ಬೆಂಗಳೂರು: ಏಕಾಏಕಿ ವಿದ್ಯುತ್ ತಂತಿ ಕಟ್ ಆಗಿ ಬಿದ್ದ ಪರಿಣಾಮ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಗೆ ತಾಗಿದ್ದು ಶಾಕ್ (Electric shock ) ಹೊಡೆದಿದೆ. ಪರಿಣಾಮ ಮುಖದ ಭಾಗವು ಸೇರಿ ಶೇ. 40ರಷ್ಟು ದೇಹ ಸುಟ್ಟುಹೋಗಿದೆ. ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಸೆಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾ ಎಂದು ತಿಳಿದು ಬಂದಿದೆ.
ಇಂಟರ್‌ನೆಟ್ ಕೇಬಲ್‌ವೊಂದು ರಸ್ತೆಯಲ್ಲಿ ಬಿದ್ದಿತ್ತು. ಈ ವೇಳೆ ಅದೇ ರಸ್ತೆಯಲ್ಲಿ ಬಂದ ಕ್ಯಾಂಟರ್ ವಾಹನದ ಚಕ್ರಕ್ಕೆ ಕೇಬಲ್ ಸಿಲುಕಿಕೊಂಡಿತ್ತು. ವೇಗವಾಗಿ ಕ್ಯಾಂಟರ್ ವಾಹನ ತೆರಳುವಾಗ ಈ ಇಂಟರ್‌ನೆಟ್ ಕೇಬಲ್ ವಿದ್ಯುತ್ ಕಂಬಕ್ಕೆ ಸುತ್ತಿಕೊಂಡಿದ್ದರಿಂದ ವಿದ್ಯುತ್ ಕಂಬ ನೆಲಕ್ಕೆ ಉರುಳಿದೆ. ಈ ವೇಳೆ ರಸ್ತೆಯಲ್ಲಿ ನಡೆದು ಬರುತ್ತಿದ್ದಾಗ ಪ್ರಿಯಾ ತಲೆ ಮೇಲೆ ವಿದ್ಯುತ್ ಕಂಬ ತಂತಿಯೊಂದು ಬಿದ್ದಿದೆ.
ಹೈಟೆನ್ಷನ್ ವೈರ್ ಬಿದ್ದ ಪರಿಣಾಮ ಒಮ್ಮೆಲೆ ಶಾಕ್ ಹೊಡೆದಿದೆ. ಶೇ. 40 ರಷ್ಟು ಸುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಸದ್ಯ ಗಾಯಾಳು ವಿದ್ಯಾರ್ಥಿನಿಗೆ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಸುದ್ದಗುಂಟೆ ಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆ ಮಧ್ಯಭಾಗದಲ್ಲೇ ವಿದ್ಯುತ್ ಕಂಬ ಧರೆಗುರುಳಿದಿದ್ದು ಯಾರು ಓಡಾಡದಂತೆ ಪೊಲೀಸರು ಮನವಿ ಮಾಡಿದ್ದಾರೆ. ಕಂಬವನ್ನು ತೆರವು ಮಾಡುವ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂ ಓದಿ: Heart Attack : ಆಟೋದಲ್ಲಿ ಕುಳಿತಿದ್ದಾಗಲೇ ಎದೆನೋವು; ಕೆಳಗಿಳಿದ ಕೂಡಲೇ ಕುಸಿದು ಬಿದ್ದು ಚಾಲಕ ಸಾವು
ರಸ್ತೆಗೆ ಉರುಳಿ ಬಿತ್ತು ಬೃಹತ್ ಮರ; ತಪ್ಪಿದ ಅನಾಹುತ
ಬೆಂಗಳೂರಿನ ಬಸವನಗುಡಿಯ ಡಾ.ಓಮರ್ ಶರೀಫ್ ರಸ್ತೆಯಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಬೃಹತ್ ಗಾತ್ರದ ಮರವೊಂದು ಏಕಾಏಕಿ ನಡುರಸ್ತೆಗೆ ಬಿದ್ದಿದೆ. ಮರ ಬೀಳುವ ಸಮಯದಲ್ಲಿ ಅದೃಷ್ಟವಶಾತ್ ಯಾರು ಓಡಾಡದ ಕಾರಣಕ್ಕೆ ಯಾವುದೇ ಸಾವು-ನೋವು ಸಂಭವಿಸಿಲ್ಲ.
ವಾಹನಗಳ ಸಂಚಾರ ಕಡಿಮೆ ಇದ್ದ ಕಾರಣ ಅನಾಹುತವೊಂದು ತಪ್ಪಿದೆ. ಕಳೆದ ಎರಡು ದಿನದ ಹಿಂದಷ್ಟೇ ಮರದ ಒಂದು ಭಾಗವನ್ನು ಬಿಬಿಎಂಪಿ ಸಿಬ್ಬಂದಿ ಕತ್ತರಿಸಿದ್ದರು. ಮತ್ತೊಂದು ಭಾಗದಲ್ಲಿ ತೂಕ ಹೆಚ್ಚಿದ ಕಾರಣದಿಂದ ಮರವು ಬಿದ್ದಿದೆ. ರಸ್ತೆ ಮಧ್ಯೆ ಭಾಗದಲ್ಲೇ ಮರ ಬಿದ್ದ ಕಾರಣಕ್ಕೆ ವಾಹನ ಸಂಚಾರಕ್ಕೆ ಅಡ್ಡಿಯುನ್ನಂಟಾಯಿತು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ