Site icon Vistara News

ಕಬ್ಬಿನ ಲಾರಿ ಅಡ್ಡಗಟ್ಟಿದ ಆನೆ-ಆನೆಮರಿ; ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಜನ!

ಚಾಮರಾಜನಗರ: ಇಲ್ಲಿನ ತಮಿಳುನಾಡು ಗಡಿ ಆಸನೂರು ಬಳಿ ಕಬ್ಬಿನ ಲಾರಿ ಹಾಗೂ ಇತರ ವಾಹನಗಳಿಗೆ ಆನೆ ಹಾಗೂ ಅದರ ಮರಿ ಆನೆಯೊಂದು ಅಡ್ಡಗಟ್ಟಿದ್ದು, ಬಿಂದಾಸ್‌ ಆಗಿ ಕಬ್ಬನ್ನು ತಿನ್ನತೊಡಗಿದ್ದವು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.

ಒಂದು ಆನೆ ಹಾಗೂ ಅದರ ಮರಿಯೊಂದು ರಸ್ತೆ ಮಧ್ಯದಲ್ಲಿ ಕಬ್ಬಿನ ಲಾರಿಗೆ ಅಡ್ಡಗಟ್ಟಿ ಕಬ್ಬು ತಿನ್ನುತ್ತಿರುವುದು ಕಂಡುಬಂದಿದೆ. ಈ ವೇಳೆ ಪ್ರಯಾಣಿಕರು ಆನೆಯ ಬಳಿ ಹೋಗಿ ಸೆಲ್ಫಿ ತೆಗೆಯುವ ದುಸ್ಸಾಹಸವನ್ನು ಮಾಡಿದ್ದಾರೆ. ಕೆಲವರು ಆನೆಯ ಸಮೀಪಕ್ಕೆ ಹೋಗಿ ಹಾರ್ನ್‌ ಮಾಡಿದ್ದಾರೆ. ಇದರಿಂದ ಕಿರಿಕಿರಿ ಉಂಟಾಗಿ ಈ ಆನೆಗಳು ದಾಳಿ ನಡೆಸಿ ವಾಹನಗಳನ್ನು ಜಖಂ ಮಾಡಿದೆ.

ಇದನ್ನೂ ಓದಿ | Viral video: ಗುಂಡಿಯಲ್ಲಿ ಬಿದ್ದ ಆನೆ, ಮರಿಯನ್ನು ರಕ್ಷಿಸಲು ಈ ದೇವತಾ ಮನುಷ್ಯರು ಮಾಡಿದ ಸಾಹಸ ನೋಡಿ

Exit mobile version