ಧಾರವಾಡ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತವರ ತಂಡವು ಜೆಡಿಎಸ್‌ಗೆ ಹೋಗುವುದಿಲ್ಲ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರು ಮಂತ್ರಿ ಆಗುತ್ತಾರೆ. ಸಚಿವರಾಗುವವರ ಪಟ್ಟಿಯಲ್ಲಿ ಅವರ ಹೆಸರೇ ಮೊದಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆ (Election 2023) ಹಿನ್ನೆಲೆಯಲ್ಲಿ ಜಾರಕಿಹೊಳಿ ಬಿಜೆಪಿ ತೊರೆಯಲಿದ್ದಾರೆ ಎಂಬ ಚರ್ಚೆಯನ್ನು ತಳ್ಳಿ ಹಾಕಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಪಕ್ಷ ತೊರೆದು ಹೋಗುವುದಿಲ್ಲ. ಆ ವಿಶ್ವಾಸ ನನಗಿದೆ. ಆದಷ್ಟು ಬೇಗ ಅವರು ಸಚಿವರಾಗುತ್ತಾರೆ. ಅವರ ಭವಿಷ್ಯ ಬಿಜೆಪಿಯಲ್ಲಿಯೇ ಇದೆ. ಬಿಜೆಪಿ ಬಿಟ್ಟು ಜೆಡಿಎಸ್ ಸೇರಿದರೆ ಆ ಪಕ್ಷದಿಂದ ಏನಾಗುತ್ತದೆ ಎಂದು ಪ್ರಶ್ನೆ ಮಾಡಿದರು.
ಮುಂದೆ ಮಂತ್ರಿ ಮಂಡಲ ವಿಸ್ತರಣೆ ಆಗಲಿದ್ದು, ಅದರಲ್ಲಿ ರಮೇಶ್ ಜಾರಕಿಹೊಳಿ ಅವರು ಸಚಿವ ಆಗೇ ಆಗ್ತಾರೆ. ನಾನು ಸಚಿವ ಹುದ್ದೆಯ ಆಕಾಂಕ್ಷಿ ಅಲ್ಲ. ಮುಂದೆ ಮಂತ್ರಿ ಮಾಡುವಾಗ ಜಾರಕಿಹೊಳಿ ಅವರ ಹೆಸರೇ ಮೊದಲು ಇರಲಿದೆ ಎಂದು ಯತ್ನಾಳ್ ಹೇಳಿದರು.
ಇದನ್ನೂ ಓದಿ | ಮಂಗಳೂರು ಸ್ಫೋಟ | ಭಯೋತ್ಪಾದನೆಗೆ ಸಿದ್ದು ಕುಮ್ಮಕ್ಕು ಎಂದ ಪ್ರತಾಪ್, ಗೃಹ ಸಚಿವರ ಒಳ್ಳೆತನ ನಡೆಯಲ್ಲ ಎಂದ ಯತ್ನಾಳ್