Site icon Vistara News

Electricity load shedding : ‌ಈ ಮಳೆಗಾಲ ಮುಗಿಯುವುದರೊಳಗೇ ಲೋಡ್‌ ಶೆಡ್ಡಿಂಗ್?

Raichur RTPS

ರಾಯಚೂರು: ರಾಜ್ಯದಲ್ಲಿ ಈ ಮಳೆಗಾಲ ಮುಗಿಯುವುದರೊಳಗೇ ವಿದ್ಯುತ್ ಲೋಡ್‌ ಶೆಡ್ಡಿಂಗ್‌ (Electricity load shedding) ಆರಂಭವಾಗಲಿದೆಯೇ? ಅಂಥದ್ದೊಂದು ಅನುಮಾನ ಈಗ ಹುಟ್ಟಿಕೊಂಡಿದೆ. ರಾಜ್ಯಕ್ಕೆ ಮುಂದಿನ ದಿನಗಳಲ್ಲಿ ಲೋಡ್ ಶೆಡ್ಡಿಂಗ್ ಭೀತಿ ಎದುರಾಗಲು ಕಾರಣ ಈಗಿನ ಮಳೆ ಅಭಾವ! ಸಮರ್ಪಕವಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಜಲ ಮೂಲಗಳ ವಿದ್ಯುತ್ (Hydel power) ಕುಂಠಿತವಾಗಿದೆ. ಇದರ ಪರಿಣಾಮ ಈಗ ಕಲ್ಲಿದ್ದಲಿನಿಂದ ವಿದ್ಯುತ್ (Coal Power) ಉತ್ಪಾದಿಸುವ ಘಟಕಗಳ ಮೇಲಾಗುತ್ತಿದೆ. ಇವುಗಳ ಮೇಲೆ ಹೆಚ್ಚಿನ ವಿದ್ಯುತ್‌ ಉತ್ಪಾದನೆಯ (Power Generation) ತೀವ್ರ ಒತ್ತಡ ಎದುರಾಗಿದೆ.

ಈ ಎಲ್ಲ ಕಾರಣಗಳೇ ಈಗ ರಾಜ್ಯದಲ್ಲಿ ಲೋಡ್‌ ಶೆಡ್ಡಿಂಗ್‌ ಭೀತಿಯನ್ನು ಹುಟ್ಟುಹಾಕಿದೆ. ಈ ಮಧ್ಯೆ ರಾಯಚೂರು ಜಿಲ್ಲೆಯಲ್ಲಿರುವ ಆರ್‌ಟಿಪಿಎಸ್ (Raichur RTPS) ವಿದ್ಯುತ್ ಸ್ಥಾವರಗಳ (RTPS Power Plant) 4 ಯುನಿಟ್‌ಗಳು ಏಕಾಏಕಿ ಬಂದ್ ಆಗಿವೆ. ಇದು ರಾಯಚೂರಿನಲ್ಲಿ ಇರುವ ವಿದ್ಯುತ್ ಉತ್ಪಾದನಾ ಘಟಕವಾಗಿದೆ. ಇಲ್ಲಿ ಒಟ್ಟು 8 ಯುನಿಟ್‌ಗಳು ಇದ್ದು, ಅವುಗಳಲ್ಲಿ 4 ಯುನಿಟ್‌ಗಳು ಬಂದ್ ಆಗುವ ಮೂಲಕ ಕಳವಳವನ್ನು ಸೃಷ್ಟಿಸಿವೆ.

ಇದನ್ನೂ ಓದಿ: Nitin Gadkari : ನಿತಿನ್‌ ಗಡ್ಕರಿಗೆ ಜೀವ ಬೆದರಿಕೆ ಹಾಕಿದವನಿಗೆ ಉಗ್ರನ ಪ್ರಚೋದನೆ?

ತಾಂತ್ರಿಕ ದೋಷ

ತಾಂತ್ರಿಕ ದೋಷದ (Technical issue) ಹಿನ್ನೆಲೆಯಲ್ಲಿ 2ನೇ ಯುನಿಟ್ ಹಾಗೂ 3ನೇ ಯುನಿಟ್ ಬಂದ್ ಆಗಿದೆ. ಈ ಮಧ್ಯದಲ್ಲಿ ಕಲ್ಲಿದ್ದಲು ಪೂರೈಸುವ ಬಂಕರ್ ಕುಸಿದ ಪರಿಣಾಮ ಒಂದನೇ ಯುನಿಟ್ ಸಂಪೂರ್ಣವಾಗಿ ಬಂದ್ ಆಗಿತ್ತು. ಹೀಗಾಗಿ ಕೇವಲ 4 ಯುನಿಟ್‌ಗಳಿಂದ ವಿದ್ಯುತ್ ಉತ್ಪಾದನೆಯನ್ನು ಮಾಡಲಾಗುತ್ತಿದೆ.

ರಾಜ್ಯದ ಒಟ್ಟು ವಿದ್ಯುತ್ ಬೇಡಿಕೆ ಸುಮಾರು 12000 ಮೆಗಾ ವ್ಯಾಟ್ ವಿದ್ಯುತ್ ಆಗಿದೆ. ಆ ಪೈಕಿ ಬಹುಪಾಲು ವಿದ್ಯುತ್ ಅನ್ನು ಆರ್‌ಟಿಪಿಎಸ್ ಘಟಕವು ಪೂರೈಸುತ್ತಿತ್ತು. ಆರ್‌ಟಿಪಿಎಸ್‌ನಿಂದ ಒಟ್ಟು 1720 ಮೆಗಾ ವ್ಯಾಟ್ ವಿದ್ಯುತ್ ಅನ್ನು ಪೂರೈಸಲಾಗುತ್ತಿತ್ತು. ಈಗ ಯುನಿಟ್‌ಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಕೇವಲ‌ 400-500 ಮೆಗಾ ವ್ಯಾಟ್ ವಿದ್ಯುತ್ ಮಾತ್ರ ಉತ್ಪಾದನೆಯಾಗುತ್ತಿದೆ. ಯುನಿಟ್‌ಗಳ ದುರಸ್ತಿ ಕಾರ್ಯಕ್ಕೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ: Indira Canteen : ಸಂಬಳ ನೀಡದ್ದಕ್ಕೆ ಇಂದಿರಾ ಕ್ಯಾಂಟೀನ್‌ಗೆ ಬೀಗ ಜಡಿದ ಸಿಬ್ಬಂದಿ!

ಕತ್ತಲೆಯಲ್ಲಿ ರಾಜ್ಯ?

ಪರಿಸ್ಥಿತಿ ಹೀಗೇ ಮುಂದುವರಿದರೆ ರಾಜ್ಯದಲ್ಲಿ ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಉತ್ಪಾದನೆಯಾಗದೇ ರಾಜ್ಯವು ಬಹುಪಾಲು ಕತ್ತಲೆಯಲ್ಲಿ ಕಳೆಯುವ ಪರಿಸ್ಥಿತಿ ಎದುರಾಗಬಹುದು ಎಂದು ಅಂದಾಜಿಸಲಾಗುತ್ತಿದೆ.

Exit mobile version