Site icon Vistara News

Elephant death | ವಿದ್ಯುತ್‌ ತಂತಿ ತಗುಲಿ ಕಾಡಾನೆ ಮರಿ ಸಾವು, ಜಮೀನಿನಲ್ಲೇ ಹೂತುಹಾಕಿದ ರೈತ ಅರೆಸ್ಟ್‌

Elephant exumed

ಆನೇಕಲ್‌: ಕಾಡು ಹಂದಿಗಳ ಕಾಟ ತಡೆಯಲೆಂದು ಹಾಕಿದ ವಿದ್ಯುತ್‌ ತಂತಿ ಬೇಲಿಗೆ ಆನೆ ಮರಿಯೊಂದು ಸಿಲುಕಿ ಪ್ರಾಣ ಕಳೆದುಕೊಂಡಿತ್ತು (Elephant death). ಆದರೆ, ಜಮೀನಿನ ಮಾಲೀಕನಾಗಿರುವ ರೈತ ಯಾರಿಗೂ ಗೊತ್ತಾಗದಂತೆ ಆ ಆನೆ ಮರಿಯನ್ನು ತನ್ನದೇ ಜಮೀನಿನಲ್ಲಿ ಹೂತು ಹಾಕಿದ್ದಾನೆ. ಈಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಕರ್ನಾಟಕಕ್ಕೆ ಹೊಂದಿಕೊಂಡ ತಮಿಳುನಾಡಿನ ಹೊಸೂರು ಸಮೀಪದ ಕಡೂರು ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ರೈತ ಯಲ್ಲಪ್ಪ ಎಂಬುವವರಿಗೆ ಸೇರಿದ ಜಮೀನಿಗೆ ಕಾಡು ಹಂದಿಗಳ ಕಾಟ ಜೋರಾಗಿದ್ದರಿಂದ ಅವುಗಳನ್ನು ತಡೆಯಲು ವಿದ್ಯುತ್‌ ಬೇಲಿ ಹಾಕಲಾಗಿತ್ತು.

ಬಂಧಿತ ರೈತ ಯಲ್ಲಪ್ಪ

ಮೂರ್ನಾಲ್ಕು ದಿನಗಳ ಹಿಂದೆ ಕಾಡಾನೆಗಳ ದಂಡು ಗ್ರಾಮದ ಕಡೆ ಮುಖ ಮಾಡಿತ್ತು. ಈ ವೇಳೆ ವಿದ್ಯುತ್ ತಂತಿ ತಗುಲಿ ನಾಲ್ಕು ವರ್ಷದ ಮರಿಯಾನೆ ಸಾವು ಕಂಡಿದೆ. ಯಲ್ಲಪ್ಪ ವರು ಯಾರಿಗೂ ತಿಳಿಸದೆ ಕುಟುಂಬಸ್ಥರ ಸಹಾಯದಿಂದ ಮೃತಪಟ್ಟಿದ್ದ ಆನೆ ಮರಿಯನ್ನು ಜಮೀನಿನಲ್ಲಿ ಹೂತು ಹಾಕಿದ್ದರು.

ಈ ವಿಷಯವನ್ನು ಗ್ರಾಮಸ್ಥರ ಮೂಲಕ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಜಮೀನಿನಲ್ಲಿ ಹೂತು ಹಾಕಿದ್ದ ಆನೆ ಮರಿಯನ್ನು ಜೆಸಿಬಿ ಕಾರ್ಯಾಚರಣೆ ಮೂಲಕ ಹೊರ ತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಅಧಿಕಾರಿಗಳು ಯಲ್ಲಪ್ಪನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ | Elephant Taskforce | ಕಾಡಾನೆ ಹಾವಳಿ ತಡೆಗೆ 4 ಜಿಲ್ಲೆಗಳಲ್ಲಿ ಟಾಸ್ಕ್‌ ಫೋರ್ಸ್‌ ರಚನೆಗೆ ಸರ್ಕಾರ ಆದೇಶ

Exit mobile version