ಮಂಡ್ಯ: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದೆ. ರಾಜ್ಯ ರಾಜಕೀಯ ಬಿರುಸುಗೊಂಡಿದೆ. ವಿವಿಧ ರಾಜಕೀಯ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು ಗೆಲುವಿಗಾಗಿ ಕಸರತ್ತು ನಡೆಸುತ್ತಿದ್ದಾರೆ. ರೋಡ್ ಶೋ, ಸಭೆ, ಸಮಾವೇಶ, ಸಮಾರಂಭಗಳನ್ನು ನಡೆಸುತ್ತಿದ್ದಾರೆ. ಈ ಮಧ್ಯೆ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ? ಯಾರು ಅಧಿಕಾರಕ್ಕೆ ಬರಲಿದ್ದಾರೆ? ಎಂಬ ಬಗ್ಗೆ ಬೆಟ್ಟಿಂಗ್ ಭರಾಟೆ ಈಗ ಮಂಡ್ಯ ಜಿಲ್ಲೆಯಲ್ಲಿ ಜೋರಾಗಿ ನಡೆಯುತ್ತಿದೆ.
ಚುನಾವಣೆಗೂ ಮುನ್ನವೇ ಜಿಲ್ಲೆಯಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿದೆ. ತಮ್ಮ ತಮ್ಮ ನಾಯಕರ ಪರವಾಗಿ ಆರು ಯುವಕರು ಬೆಟ್ಟಿಂಗ್ ಕಟ್ಟಿದ್ದಾರೆ. ಇದಕ್ಕಾಗಿ ಎಂಟು ಆಡುಗಳನ್ನು ಬೆಟ್ಟಿಂಗ್ ಕಟ್ಟಲಾಗಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಬೆಟ್ಟಿಂಗ್ ಶುರುವಾಗಿದೆ. ತಾಲೂಕಿನ ಅರಕೆರೆ ಗ್ರಾಮದ ಯುವಕರು ಈಗ ಬೆಟ್ಟಿಂಗ್ ಕಟ್ಟಿದ್ದಾರೆ. ಚುನಾವಣೆಯಲ್ಲಿ ಜೆಡಿಎಸ್‌ನಿಂದ ರವೀಂದ್ರ ಶ್ರೀಕಂಠಯ್ಯ ಸ್ಪರ್ಧೆ ಮಾಡಿದ್ದರೆ, ಕಾಂಗ್ರೆಸ್‌ನಿಂದ ರಮೇಶ್ ಬಾಬು ಬಂಡಿಸಿದ್ದೇಗೌಡ ಕಣಕ್ಕಿಳಿದಿದ್ದಾರೆ. ಇಬ್ಬರೂ ಅರಕೆರೆ ಗ್ರಾಮದವರಾಗಿದ್ದು, ಯಾರಿಗೆ ಜಯ ಎಂಬ ಚರ್ಚೆ ಬಹಳವಾಗಿಯೇ ನಡೆದಿದೆ.
ಇದನ್ನೂ ಓದಿ: Tumkur Siddaganga Mutt: ತುಮಕೂರಿನ ಸಿದ್ದಗಂಗಾ ಮಠ ಸೇರಿ ಶಾಖಾ ಮಠಗಳ ಉತ್ತರಾಧಿಕಾರಿಗಳಿಗೆ ಪಟ್ಟಾಭಿಷೇಕ
ಹೀಗಾಗಿ ತಮ್ಮ ಊರಿನಲ್ಲಿ ತಮ್ಮ ನಾಯಕರೇ ಗೆಲ್ಲುತ್ತಾರೆ ಎಂದು ಒಂದು ಗುಂಪಿನಿಂದ ಮೂರು ಮೂರು ಆಡುಗಳನ್ನು ಯುವಕರು ಬೆಟ್ಟಿಂಗ್ ಕಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಮೇಶ ಬಂಡಿಸಿದ್ದೇಗೌಡ ಪರವಾಗಿ ಗೌಡಗೆರೆ ಬೀದಿಯ ವಿಶ್ವಾಸ್, ಬಾಲು, ಉಮೇಶ್ ಮತ್ತು ಸುನಿಲ್ ಎಂಬುವವರು ಬೆಟ್ಟಿಂಗ್ ಕಟ್ಟಿದ್ದಾರೆ. ಅತ್ತ ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಅವರ ಪರವಾಗಿ ಅಭಿ, ಮಂಜು, ರೀತು ಇತರರು ಸೇರಿ 3 ಮೇಕೆಗಳನ್ನು ಪಣಕ್ಕೆ ಇಟ್ಟಿದ್ದಾರೆ. ಆಡುಗಳ ಮೌಲ್ಯ ತಲಾ 60 ಸಾವಿರದ ವರೆಗೂ ಬೆಲೆ ಬಾಳುತ್ತವೆ ಎಂದು ಹೇಳಲಾಗಿದೆ.