ಆನೇಕಲ್: ಬನ್ನೇರುಘಟ್ಟ ಬನ್ನೇರುಘಟ್ಟ ಸಮೀಪ ಎಎಮ್‌ಸಿ ಎಂಜಿನಿಯರಿಂಗ್ ಕಾಲೇಜಿನ ಮೊದಲ ವರ್ಷದ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯೊಬ್ಬ ಕತ್ತು ಕೊಯ್ದುಕೊಂಡು ಆತ್ಮಹತ್ಯೆ (Student suicide) ಮಾಡಿಕೊಂಡಿದ್ದಾನೆ.
ಕೇರಳ ಮೂಲದ ವಿದ್ಯಾರ್ಥಿ ನಿತಿನ್ (೧೯) ಆತ್ಮಹತ್ಯೆ ಮಾಡಿಕೊಂಡವನು. ಈತ ಕಳೆದ ಡಿಸೆಂಬರ್ ೧ರಂದು ಮೊದಲ ವರ್ಷದ ಕೋರ್ಸ್‌ಗೆ ಅಡ್ಮಿಷನ್ ಪಡೆದಿದ್ದ. ಬುಧವಾರ ಆತನ ಶವ ಶೌಚಾಲಯದಲ್ಲಿ ಕತ್ತು ಕೊಯ್ದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈತ ತಾನೇ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿಕೊಂಡಿರುವ ಶಂಕೆ ಇದೆ. ಕ್ಯಾಂಪಸ್ ಒಳಗಿನ ಹಾಸ್ಟೆಲ್ ನಲ್ಲಿ ವಾಸವಿದ್ದ ವಿದ್ಯಾರ್ಥಿ ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬುಧವಾರ ಮಧ್ಯಾಹ್ನ ಆತ ಹಾಸ್ಟೆಲ್ ಕೊಠಡಿಯ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಆತನ ಸಹಪಾಠಿ ಬಂದು ಬಾಗಿಲು ಬಡಿದಿದ್ದ. ತೆರೆಯದೆ ಇದ್ದಾಗ ವಾರ್ಡನ್‌ಗೆ ತಿಳಿಸಿದ್ದ. ವಾರ್ಡನ್ ಹಾಗೂ ಸಿಬ್ಬಂದಿ ಬಂದು ಬಾಗಿಲು ಒಡೆದು ನೋಡಿದಾಗ ನಿತಿನ್ ಶವ ಶೌಚಾಲಯದಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ಕೊಟ್ಟ ಬನ್ನೇರುಘಟ್ಟ ಪೊಲೀಸರಿಂದ ಪರಿಶೀಲನೆ ನಡೆಸಿದ್ದಾರೆ.
ಎಂಜಿನಿಯರಿಂಗ್ ವಿದ್ಯಾಭ್ಯಾಸ ಸೇರಿಕೊಂಡ ಕೆಲವೇ ದಿನದಲ್ಲಿ ನಿತಿನ್ ಇಂಥ ಅತಿರೇಕದ ನಿರ್ಧಾರಕ್ಕೆ ಬಂದಿದ್ದೇಕೆ? ಮನೆಯಿಂದ ದೂರವಾಗಿ ಇರಬೇಕಾದ ಅವನಿಗೆ ಮನೆ ನೆನಪು ಕಾಡಿತೇ? ಕಾಲೇಜಿನಲ್ಲಿ ಏನಾದರೂ ನೋವಿನ ಘಟನೆ ನಡೆದಿದೆಯೇ? ಅವನೇನಾದರೂ ಡೆತ್ ನೋಟ್ ಬರೆದಿಟ್ಟಿದ್ದನ್ನೇ? ಮನೆಯವರಿಗೆ ಏನಾದರೂ ಹೇಳುತ್ತಿದ್ದನೇ ಎನ್ನುವ ಬಗ್ಗೆ ಮುಂದೆ ಮಾಹಿತಿ ಸಿಗಬೇಕಾಗಿದೆ.
ಇದನ್ನೂ ಓದಿ | Suicide Case | ಕೌಟುಂಬಿಕ ಕಲಹ, ಮಗನೊಂದಿಗೆ ಕೆರೆಗೆ ಹಾರಿದ ತಾಯಿ; ಬಾಲಕ ಸಾವು