Site icon Vistara News

Electric shock | ವಸತಿ ಶಾಲೆಯಲ್ಲಿ ಕರೆಂಟ್‌ ಶಾಕ್‌ನಿಂದ 7 ವರ್ಷದ ಬಾಲಕ ಸಾವು; ಕುಟುಂಬಸ್ಥರ ಆಕ್ರಂದನ

Electric shock

ಮೈಸೂರು: ಇಲ್ಲಿನ ನಂಜನಗೂಡು ತಾಲೂಕಿನ ಮಹದೇವನಗರ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಕರೆಂಟ್‌ ಶಾಕ್‌ನಿಂದ (Electric shock) 7 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ. ವಸತಿ ಶಾಲೆಯ ದೈಹಿಕ ಶಿಕ್ಷಕ ಬಸವಣ್ಣ ಎಂಬುವವರ ಪುತ್ರ ಇವೀನ್ ಮೃತ ದುರ್ದೈವಿ.

Electric shock

ಇವೀನ್‌ ಶಾಲೆಯ ಭೋಜನಾಲಯದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಬಳಿ ಬಂದಿದ್ದು, ಈ ವೇಳೆ ತುಂಡಾಗಿದ್ದ ವಿದ್ಯುತ್ ತಂತಿಯನ್ನು ಮುಟ್ಟಿದ್ದಾನೆ. ಆಗ ವಿದ್ಯುತ್‌ ಪ್ರಸರಣಗೊಂಡಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

Electric shock

ಇತ್ತ ಪೋಷಕರು ಕೂಡಲೇ ಮಗನನ್ನು ನಂಜನಗೂಡಿನ ಕೃಷ್ಣ ಆಸ್ಪತ್ರೆಗೆ ಒಯ್ದರಾದರೂ ವೈದ್ಯರು ಕೈ ಚೆಲ್ಲಿದರು. ಬಳಿಕ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದ್ಯೊಲಾಯಿತಾದರೂ, ಅದಾಗಲೇ ಇವೀನ್‌ ಮೃತಪಟ್ಟಿದ್ದ. ಸ್ಥಳಕ್ಕೆ ಡಿವೈಎಸ್ಪಿ ಗೋವಿಂದರಾಜು, ಪಿಎಸ್ಐ ಆರತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Electric shock

ಬಾಲಕನ ಸಾವಿನ ಸುದ್ದಿ ಕೇಳುತ್ತಿದ್ದಂತೆ ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Road Accident | ಸಿಂಧನೂರಿನಲ್ಲಿ ಭೀಕರ ರಸ್ತೆ ಅಪಘಾತ; ಟಿಪ್ಪರ್‌ ಚಕ್ರದಡಿ ಸಿಲುಕಿ ಬೈಕ್‌ ಸವಾರರಿಬ್ಬರ ಸಾವು

Exit mobile version