Site icon Vistara News

Elephant Attack: ಕೊಡಗಿನಲ್ಲಿ ಆನೆ ದಾಳಿಗೆ ಮತ್ತೊಬ್ಬ ಮಹಿಳೆ ಬಲಿ

Elephant Attack

ಮಡಿಕೇರಿ: ಕೊಡಗಿನಲ್ಲಿ ಆನೆ- ಮಾನವ ಸಂಘರ್ಷ ಮಂದುವರಿದಿದ್ದು, ಕಾಡಾನೆ ದಾಳಿಗೆ (Elephant Attack) ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಡಗ ಬಾಣಂಗಾಲ ಗ್ರಾಮದಲ್ಲಿ ಘಟನೆ ನಡೆದಿದೆ.

ಆಯಿಶಾ(63) ಮೃತ ಮೃತ ದುರ್ಧೈವಿ. ಮನೆ ಸಮೀಪ ವಾಕಿಂಗ್ ಮಾಡುತ್ತಿದ್ದ ಸಂದರ್ಭ ಸಲಗ ದಾಳಿ ನಡೆಸಿದೆ. ಆಯಿಶಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಳೆದ ಒಂದು ವಾರದ ಹಿಂದೆ ಕೂಡ ಆನೆ ದಾಳಿಗೆ ಟ್ರಾಕ್ಟರ್ ಚಾಲಕರೊಬ್ಬರು ಮೃತ ಪಟ್ಟಿದ್ದರು. ಇದೀಗ ಮತ್ತೆ ಆನೆ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ‌. ಕೂಡಲೇ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯುರು ಆಗ್ರಹಿಸಿದ್ದಾರೆ.

ಕೆಲವು ಕಾಡಾನೆ ತಂಡಗಳು ಕಾಫಿ ತೋಟಗಳನ್ನೇ ಬಿಡಾರ ಮಾಡಿಕೊಂಡಿವೆ. ಕಾಫಿ ತೋಟಗಳಲ್ಲಿ ಬೇಕಾದಷ್ಟು ಆಹಾರ ಹಾಗೂ ನೀರು ಇವುಗಳಿಗೆ ಸಿಗುತ್ತಿರುವುದರಿಂದ ಇವು ಕಾಡಿಗೆ ಮರಳುತ್ತಿಲ್ಲ. ಎಷ್ಟೇ ಪಟಾಕಿ ಸಿಡಿಸಿ ಗದ್ದಲ ಎಬ್ಬಿಸಿದರೂ ಹೋಗುತ್ತಿಲ್ಲ. ಇವುಗಳಿಂದಾಗಿ ಕಾಫಿ ತೋಟಗಳಿಗೆ ಹೋಗಲು ಹೆದರಿಕೆಯಾಗುತ್ತಿದೆ. ಕೂಲಿ ಮಾಡಲು ಜನ ಸಿಗುತ್ತಿಲ್ಲ ಎಂದು ಸ್ಥಳೀಯರು ಅಲವತ್ತುಕೊಂಡಿದ್ದಾರೆ.

ಹಾಸನ: ಹಾಸನ ಜಿಲ್ಲೆಯಲ್ಲಿ ಗಜ‌ ಗಲಾಟೆ ಮುಂದುವರಿದಿದ್ದು, ಕಾಡಾನೆಗಳ ಹಿಂಡಿನ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಸಕಲೇಶಪುರ ತಾಲ್ಲೂಕಿನ ದೋನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ದಾಳಿ ಮಾಡಿರುವ ಗಜಪಡೆ ಕಾಫಿ, ಶುಂಠಿ, ಅಡಿಕೆ ಗಿಡಗಳನ್ನು ನಾಶ ಮಾಡಿದೆ. ನೀರಿನ ಪೈಪ್‌ಗಳನ್ನು ಕಿತ್ತು ಪುಂಡಾನೆಗಳು ಅಟ್ಟಹಾಸ ಮೆರೆದಿವೆ. ಅಪ್ಸರ್ ಎಂಬವರ ಕಾಫಿ ತೋಟದಲ್ಲಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಕಾಫಿ ತೋಟದಲ್ಲೇ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಕಷ್ಟಪಟ್ಟು ಬೆಳೆದಿದ್ದ ಅಡಿಕೆ ಗಿಡಗಳನ್ನು ಕಾಡಾನೆಗಳು ನೆಲಸಮ ಮಾಡಿವೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಲಾಗಿದೆ.

Exit mobile version