Site icon Vistara News

ತಿಪ್ಪೂರ್‌ ಗೇಟ್‌ ಬಳಿ ಎಚ್‌ಡಿಕೆ ಬೆಂಗಾವಲು ವಾಹನ ಅಪಘಾತ, ಮೂವರಿಗೆ ಗಾಯ

hdk ACCIDENT

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.‌ಡಿ. ಕುಮಾರಸ್ವಾಮಿ ಅವರ ಬೆಂಗಾವಲು ವಾಹನ ಸೋಮವಾರ ರಾತ್ರಿ ಅವಘಾತಕ್ಕೆ ಒಳಗಾಗಿ ಮೂವರು ಗಾಯಗೊಂಡಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ತಿಪ್ಪೂರು ಗೇಟ್ ಬಳಿ ಘಟನೆ ನಡೆದಿದೆ.

ಕುಮಾರಸ್ವಾಮಿ ಅವರು ಸೋಮವಾರ ಮುಂಜಾನೆ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಿದ್ದರು. ವಿಮಾನದಲ್ಲಿ ತೆರಳಿದ್ದ ಅವರು ಅಲ್ಲಿ ಕಳೆದ ಹತ್ತು ದಿನಗಳ ಅವಧಿಯಲ್ಲಿ ಕೊಲೆಯಾದ ಮೂವರು ಯುವಕರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಪಕ್ಷದ ವತಿಯಿಂದ ತಲಾ ಐದು ಲಕ್ಷ ರೂ. ಪರಿಹಾರ ನೀಡಿದ್ದರು.

ರಾತ್ರಿ ಮಂಗಳೂರಿನಿಂದ ಅವರು ಆಗಮಿಸುತ್ತಿದ್ದ ವೇಳೆ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ. ರಾತ್ರಿ ಒಂದು ಗಂಟೆಯ ಹೊತ್ತಿಗೆ ಘಟನೆ ನಡೆದಿದೆ ಎನ್ನಲಾಗಿದೆ. ಡಿವೈಡರ್‌ ಮೇಲೆ ಏರಿನಿಂತ ವಾಹನದಲ್ಲಿದ್ದ ಮೂವರಿಗೆ ಗಾಯಗಳಾಗಿವೆ.

ಪೊಲೀಸ್ ಸಿಬ್ಬಂದಿಗಳಾದ ಮಹೇಶ್,ಮಂಜುನಾಥ್, ಆನಂದ್ ಹರೀಶ್ ಗೆ ಗಾಯಗಳಾಗಿದ್ದು, ಅವರನ್ನು ಆದಿಚುಂಚನಗಿರಿ BGS ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಾಹನದಲ್ಲಿ ಐವರು ಇದ್ದರು. ಅಮೃತ್ತೂರು‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version