷಿ ಶಿವಪ್ರಸನ್ನ ಐಕ್ಯು 180 ಇದೆ. ಈತ ಜಗತ್ತಿನ ಅತಿ ಹಳೆಯ ಹಾಗೂ ಖ್ಯಾತ ಐಕ್ಯು ಸೊಸೈಟಿಯಾದ ಮೆನ್ಸಾ ಇಂಟರ್‌ನ್ಯಾಷನಲ್‌ನ ಸದಸ್ಯನಾಗಿದ್ದಾನೆ.
ಇದನ್ನೂ ಓದಿ: RRR Movie | ಆರ್‌ಆರ್‌ಆರ್‌ಗೆ ಮತ್ತೊಂದು ಜಾಗತಿಕ ಗರಿ, ದಿ ಚೆಲ್ಲೊ ಶೋಗೂ ಇಂಟರ್‌ನ್ಯಾಷನಲ್ ಪ್ರೆಸ್ ಅಕಾಡೆಮಿ ಪುರಸ್ಕಾರ