Site icon Vistara News

Elephant attack: ಕೋಲಾರ, ಮಂಡ್ಯದಲ್ಲಿ ಪ್ರತ್ಯಕ್ಷವಾದ ಕಾಡಾನೆಗಳ ಹಿಂಡು; ತೋಟಗಳಿಗೆ ನುಗ್ಗಿ ಬೆಳೆ ಹಾನಿ

ಕಾಡಾನೆಗಳ ದಾಳಿ

#image_title

ಕೋಲಾರ/ಮಂಡ್ಯ: ಕೋಲಾರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ (Elephant Attack) ಮಿತಿಮೀರುತ್ತಿವೆ. ಆಗಾಗ ದಾಳಿ ನಡೆಸುವ ಮೂಲಕ ಬೆಳೆ ಮತ್ತು ಪ್ರಾಣ ಹಾನಿಗೆ ಕಾರಣವಾಗುತ್ತಿವೆ. ಇದೀಗ ಕೋಲಾರದ ಬಂಗಾರಪೇಟೆ ಗಡಿ ಸಾಕರಸನಹಳ್ಳಿ, ಕದರಿನತ್ತ ಸುತ್ತಮುತ್ತ ಕಾಡಾನೆಗಳ ಹಿಂಡು ಬೀಡುಬಿಟ್ಟಿವೆ.

ಸಾಕರಸನಹಳ್ಳಿಯ ಸೀತಬೈರಪ್ಪ, ಮಂಜುನಾಥ್ ಎಂಬುವವರು ಬೆಳೆದಿದ್ದ ತೆಂಗಿನ ಗಿಡ, ಬಾಳೆ ಗಿಡಗಳನ್ನು ತುಳಿದು ನಾಶ ಮಾಡಿವೆ. ಈ ಕಾಡಾನೆಗಳ ಹಿಂಡು ಗ್ರಾಮದ ಸುತ್ತಮುತ್ತ ಅಡ್ಡಾಡುತ್ತಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಸರ್ಕಾರದಿಂದ ಬೆಳೆ ಪರಿಹಾರವಿಲ್ಲದೆ, ಆನೆ ಉಪಟಳಕ್ಕೆ ಶಾಶ್ವತ ಪರಿಹಾರವೂ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ಕಾಡಾನೆ ಹಿಂಡು ಕಂಡೊಡನೆ ರೈತರಲ್ಲಿ ಆತಂಕ ಹೆಚ್ಚಾಗಿದ್ದು, ತೋಟಗಳಿಗೂ ಹೋಗಲು ಆಗದೆ ಮನೆಯಲ್ಲಿ ಕೂರುವಂತಾಗಿದೆ. ಇತ್ತ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗಲೇ ಕಾಡಾನೆ ಹಿಂಡು ಪ್ರತ್ಯಕ್ಷವಾಗಿದೆ. ರೈತರು ತಮ್ಮ ಮೊಬೈಲ್‌ನಲ್ಲಿ ಆನೆಗಳ ಓಡಾಟವನ್ನು ವಿಡಿಯೊ ಮಾಡಿದ್ದಾರೆ. ಇತ್ತ ತೋಟಗಳಿಗೆ ನುಗ್ಗಲು ಯತ್ನಿಸುತ್ತಿದ್ದ ಆನೆಗಳನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರು ಹರಸಾಹಸ ಪಡುವಂತಾಗಿದೆ.

ಇದನ್ನೂ ಓದಿ: Cheetah: ದಕ್ಷಿಣ ಆಫ್ರಿಕದಿಂದ ತಂದ ಇನ್ನೊಂದು ಚೀತಾ ಸಾವು; ಒಂದು ತಿಂಗಳಲ್ಲಿ ಎರಡನೇ ಚೀತಾ ನಿಧನ

ಮಂಡ್ಯದಲ್ಲೂ ಕಾಡಾನೆ ದಾಳಿ

ಮಂಡ್ಯದಲ್ಲೂ ಕಾಡಾನೆ ದಾಳಿ ಮುಂದುವರಿದಿದೆ. ಇಲ್ಲಿನ ಮಳವಳ್ಳಿ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ರೈತನ ಜಮೀನನ ಮೇಲೆ ಕಾಡಾನೆಗಳು ದಾಳಿ ಮಾಡಿವೆ. ಗ್ರಾಮದ ಪುಟ್ಟೇಗೌಡ ಎಂಬುವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ 40 ತೆಂಗಿನ ಸಸಿಗಳನ್ನು ನಾಶ ಮಾಡಿವೆ. ಬೆಳೆ ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ರೈತ ಪುಟ್ಟೇಗೌಡ ಮನವಿ ಮಾಡಿದ್ದಾರೆ. ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Exit mobile version