Site icon Vistara News

Electric shock: ಕರೆಂಟ್‌ ಶಾಕ್‌ ಹೊಡೆದು ತುಮಕೂರಲ್ಲಿ ಇಬ್ಬರು ಬಾಲಕರು ಮೃತ್ಯು

#image_title

ತುಮಕೂರು: ಇಲ್ಲಿನ ಬೆಳಗುಂಬ ಬಳಿಯ ಗುರುಸಿದ್ದರಾಮೇಶ್ವರ ದೇವಸ್ಥಾನ ಬಳಿಯ ಮನೆಯೊಂದರ ಟೆರೇಸ್‌ ಮೇಲೆ ಆಟವಾಡುವಾಗ ಹೈಟೆನ್ಶನ್ ವೈರ್‌ ಸ್ಪರ್ಶಿಸಿ (Electric Shock) ಬಾಲಕರಿಬ್ಬರು ಮೃತಪಟ್ಟಿರುವ ಘಟನೆ ಗುರುವಾರ (ಏ.20) ನಡೆದಿದೆ. ನಿತೀಶ್ (15), ಪ್ರಜ್ವಲ್ (14) ಮೃತ ಬಾಲಕರಾಗಿದ್ದಾರೆ.

ಬಾಲಕರ ಸಾವಿನ ಸುದ್ದಿ ಕೇಳಿ ಜಮಾಯಿಸಿದ ಸ್ಥಳೀಯರು

ಬೇಸಿಗೆ ರಜೆ ಹಿನ್ನೆಲೆಯಲ್ಲಿ ನಿತೀಶ್‌ ತನ್ನ ಚಿಕ್ಕಪ್ಪನ ಮನೆಗೆ ಬಂದಿದ್ದ. ಗುರುವಾರ ಬೆಳಗ್ಗೆ 8:30ರ ಸುಮಾರಿಗೆ ತನ್ನ ಸ್ನೇಹಿತ ಪ್ರಜ್ವಲ್ ಜತೆ ಮನೆಯ ಮಹಡಿ ಮೇಲೆ ಆಟವಾಡುತ್ತಿದ್ದ. ಆಟವಾಡುವ ವೇಳೆ ಕೈ ಗೆಟುಕುವಂತಿದ್ದ ತಂತಿಯನ್ನು ಸ್ಪರ್ಶಿಸಿದ ಕಾರಣ ಸ್ಥಳದಲ್ಲೇ ಇಬ್ಬರೂ ದುರ್ಮರಣ ಹೊಂದಿದ್ದಾರೆ.

ಮನೆಯ ಮುಂಭಾಗವೇ ವಿದ್ಯುತ್ ತಂತಿ ಹಾದುಹೋಗಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಆಟವಾಡುವಾಗ ಕರೆಂಟ್‌ ವೈರ್‌ ಅನ್ನು ಮುಟ್ಟಿದ್ದು ಶಾಕ್‌ ಹೊಡೆದಿದೆ. ತುಮಕೂರು ತಾಲೂಕಿನ ಕುಂದೂರು ಗ್ರಾಮದ ವೀರಭದ್ರಯ್ಯ ಎಂಬುವವರ ಮಗ ನಿತೀಶ್‌, ಬೆಳಗುಂಬ ಗ್ರಾಮದ ಸಿದ್ದಲಿಂಗಯ್ಯ ಎಂಬುವವರ ಮಗ ಪ್ರಜ್ವಲ್ ಮೃತಪಟ್ಟಿದ್ದಾರೆ. ಈ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಆಂಬ್ಯುಲೆನ್ಸ್‌ ಮೂಲಕ ಮೃತದೇಹ ರವಾನೆ

ಸ್ಥಳಕ್ಕೆ ಕೆಇಬಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯವೇ ಇಬ್ಬರು ಬಾಲಕರ ಸಾವಿಗೆ ಕಾರಣ ಎಂದು ಕಿಡಿಕಾರಿದ್ದಾರೆ. ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಆಗಮಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: Karnataka Elections : ಕಾಂಗ್ರೆಸ್‌ ವಿರುದ್ಧ ಅಖಂಡ ದಲಿತಾಸ್ತ್ರ ಬಳಸಲು ಮುಂದಾದ ಬಿಜೆಪಿ

Exit mobile version