ಬೆಳಗಾವಿ: ಇಲ್ಲಿನ ಮಚ್ಛೆ ಗ್ರಾಮದ ಬಳಿಯ ಆಟವಾಡುವಾಗ ಹೈಟೆನ್ಶನ್ ವೈರ್ (High tension wire) ಸ್ಪರ್ಶಿಸಿ (Electric Shock) ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ನಡೆದಿದೆ. ಗ್ರಾಮದ ಮಧುರಾ ಮೋರೆ (13) ಮೃತ ದುರ್ದೈವಿ.
ಮಧುರಾ ಆಟವಾಡುತ್ತಾ ನಿಂತಿದ್ದಾಗ ಮನೆ ಮುಂದಿನ ಹೈಟೆನ್ಷನ್ ವೈಯರ್ ತಾಗಿದ್ದು ಶಾಕ್ ಹೊಡೆದಿದೆ. ಮನೆಯ ಮುಂಭಾಗವೇ ವಿದ್ಯುತ್ ತಂತಿ ಹಾದುಹೋಗಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿ: Accident News: ರಿಪೇರಿ ಮಾಡುತ್ತಿದ್ದಾಗ ಏಕಾಏಕಿ ಕುಸಿದ ಟಿಪ್ಪರ್ ಲಾರಿ; ಸ್ಥಳದಲ್ಲೇ ಪ್ರಾಣ ಬಿಟ್ಟ ಚಾಲಕ
ಮನೆ ಕಟ್ಟದಂತೆ ನೋಟಿಸ್
ಹೈಟೆನ್ಶನ್ ವೈರ್ ಹಾದುಹೋಗಿದ್ದರಿಂದ, ಮನೆ ಕಟ್ಟದಂತೆ ಹೆಸ್ಕಾಂ ಅಧಿಕಾರಿಗಳು ಈ ಹಿಂದೆಯೇ ನೋಟಿಸ್ ಜಾರಿ ಮಾಡಿದ್ದರು. ಆದರೂ ನಿರ್ಲಕ್ಷ್ಯ ವಹಿಸಿ ಬಾಲಕಿ ಕುಟುಂಬಸ್ಥರು ಮನೆಯನ್ನು ನಿರ್ಮಿಸಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ