Site icon Vistara News

ಹಾಸನದಲ್ಲಿ ಕಾಡಾನೆಗಳ ಹಾವಳಿ: ಮನೆ ಬಾಗಿಲಿಗೆ ಎಂಟ್ರಿ ಕೊಟ್ಟ ಗಜರಾಜ ಮಾಡಿದ್ದೇನು?

Hassan gajaraja

ಹಾಸನ : ಒಂಟಿ ಸಲಗವೊಂದು ಮನೆಯ ಬಾಗಿಲಿಗೆ ಬಂದು ಆತಂಕ ಸೃಷ್ಟಿಸಿದ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹೈದೂರು ಗ್ರಾಮದಲ್ಲಿ ನಡೆದಿದೆ.

ಇತ್ತೀಚಿಗೆ ಹಾಸನದ ಸುತ್ತಮುತ್ತ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಒಂಟಿ ಸಲಗ ಗ್ರಾಮದ ರಸ್ತೆಗಳು, ತೋಟಗಳಲ್ಲಿ ತಿರುಗಾಡುವುದರಿಂದ ಜನರು ಮನೆಗಳಿಂದ ಹೊರಬಂದು ತೋಟಗಳಲ್ಲಿ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ.

ಈಗ ಹೈದೂರು ಗ್ರಾಮದಲ್ಲೂ ಒಂಟಿ ಸಲಗದ ಉಪಟಳ ಹೆಚ್ಚಾಗಿದ್ದು, ಗ್ರಾಮದ ಹರೀಶ್ ಎಂಬುವವರ ಮನೆ ಬಾಗಿಲಿಗೆ ಕಾಡಾನೆ ಎಂಟ್ರಿ ಕೊಟ್ಟಿದ್ದು, ಮನೆಯ ಮುಂಭಾಗದಲ್ಲೆಲ್ಲ ಓಡಾಟ ನಡೆಸಿ, ಕೊಂಚ ಹೊತ್ತು ಮನೆಯ ಮುಂದೆಯೇ ನಿಂತಿದೆ. ಇನ್ನು ಬಾಗಿಲ ಮುಂದೆಯೇ ಒಂಟಿ ಸಲಗ ನಿಂತಿದ್ದನ್ನು ಕಂಡ ಮನೆಯವರು ಆತಂಕಗೊಂಡಿದ್ದಾರೆ.

ಇದನ್ನು ಓದಿ| ಕಾಡಾನೆಗಳ ನಿಯಂತ್ರಣಕ್ಕೆ ಸ್ಟೀಲ್ ವೈಯರ್ ರೋಪ್ ಬ್ಯಾರಿಕೇಡ್ ಅಳವಡಿಕೆ

ಸದ್ಯ ಕಾಡಾನೆ ಮನೆ ಮುಂದೆ ಓಡಾಟ ನಡೆಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮನೆಯ ಮುಂಭಾಗದಲ್ಲಿದ್ದ ಹೂವಿನ ಗಿಡ ತಿಂದು ಕಾಡಾನೆ ಅಲ್ಲಿಂದ ವಾಪಸ್ ಆಗಿದೆ. ಗ್ರಾಮದಲ್ಲಿ ಕಾಡಾನೆಗಳ ಓಡಾಟ ಹೆಚ್ಚಾಗಿರುವ ಕುರಿತು ಅರಣ್ಯ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version