ಹಾಸನ: ಪುಂಡಾನೆ ಸೆರೆ ಕಾರ್ಯಾಚರಣೆ ಮೂರನೇ ದಿನವೂ (Elephant Attack) ಯಶಸ್ವಿಯಾಗಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಣದೂರು ಗ್ರಾಮದಲ್ಲಿ ಕಾರ್ಯಾಚರಣೆ ನಡೆದಿದೆ. ಗ್ರಾಮೀಣ ಭಾಗದಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆಯು ಸೆರೆಯಾಗಿದೆ.
ಕಾಡು ಬಿಟ್ಟು ನಾಡಿಗೆ ಬಂದು ಮನೆಯ ಬಳಿ ನಿಲ್ಲಿಸಿದ್ದ ಬೈಕ್, ಆಟೋ ಜಖಂಗೊಳಿಸುತ್ತಿತ್ತು. ರೈತರ ಬೆಳೆ ಹಾಳು ಮಾಡಿ ಉಪಟಳ ನೀಡುತ್ತಿದ್ದ ಪುಂಡಾನೆ ಸೆರೆಯಾಗಿದೆ. ಕಾಫಿ ತೋಟದೊಳಗೆ ಜತೆಯಾಗಿದ್ದ ಎರಡು ಕಾಡಾನೆಗಳನ್ನು ಬೇರ್ಪಡಿಸಿ ಮುಂದಾದರು. ವೈದ್ಯರು ಅರವಳಿಕೆ ನೀಡಲು ಹರಸಾಹಸ ಪಡಬೇಕಾಯಿತು.
ಸುಮಾರು 18 ವರ್ಷದ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಲಾಯಿತು. ಸ್ವಲ್ಪ ದೂರ ಓಡಿ ಪ್ರಜ್ಞೆತಪ್ಪಿ ಬಿದ್ದಿದೆ. ನಂತರ ಕುಮ್ಕಿ ಆನೆಗಳು, ಕಾಡಾನೆಯನ್ನು ರಸ್ತೆಗೆ ಎಳೆದು ತಂದಿದೆ. ಕ್ರೇನ್ ಮೂಲಕ ಲಾರಿಗೆ ಇಳಿಸಿ ಸ್ಥಳಾಂತರಕ್ಕೆ ಮಾಡಲಾಗಿದೆ.
ಇದನ್ನೂ ಓದಿ:Electricution death: ಮತ್ತೊಂದು ವಿದ್ಯುತ್ ದುರಂತ; ರಸ್ತೆ ದಾಟುತ್ತಿದ್ದ ಬಾಲಕ ಶಾಕ್‌ಗೆ ಬಲಿ
ಶಿರಸಿಯಲ್ಲಿ ಚಿರತೆ ಶವ ಪತ್ತೆ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಅನುಮಾನಸ್ಪಾದವಾಗಿ ಚಿರತೆಯೊಂದು ಸಾವನ್ನಪ್ಪಿದೆ. ನಾಲ್ಕು ವರ್ಷದ ಹೆಣ್ಣು ಚಿರತೆಯ ಮೃತದೇಹವು ಪತ್ತೆಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.
ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟಿದ್ದ ಚಿರತೆ ಸೆರೆ
ಮಂಡ್ಯ ತಾಲೂಕಿನ ಕನ್ನಲಿ ಗ್ರಾಮದಲ್ಲಿ ರೈತರಿಗೆ ಜೀವ ಭಯ ಹುಟ್ಟಿಸಿದ್ದ ಚಿರತೆಯು ಸೆರೆಯಾಗಿದೆ. ಕಳೆದ ಮೂರು ತಿಂಗಳಿನಿಂದ ಗ್ರಾಮದ ಕಬ್ಬಿನ ಗದ್ದೆಯಲ್ಲೇ ತನ್ನ ಮರಿಗಳೊಟ್ಟಿಗೆ ಚಿರತೆಯು ಬೀಡು ಬಿಟ್ಟಿತ್ತು.
ಕಬ್ಬು ಕಟಾವು ಮಾಡುವ ವೇಳೆ ಚಿರತೆ ಮರಿಗಳು ಸಿಕ್ಕಿದ್ದವು. ಗ್ರಾಮದ ಶ್ರೀನಿವಾಸ್ ಎಂಬುವವರ ಕಬ್ಬಿನ ಗದ್ದೆಯಲ್ಲಿ ಚಿರತೆ ತನ್ನ ಮರಿಗಳೊಂದಿಗೆ ಅಡಗಿತ್ತು. ಮೂರು ಚಿರತೆ ಮರಿಗಳ ಪೈಕಿ ಒಂದು ಮರಿಯನ್ನು ರಕ್ಷಿಸಿದ್ದರು. ಆದರೆ 2 ಮರಿ ಹಾಗೂ ಚಿರತೆ ಸಿಗದೆ ಆತಂಕ ಉಂಟಾಗಿತ್ತು. ಚಿರತೆ ಮರಿಗಳು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಸೆರೆಗೆ ಬೋನು ಇಡುವಂತೆ ಅರಣ್ಯ ಇಲಾಖೆಗೆ ಒತ್ತಾಯ ಬಂದಿದ್ದವು.
ಹೀಗಾಗಿ ಅರಣ್ಯಾಧಿಕಾರಿಗಳು ಸಿಕ್ಕ ಮರಿ ಜತೆಗೆ ಬೋನು ಇಟ್ಟಿದ್ದರು. ರಾತ್ರಿ ಮರಿಗಳನ್ನು ನೋಡಲು ಬಂದ ಚಿರತೆ ಬೋನಿಗೆ ಬಿದ್ದಿದೆ. ಸೆರೆ ಸಿಕ್ಕ ಚಿರತೆ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಮುಗಿಬಿದ್ದು, ಕುತೂಹಲದಿಂದ ವೀಕ್ಷಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ