ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಕೆಲಸ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸಲು ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕೆಲಸಗಳ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸಲು ನೂತನ ʼಕಂದಾಯ ಆಯುಕ್ತಾಲಯʼ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜನಸ್ನೇಹಿ ಆಡಳಿತ ನೀಡುವ ಉದ್ದೇಶದಿಂದ ಕಂದಾಯ ಆಯುಕ್ತಾಲಯ ರಚಿಸಲಾಗಿದೆ. ಮನೆ ಬಾಗಿಲಿಗೆ ಆಡಳಿತ ಕೊಂಡೊಯ್ಯುಲು 7 ವಿಭಾಗಗಳ ಎಲ್ಲ ಕಚೇರಿಗಳು ಹಾಗೂ 274 ಹುದ್ದೆಗಳನ್ನು ಈ (Revenue Commissionerate) ಆಯುಕ್ತಾಲಯದೊಳಗೆ ವಿಲೀನ ಮಾಡಲಾಗಿದೆ.
ಈ ಬಗ್ಗೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ ಅವರು ಆದೇಶ ಹೊರಡಿಸಿದ್ದು, ಇದರಲ್ಲಿ ರಾಜ್ಯ ಮಟ್ಟದಲ್ಲಿ ಕಂದಾಯ ಆಯುಕ್ತಾಲಯ ರಚನೆ ಹಾಗೂ ಭಾ. ಆ. ವೃಂದದ ಸೂಪರ್ ಟೈಂ ಸೇಲ್ / ಆಯ್ಕೆ ಶ್ರೇಣಿಗಿಂತ ಕಡಿಮೆ ಇಲ್ಲದ ಭಾ.ಆ.ಸೇ. ದರ್ಜೆಯ (IAS Cadre) ಕಂದಾಯ ಆಯುಕ್ತರು (ಕಂದಾಯ, ಭೂಸ್ವಾಧೀನ, ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಮತ್ತು ಸಾಮಾಜಿಕ ಭದ್ರತೆ) ಹುದ್ದೆ ಸೃಜನೆ, ಕಾರ್ಯ ಹಂಚಿಕೆ ಹಾಗೂ ಹುದ್ದೆಗಳ ನೇಮಕಾತಿ ಬಗ್ಗೆ ಮಾಹಿತಿ ನೀಡಲಾಗಿದೆ.
ಕಂದಾಯ ಆಯುಕ್ತಾಲಯದ ವಿನ್ಯಾಸ ಕಾರ್ಯವೈಖರಿ, ಸಿಬ್ಬಂದಿ ರಚನೆ ಮತ್ತು ಕೇಂದ್ರ ಸ್ಥಳ ಇವುಗಳಿಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ರೂಪುರೇಷೆಗಳನ್ನು ಸಿದ್ಧಪಡಿಸಲು ಅನುಮೋದನೆ ಪಡೆದುಕೊಂಡ ನಂತರ ರಾಜ್ಯಾದ್ಯಂತ ಕಾರ್ಯನಿರ್ವಹಿಸಲು ಅವಶ್ಯವಿರುವ ಸಂಪನ್ಮೂಲ ಸಂಗ್ರಹ, ಸಿಬ್ಬಂದಿ ವ್ಯವಸ್ಥೆ ಮತ್ತು ಯೋಜನೆಗಳ ಅನುಷ್ಠಾನದ ಮೂಲಕ ಗ್ರಾಮೀಣ ಜನರ ಜೀವನ ಮಟ್ಟವನ್ನು ಸುಧಾರಿಸಲು ಅವಶ್ಯವಿರುವ ಬೆಂಬಲ ಮತ್ತು ಪರಿವೀಕ್ಷಣೆ ಮಾಡಲು ಪ್ರತ್ಯೇಕ ಆಯುಕ್ತಾಲಯ ಸ್ಥಾಪನೆಯಿಂದ ಅನುಕೂಲವಾಗಲಿದೆ ಎಂಬುದನ್ನು ಮನಗಂಡು ಕಂದಾಯ ಆಯುಕ್ತಾಲಯವನ್ನು ಸ್ಥಾಪಿಸಲಾಗಿದೆ.
ಇದನ್ನೂ ಓದಿ | BBMP Bill Payment : ಬ್ಲ್ಯಾಕ್‌ಮೇಲ್‌ಗೆಲ್ಲ ಬಗ್ಗಲ್ಲ, ಕೆಲಸ ಮಾಡಿದವರಿಗೆ ಮಾತ್ರ ಬಿಲ್ ಪಾವತಿ: ಡಿಕೆಶಿ
ಕಂದಾಯ ಆಯುಕ್ತಾಲಯಕ್ಕೆ ವಿಲೀನವಾಗುವ ಕಚೇರಿಗಳು
1. ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯ
2. ಸಾಮಾಜಿಕ ಭದ್ರತೆ ಮತ್ತು ಪಿಂಚಣೆಗಳ ನಿರ್ದೇಶನಾಲಯ
3. ಭೂಮಿ ಉಸ್ತುವಾರಿ ಕೋಶ
4. ಕಂದಾಯ ವಿಶೇಷ ಕೋಶ
5. ಕಂದಾಯ ಗ್ರಾಮಗಳ ರಚನೆ ಕೋಶ
6. ಲೆಕ್ಕಪರಿಶೋಧನ ಶಾಖೆ
7. ಮನೆ ಬಾಡಿಗೆ ನಿಯಂತ್ರಕರ ಕಚೇರಿ
8. ಜಾರಿದಳ
ಪುಸ್ತುತ ಆಯುಕ್ತರು, ಭೂಮಾಪನ, ನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗ, ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ಆಡಳಿತ ವ್ಯಾಪ್ತಿಗೆ ಹಾಗೂ ಭೂಮಿ ಮತ್ತು ಯುಪಿಒಆರ್ ವಿಭಾಗಗಳು, ಸರ್ಕಾರದ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ, ಭೂಮಿ & ಯುಪಿಒಆರ್(UPOR) ಆಡಳಿತ ವ್ಯಾಪ್ತಿಗೆ ಬರುತ್ತಿದ್ದವು. ಇನ್ನು ಮುಂದೆ ನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗವು ಸರ್ಕಾರದ ಪ್ರಧಾನ ಕಾರ್ಯದರ್ಶಿ(ವಿವತ್ತು ನಿರ್ವಹಣೆ ಭೂಮಿ & ಯುಪಿಒಆರ್ (UPOR) ವ್ಯಾಪ್ತಿಗೆ ಹಾಗೂ ಯುಪಿಒಆರ್ ವಿಭಾಗವು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತದೆ.
ಒಟ್ಟು 274 ಹುದ್ದೆಗಳ ವಿಲೀನ
07 ವಿಭಾಗಗಳ ಎಲ್ಲಾ ಕಚೇರಿ, ಹುದ್ದೆಗಳನ್ನು ಕಂದಾಯ ಆಯುಕ್ತರ ವ್ಯಾಪ್ತಿಯೊಳಗೆ, ಅಧೀನಕ್ಕೆ ತಂದು ಕಂದಾಯ ಆಯುಕ್ತಾಲಯವನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಜಿಲ್ಲಾ ಕಂದಾಯ ಮಟ್ಟದ, ರಾಜ್ಯ ಮಟ್ಟದ ಸೇವೆಗಳು ನಿಗದಿತ ಕಾಲಮಿತಿಯಲ್ಲಿ ಲಭ್ಯವಾಗಬೇಕೆಂದು ಆಯುಕ್ತಾಲಯವನ್ನು ಸ್ಥಾಪಿಸಿ ಕಾರ್ಯಗತಗೊಳಿಸಲು ಒಟ್ಟು 274 ಹುದ್ದೆಗಳನ್ನು ವಿಲೀನಗೊಳಿಸಲು ಉದ್ದೇಶಿಸಲಾಗಿದೆ.
ಇದನ್ನೂ ಓದಿ | Gruha Lakshmi : ಗೃಹಲಕ್ಷ್ಮಿ ಕಾರ್ಯಕ್ರಮಕ್ಕೆ ಅಧಿಕಾರಿಗಳಿಗೆ ಟಾಸ್ಕ್; ತಲಾ 2000 ಮಹಿಳೆಯರನ್ನು ಕರೆತರಲು ಆದೇಶ
ಕಂದಾಯ ಆಯುಕ್ತಾಲಯ ಕುರಿತ ಪ್ರಮುಖ ಅಂಶಗಳು
- ರಾಜ್ಯ ಮಟ್ಟದಲ್ಲಿ ಈಗಾಗಲೇ ಕಂದಾಯ ಆಯುಕ್ತಾಲಯವನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರಿಗೆ ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ಸೇವೆಗಳು ನಿಗದಿತ ಕಾಲಮಿತಿಯಲ್ಲಿ ಲಭ್ಯವಾಗಬೇಕೆಂದು ಕಂದಾಯ ಆಯುಕ್ತಾಲಯವನ್ನು ಮೇಲ್ಕಂಡ ರೂಪುರೇಷೆಗಳೊಂದಿಗೆ ಸ್ಥಾಪಿಸಿ ಕಾರ್ಯಗತಗೊಳಿಸಲು ಕಂದಾಯ ಆಯುಕ್ತಾಲಯಕ್ಕೆ 07 ವಿಭಾಗಗಳಿಗೆ ಸಂಬಂಧಿಸಿದಂತೆ ಒಟ್ಟು 274 ಹುದ್ದೆಗಳನ್ನು ವಿಲೀನಗೊಳಿಸಿದೆ.
- ಕಂದಾಯ ಇಲಾಖೆಯೊಳಗೆ ಹೊಸದಾಗಿ ರಚಿಸಲಾದ ಕಂದಾಯ ಆಯುಕ್ತಾಲಯದಲ್ಲಿ ಹೊಸ ಆಯುಕ್ತರ ಹುದ್ದೆಯನ್ನು ಸೃಜಿಸಲಾಗಿದೆ. ಹೆಚ್ಚಿನ ಹುದ್ದೆಗಳನ್ನು ಕಂದಾಯ ಇಲಾಖೆಯ ಅಡಿಯಲ್ಲಿ ವಿವಿಧ ವಿಭಾಗಗಳು/ವಿಭಾಗಗಳ ಕಚೇರಿಯಿಂದ ತೆಗೆದುಕೊಳ್ಳಲಾಗಿದೆ. ಫ್ಲೈ ಯಿಂಗ್ ಸ್ಕ್ಯಾಡ್ (ಎನ್‌ಫೋರ್ಸ್ ಮೆಂಟ್ ವಿಂಗ್) ನೇರವಾಗಿ ಪ್ರಧಾನ ಕಾರ್ಯದರ್ಶಿಯ ನಿಯಂತ್ರಣದಲ್ಲಿರುತ್ತದೆ. ಆದಾಗ್ಯೂ ದಿನನಿತ್ಯದ ಕಾರ್ಯಚಟುವಟಿಕೆಗಳು ಮತ್ತು ಕಾರ್ಯಾಚರಣೆಗಳನ್ನು ಕಂದಾಯ ಆಯುಕ್ತರು ಮೇಲ್ವಿಚಾರಣೆ ಮಾಡುತ್ತಾರೆ.
- ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗವು ಸರ್ಕಾರದ ಪ್ರಧಾನ ಕಾರ್ಯದರ್ಶಿ(ವಿಪತ್ತು ನಿರ್ವಹಣೆ, ಭೂಮಿ ಯುಪಿಒಆರ್) ಇವರ ವ್ಯಾಪ್ತಿಗೆ ಹಾಗೂ ಭೂಮಿ & ಯುಪಿಒಆರ್(UPOR) ವಿಭಾಗವು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ ಇವರ ವ್ಯಾಪ್ತಿಗೆ ವಿನಿಮಯ ಮಾಡಿಕೊಳ್ಳಲಾಗಿದೆ.
- ಕಂದಾಯ ಆಯುಕ್ತಾಲಯಕ್ಕೆ ಸ್ಥಳಾಂತರಿಸುವ 07 ವಿಭಾಗಗಳ ಕಚೇರಿ/ಹುದ್ದೆಗಳನ್ನು ವಿಲೀನಗೊಳಿಸುವ, ಸ್ಥಳಾಂತರಿಸುವ ವಿಭಾಗಳು ಹಾಗೂ ಅವರುನಿರ್ವಹಿಸಬೇಕಾದ ವಿಷಯಗಳು ಮತ್ತು ಅವುಗಳಲ್ಲಿರುವ ಎಲ್ಲಾ ಹುದ್ದೆಗಳ ವಿವರಗಳನ್ನು ವಿವರವಾಗಿ ತಿಳಿಸಲಾಗಿದೆ.