Site icon Vistara News

Elephant attack | ಹುಲ್ಲು ಕೊಯ್ಯಲು ಹೋದ ಮಹಿಳೆಯರ ಮೇಲೆ ಕಾಡಾನೆ ದಾಳಿ: ಒಬ್ಬರು ಸ್ಥಳದಲ್ಲೇ ಮೃತ್ಯು

ಮೂಡುಗೆರೆಯಲ್ಲಿ ಆನೆ ದಾಳಿಗೆ ಮಹಿಳೆ ಬಲಿ

ಚಿಕ್ಕಮಂಗಳೂರು: ಮಲೆನಾಡಿನಲ್ಲಿ ಅದರಲ್ಲೂ ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದೆ. ಭಾನುವಾರ ಮುಂಜಾನೆ ಹುಲ್ಲು ಕೊಯ್ಯಲು ಹೋಗಿದ್ದ ಮೂವರು ಮಹಿಳೆಯರ ಮೇಲೆ ಕಾಡಾನೆಯೊಂದು (Elephant attack) ದಾಳಿ ಮಾಡಿ ಒಬ್ಬರನ್ನು ಬಲಿ ಪಡೆದುಕೊಂಡಿದೆ.

ಮೂಡಿಗೆರೆ ತಾಲೂಕಿನ ಉಲ್ಲೇಮನೆ ಕುಂದೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಶೋಭಾ (೩೫) ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಶೋಭಾ ಅವರು ಇತರ ಇಬ್ಬರೊಂದಿಗೆ ಬೆಳಗ್ಗೆ ಹುಲ್ಲು ಕೊಯ್ಯಲೆಂದು ಕಾಡಿನ ಅಂಚಿಗೆ ಹೋಗಿದ್ದರು. ಆಗ ಅಲ್ಲೇ ಅಡಗಿದಂತಿದ್ದ ಕಾಡಾನೆ ಅವರ ಮೇಲೆ ದಾಳಿ ಮಾಡಿದೆ. ಉಳಿದ ಇಬ್ಬರು ಹೇಗೋ ತಪ್ಪಿಸಿಕೊಂಡರೆ ಶೋಭಾ ಮಾತ್ರ ಆನೆಯ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡರು.

ಮೂಡಿಗೆರೆ ಭಾಗದಲ್ಲಿ ಆಗಾಗ ಕಾಡಾನೆಗಳು ಕಾಣಿಸಿಕೊಂಡು ಕೃಷಿಗೆ ಹಾನಿ ಮಾಡುವುದಲ್ಲದೆ ಜನರ ಪ್ರಾಣವನ್ನೂ ತೆಗೆಯುತ್ತಿವೆ. ಇತ್ತೀಚಿಗೆ ಕಾಡಾನೆ ಸೆರೆಗೆ ಬೃಹತ್ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಆನೆ ಕೈಗೆ ಸಿಗದೆ ವಾಪಸ್‌ ಆಗಿತ್ತು.

ಇತ್ತೀಚೆಗೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಒಬ್ಬ ವ್ಯಕ್ತಿ ಆನೆ ದಾಳಿಗೆ ಪ್ರಾಣ ಕಳೆದುಕೊಂಡಿದ್ದರು. ಆಗ ಇಡೀ ಊರಿನವರು ಪ್ರತಿಭಟನೆ ನಡೆಸಿದ್ದು, ಅಂತಿಮವಾಗಿ ಮುಖ್ಯಮಂತ್ರಿಗಳೇ ಮಧ್ಯ ಪ್ರವೇಶ ಮಾಡಬೇಕಾಯಿತು. ಆಗ ಆನೆ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡುವುದು ಎಂದು ತೀರ್ಮಾನವಾಗಿತ್ತು.

ಇದನ್ನೂ ಓದಿ | Elephant attack | ಗ್ರಾಮಸ್ಥರ ಹೋರಾಟಕ್ಕೆ ಕೊನೆಗೂ ಮಣಿದ ಸರಕಾರ, ಮಧ್ಯರಾತ್ರಿ ಬಂದ ಸಚಿವರು, ನ. 3ಕ್ಕೆ ಸಭೆ

Exit mobile version