Site icon Vistara News

Election Malpractices: ಚಿತ್ರದುರ್ಗ, ಹಾವೇರಿ ಸೇರಿ ವಿವಿಧೆಡೆ ಅಕ್ರಮವಾಗಿ ಸಾಗಿಸುತ್ತಿದ್ದ 1.3 ಕೋಟಿ ನಗದು, 4755 ಬಲ್ಕ್‌ ಲೀಟರ್ ಮದ್ಯ ಜಪ್ತಿ

Election Malpractices cash seized in gadag

ಬೆಂಗಳೂರು: ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಚುನಾವಣಾ ಅಕ್ರಮ ತಡೆಯಲು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಪೊಲೀಸರು, ಚುನಾವಣಾ ಅಧಿಕಾರಿಗಳು ಬಿಗಿ ತಪಾಸಣೆ ಕೈಗೊಂಡಿದ್ದಾರೆ. ಈ ನಡುವೆ ಹಾವೇರಿ, ಚಿತ್ರದುರ್ಗ, ಬಳ್ಳಾರಿ, ಗದಗದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 1.3 ಕೋಟಿ ರೂಪಾಯಿ ನಗದು, 4755 ಮದ್ಯವನ್ನು ಶನಿವಾರ ಜಪ್ತಿ ಮಾಡಲಾಗಿದೆ.

ಹಾವೇರಿಯಲ್ಲಿ ಮದ್ಯ ತುಂಬಿದ ಲಾರಿ ವಶಕ್ಕೆ

liquor lorry seized in Haveri

ಹಾವೇರಿ: ಲೋಕಸಭೆ ಚುನಾವಣೆ ಹಿನ್ನೆಲೆ ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಹಾವೇರಿ ಕಸಬಾ ಡಿಪೋ ತಪಾಸಣೆ ಕೇಂದ್ರದ ಬಳಿ ಮದ್ಯ ತುಂಬಿದ ಲಾರಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜಿಪಿಎಸ್‌ ಇಲ್ಲದೆ ಲಕ್ಷಾಂತರ ಮೌಲ್ಯದ ಮದ್ಯ ಸಾಗಾಣಿಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

MH-10 Z3186 ಸಂಖ್ಯೆಯ ಟಾಟಾ ಎಕ್ಸ್ 2 ಲಾರಿ ವಶಕ್ಕೆ ಪಡೆಯಲಾಗಿದೆ. ಬೆಳಗಾವಿಯಿಂದ ಹಾವೇರಿಗೆ GPS ಡಿವೈಸ್ ಇಲ್ಲದೆ ಲಾರಿಯಲ್ಲಿ 550 ಪೆಟ್ಟಿಗೆಯಲ್ಲಿ 4755.7 ಬಲ್ಕ್ ಲೀಟರ್ ಮದ್ಯ ಸಾಗಿಸಲಾಗುತ್ತಿತ್ತು. ಹೀಗಾಗಿ ಲಾರಿಯನ್ನು ವಶಕ್ಕೆ ಪಡೆದು ವಾಹನ ಚಾಲಕ & ಡಿಸ್ಟಲರಿ ಸನ್ನದುದಾರನ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಇದನ್ನೂ ಓದಿ | Road Accident : ಕೆಳಗೆ ಬಿದ್ದವನ ಮೇಲೆ ಹರಿಯಿತು ಮೂರ್ನಾಲ್ಕು ವಾಹನಗಳು; ಛಿದ್ರ ಛಿದ್ರಗೊಂಡ ಸವಾರ

ಚಿತ್ರದುರ್ಗದ ಜೆ.ಜಿ. ಹಳ್ಳಿ ಚೆಕ್ ಪೋಸ್ಟ್ ಬಳಿ 1 ಕೋಟಿ ಸೀಜ್

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಜೆ.ಜಿ. ಹಳ್ಳಿ ಚೆಕ್ ಪೋಸ್ಟ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1 ಕೋಟಿ ರೂ.ಗಳನ್ನು ಎಸ್‌ಎಸ್‌ಟಿ ಅಧಿಕಾರಿಗಳ ತಂಡ ಸೀಜ್ ಮಾಡಿದೆ. ಜೀಪ್‌ನಲ್ಲಿ ಹಣ ಸಾಗಿಸುವ ವೇಳೆ ಹಿರಿಯೂರು ತಹಸೀಲ್ದಾರ್, ಸರ್ಕಲ್ ಇನ್‌ಸ್ಪೆಕ್ಟರ್, ಎಸ್‌ಎಸ್‌ಟಿ ಟೀಂ ತಪಾಸಣೆ ನಡೆಸಿ ವಶಕ್ಕೆ ಪಡೆದಿದೆ.

ಬಳ್ಳಾರಿಯಲಲಿ ದಾಖಲೆ ಇಲ್ಲದ 26 ಲಕ್ಷ ನಗದು ವಶ

ಬಳ್ಳಾರಿ: ನಗರದ ಬ್ರೂಸ್ ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 26 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳ್ಳಾರಿಯಿಂದ ಚೆನ್ನೈಗೆ ತೆಗೆದುಕೊಂಡು‌ ಹೋಗುತ್ತಿದ್ದಾಗ ಹಣ ಜಪ್ತಿ ಮಾಡಿದ್ದು, ಆದಾಯ ತೆರಿಗೆ ಅಧಿಕಾರಿಗಳು ಬ್ರೂಸ್‌ ಪೇಟ್ ಠಾಣೆಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಮುಂಡರಗಿ ಬಳಿ ಸಾರಿಗೆ ಬಸ್‌ನಲ್ಲಿ 3 ಲಕ್ಷ ರೂ. ಜಪ್ತಿ

ಗದಗ: ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಚೆಕ್ ಪೋಸ್ಟ್‌ನಲ್ಲಿ ನಡೆದಿದೆ.

ಇದನ್ನೂ ಓದಿ | Murder Case : ಜೋಡಿ ಕೊಲೆ; ಪರಪುರುಷನ ಮೋಹಿಸಿದ ತಾಯಿಯನ್ನು ಕೊಚ್ಚಿ ಕೊಂದ ಮಗ

ಸಾರಿಗೆ ಬಸ್‌ನಲ್ಲಿ ಹಗರಿಬೊಮ್ಮನಹಳ್ಳಿಯಿಂದ ಗದಗ ಕಡೆ ಹೋಗುತ್ತಿದ್ದ ವೀರಯ್ಯ ಎಂಬಾತನಿಂದ ಹಣ ವಶಕ್ಕೆ ಪಡೆಯಲಾಗಿದೆ. ಪೊಲೀಸರು, ಚುನಾವಣೆ ಅಧಿಕಾರಿಗಳಿಂದ ಬಸ್ ಪರಿಶೀಲನೆ‌ ವೇಳೆ ಹಣ ಪತ್ತೆಯಾಗಿದ್ದು, ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version