ಹಾಸನ: ಹಾಸನ ಜಿಲ್ಲೆಯಲ್ಲಿ, ಅದರಲ್ಲೂ ಮುಖ್ಯವಾಗಿ ಸಕಲೇಶಪುರ ತಾಲೂಕಿನ ಹಲವು ಭಾಗಗಳಲ್ಲಿ ಕಾಡಾನೆಗಳ ಉಪಟಳ (Elephant attack) ಜೋರಾಗಿದೆ. ಅವುಗಳನ್ನು ಹಿಮ್ಮೆಟ್ಟಿಸಲು ಅರಣ್ಯ ಇಲಾಖೆ ಸಿಬ್ಬಂದಿ ಬಗೆಬಗೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರಾದರೂ ಕಾಡಾನೆಗಳು ಅವರನ್ನೇ ಬಿಡುತ್ತಿಲ್ಲ!
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಕೊಲ್ಲಹಳ್ಳಿ ಬಳಿ ರಸ್ತೆಗೇ ಕಾಡಾನೆ ಬಂದಿದೆ ಎಂಬ ಮಾಹಿತಿ ಆಧಾರದಲ್ಲಿ ಅಲ್ಲಿಗೆ ಹೋದ ಅರಣ್ಯ ಇಲಾಖೆ ಆರ್‌ಆರ್‌ಟಿ ಸಿಬ್ಬಂದಿಯನ್ನೇ ಒಂಟಿ ಸಲಗ ಅಟ್ಟಾಡಿಸಿದೆ.
ಮಠಸಾಗರ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಬಂದ ಕಾಡಾನೆಯನ್ನು ಹಿಮ್ಮೆಟ್ಟಿಸಲು ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿದ್ದರು. ಆದರೆ, ಪಟಾಕಿ ಸಿಡಿಯುತ್ತಿದ್ದಂತೆ ರೊಚ್ಚಿಗೆದ್ದ ಒಂಟಿ ಸಲಗ ಅವರನ್ನೇ ಓಡಿಸಿಕೊಂಡು ಬಂದಿದೆ. ಆಗ ಸಿಬ್ಬಂದಿ ಓಡಿ ತಪ್ಪಿಸಿಕೊಂಡಿದ್ದಾರೆ. ಅದರ ನಡುವೆ ಇನ್ನೊಬ್ಬ ಸಿಬ್ಬಂದಿ ಇನ್ನೊಂದು ಪಟಾಕಿ ಸಿಡಿಸಿದರು. ಈ ಶಬ್ದಕ್ಕೆ ಇನ್ನಷ್ಟು ಸಿಟ್ಟಾದ ಆನೆ ಮತ್ತು ವೇಗವಾಗಿ ಧಾವಿಸಿತು. ಅದೃಷ್ಟವಶಾತ್ ಆನೆ ದೂರದಲ್ಲಿ ಇದ್ದುದರಿಂದ ಇವರು ಬಚಾವಾದರು. ಒಂದಷ್ಟು ದೂರ ಓಡಿಬಂದ ಆನೆ ಬಳಿಕ ರಸ್ತೆಯಿಂದ ಕಾಫಿ ತೋಟದೊಳಗೆ ಪ್ರವೇಶ ಮಾಡಿತು.
ಇದನ್ನೂ ಓದಿ | Elephant Attack : ಚಾಮರಾಜನಗರದಲ್ಲಿ ಮತ್ತೆ ಕಾಡಾನೆಗಳ ದಾಳಿ; ಅಪಾರ ಬೆಳೆ ನಷ್ಟ