ಬೆಂಗಳೂರು: ಹಿರಿಯ ನಾಗರಿಕ ಮೇಲೆ ಆಗುವ ದೌರ್ಜನ್ಯವನ್ನು ತಡೆಗಟ್ಟಲು ಬೆಂಗಳೂರು ಪೊಲೀಸರು ಸಹಾಯವಾಣಿ ವ್ಯವಸ್ಥೆ ಮಾಡಿದ್ದಾರೆ. ಇನ್ನು ಮುಂದೆ ಹಿರಿಯ ನಾಗರಿಕರಿಗೆ ಯಾವುದೇ ದೌರ್ಜನ್ಯವಾದರೂ ಠಾಣೆಗೆ ಹೋಗುವ ಬದಲು ಸಹಾಯವಾಣಿಗೆ ಕರೆ ಮಾಡಿದರೆ ಸಾಕು; ಪೊಲೀಸರು ಅವರ ನೆರವಿಗೆ ಬರಲಿದ್ದಾರೆ.
ಇತ್ತೀಚಿಗೆ ವಯೋವೃದ್ಧರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಇಂದು (ಬುಧವಾರ) ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಟೋಲ್ ಫ್ರೀ ಸಹಾಯವಾಣಿಗೆ ಚಾಲನೆ ನೀಡಲಾಗಿದ್ದು, 1090 ನಂಬರಿಗೆ ಟೋಲ್ ಫ್ರೀಗೆ ಕರೆ ಮಾಡಿದರೆ ಪೊಲೀಸರು ಹಿರಿಯ ನಾಗರಿಕರ ನೆರವಿಗೆ ಧಾವಿಸಲಿದ್ದಾರೆ. ಇನ್ನು ಇದೇ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು ಸುರಕ್ಷಿತವಾಗಿರಿ ಮತ್ತು ಜಾಗೃತರಾಗಿರಿ ಎಂಬ ಪುಸ್ತಕವನ್ನು ಕೂಡ ಬಿಡುಗಡೆ ಮಾಡಲಾಗಿದೆ.
ಇದನ್ನು ಓದಿ| ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿದೆಯಾ ವರ್ಗಾವಣೆ ದಂಧೆ?
ಈ ಸಹಾಯವಾಣಿ ವೃದ್ದರಿಗೆ ಅನುಕೂಲವಾಗಲಿದ್ದು, ಮಕ್ಕಳು ಅಥವಾ ಇನ್ನಿತರರಿಂದ ಯಾವುದೇ ಸಮಸ್ಯೆ ಉಂಟಾದರೂ ಜಸ್ಟ್ ಈ ಟೋಲ್ ಫ್ರೀ ನಂಬರಿಗೆ ಕರೆ ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗಲಿದೆ. ಕಾರ್ಯಕ್ರಮದಲ್ಲಿ ಐಪಿಎಸ್ ಅಧಿಕಾರಿಗಳು ಮತ್ತು ಹಿರಿಯ ನಾಗರಿಕರು ಉಪಸ್ಥಿತರಿದ್ದರು.