Site icon Vistara News

Elephant Attack | ಬಣ್ಣಾರಿ ಅಮ್ಮನ್‌ ದೇವಾಲಯದಲ್ಲಿ ಆನೆ ದಾಳಿ; ಮಲಗಿದ್ದ ಲಾರಿ ಚಾಲಕ ಸಾವು

chamarajnagar incident

ಚಾಮರಾಜನಗರ: ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಬಣ್ಣಾರಿ ಅಮ್ಮನ್ ದೇವಾಲಯಲ್ಲಿ ದುರ್ಘಟನೆ ಕಾಡಾನೆ ದಾಳಿಗೆ (Elephant Attack) ಲಾರಿ ಚಾಲಕರೊಬ್ಬರು ಬಲಿಯಾಗಿದ್ದಾರೆ.

ಕರ್ನಾಟಕ-ತಮಿಳುನಾಡು ನಡುವಿನ ರಾಷ್ಟ್ರೀಯ ಹೆದ್ದಾರಿ ಸಮೀಪ ಈ ದುರ್ಘಟನೆ ಸಂಭವಿಸಿದೆ. ದೇವಾಲಯ ಬಳಿ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಲಾರಿ ಚಾಲಕ ಶ್ರೀನಿವಾಸ್ (33) ಮಲಗಿದ್ದರು. ಬೆಳಗಿನ ಜಾವದ ಸುಮಾರಿಗೆ ಕಾಡಾನೆಯೊಂದು ದೇವಾಲಯದ ಆವರಣ ಪ್ರವೇಶಿಸಿದೆ. ಈ ಸಂದರ್ಭದಲ್ಲಿ ಮಲಗಿದ್ದ ಚಾಲಕ ಶ್ರೀನಿವಾಸ್‌ ಅವರನ್ನು ಕಂಡು ದಾಳಿ ನಡೆಸಿದೆ.

ದೇವಸ್ಥಾನದ ಆವರಣದೊಳಕ್ಕೆ ಆನೆ ಬಂದಾಗ ಅದನ್ನು ಸ್ಥಳೀಯರೊಬ್ಬರು ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಅದೇ ವೇಳೆ ಆನೆ ದಾಳಿ ನಡೆಸಿದ್ದು, ವಿಡಿಯೊದಲ್ಲಿ ಸೆರೆಯಾಗಿದೆ. ದಾಳಿಯಿಂದ ಚಾಲಕ ಶ್ರೀನಿವಾಸ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ | Elephant Attack | ಕಾಡಾನೆ ದಾಳಿಗೆ ಕಾರ್ಮಿಕ ಸಾವು ಪ್ರಕರಣ: ಮೃತದೇಹವಿಟ್ಟು ಪ್ರತಿಭಟನೆ, ಪೊಲೀಸರಿಂದ ಲಾಠಿಚಾರ್ಜ್

Exit mobile version