ಬೆಂಗಳೂರು: ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಹಾಗೂ ವಿ ಟೆಲಿಕಾಂ ಕಂಪನಿಗಳು ತಮ್ಮ ರೀಚಾರ್ಜ್ ಯೋಜನೆಗಳ ಬೆಲೆಯಲ್ಲಿ (ಟಾರೀಫ್ ದರಪಟ್ಟಿಯನ್ನು) ಹೆಚ್ಚಳ ಮಾಡಿವೆ. ಮೂರು ಟೆಲಿಕಾಂಗಳ ಬೆಲೆ ಏರಿಕೆ ಕಂಡ ಯೋಜನೆಗಳ ಹೊಸ ದರಗಳನ್ನು ಹೋಲಿಸಿ ನೋಡಿದರೆ ನಮ್ಮ ಕಂಪನಿಯ ದರವೇ ಕಡಿಮೆ ಎಂದು ರಿಲಯನ್ಸ್ ಜಿಯೋ ಟೆಲಿಕಾಂ (Reliance Jio) ಹೇಳಿಕೊಂಡಿದೆ.
ಜಿಯೋ ಸೇರಿದಂತೆ ಏರ್‌ಟೆಲ್ ಹಾಗೂ ವಿ ಟೆಲಿಕಾಂ ಸಂಸ್ಥೆಗಳು ಸಹ ತಮ್ಮ ಯೋಜನೆಗಳ ಬೆಲೆ ಏರಿಕೆ ಮಾಡಿವೆ. ಅದಾಗ್ಯೂ, ಜಿಯೋದ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳು ಪ್ರತಿಸ್ಪರ್ಧಿಗಳಿಗಿಂತ ಶೇ. 20 ಪ್ರತಿಶತದಷ್ಟು ಕಡಿಮೆ ಬೆಲೆಯಲ್ಲಿ ಲಭ್ಯ ಇವೆ. ಹಾಗೆಯೇ ಜಿಯೋ ಸಂಸ್ಥೆಯ ಅತ್ಯಂತ ಕಡಿಮೆ ಪೋಸ್ಟ್‌ಪೇಯ್ಡ್ ಯೋಜನೆಯು ಹತ್ತಿರದ ಪ್ರತಿಸ್ಪರ್ಧಿಯ ಪೋಸ್ಟ್ ಪೇಯ್ಡ್ ಪ್ಲಾನ್‌ಗಿಂತ ಶೇ. 29% ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಈ ಕಂಪನಿ ಹೇಳಿದೆ.
ಇದನ್ನೂ ಓದಿ: New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ
ಪ್ರವೇಶ ಮಟ್ಟದ ಬಳಕೆದಾರರಿಗೆ 28 ದಿನಗಳ ಪ್ರಿಪೇಯ್ಡ್ ಯೋಜನೆಯು (2G ಬಳಕೆದಾರರು ಇಲ್ಲಿಯವರೆಗೆ) ಏರ್‌ಟೆಲ್ ಹಾಗೂ ವಿ ಟೆಲಿಕಾಂನಲ್ಲಿ 199 ರೂ. ಆಗಿದೆ. ಆದರೆ ಜಿಯೋಫೋನ್ ಅಥವಾ ಜಿಯೋಭಾರತ್ ಬಳಕೆದಾರರು 28 ದಿನಗಳವರೆಗೆ 91 ರೂ.ಗಳ ಬೆಲೆಗೆ ಯೋಜನೆಗಳನ್ನು ಪಡೆಯಬಹುದು. ಇನ್ನು ದೈನಂದಿನ 1GB ಡೇಟಾ ಪ್ರಯೋಜನದ ಮಾಸಿಕ ಪ್ಲ್ಯಾನ್ ಜಿಯೋದಲ್ಲಿ 249 ರೂ. ಗಳಿಗೆ ಲಭ್ಯ ಇದೆ. ಆದರೆ ಇದೇ ಸೌಲಭ್ಯದ ಪ್ಲ್ಯಾನ್ ಏರ್‌ಟೆಲ್ ಹಾಗೂ ವಿ ಟೆಲಿಕಾಂನಲ್ಲಿ 299 ರೂ. ಗಳ ದರದಲ್ಲಿ ಇವೆ. ಹೀಗಾಗಿ ಜಿಯೋ ಗ್ರಾಹಕರಿಗೆ ಈ ಯೋಜನೆಯಲ್ಲಿ ಸುಮಾರು 50ರೂ. ಉಳಿತಾಯ ಆದಂತೆ. ಹಾಗೆಯೇ ದಿನಕ್ಕೆ 1.5GB ಡೇಟಾ ಸೌಲಭ್ಯದ ಯೋಜನೆ ಬೆಲೆ ಜಿಯೋದಲ್ಲಿ 299 ರೂ. ಇದೆ. ಏರ್‌ಟೆಲ್ ಹಾಗೂ ವಿ ಟೆಲಿಕಾಂನಲ್ಲಿ 349 ರೂ. ಗಳು ಆಗಿದೆ. ಅದೇ ರೀತಿ ದೈನಂದಿನ 2GB ಡೇಟಾ ಪ್ರಯೋಜನದ ಪ್ರೀಪೇಯ್ಡ್ ಪ್ಲ್ಯಾನ್ ಜಿಯೋದಲ್ಲಿ 349 ರೂ. ಗಳು ಆಗಿದೆ. ಇನ್ನು ಏರ್‌ಟೆಲ್ ಹಾಗೂ ವಿ ಟೆಲಿಕಾಂನಲ್ಲಿ 2GB ಡೇಟಾ ಪ್ರಯೋಜನದ ಪ್ರೀಪೇಯ್ಡ್ ಪ್ಲ್ಯಾನ್ ಬೆಲೆಯು 379ರೂ. ಗಳು ಆಗಿದೆ. ಹಾಗೆಯೇ ಪ್ರತಿದಿನ 2.5GB ಡೇಟಾ ಸೌಲಭ್ಯದ ಮಾಸಿಕ ಪ್ಲ್ಯಾನ್ ಜಿಯೋದಲ್ಲಿ 399 ರೂ. ಗಳಿಗೆ ಲಭ್ಯ ಇದೆ. ಆದರೆ ಏರ್‌ಟೆಲ್ ಹಾಗೂ ವಿ ಟೆಲಿಕಾಂನಲ್ಲಿ 409 ರೂ. ಗಳಿಗೆ ಲಭ್ಯ ಎಂದು ಜಿಯೊ ಹೇಳಿದೆ.
ಹಾಗೆಯೇ ಪ್ರತಿದಿನ 2.5GB ಡೇಟಾ ಜತೆಗೆ ವಾರ್ಷಿಕ ವ್ಯಾಲಿಡಿಟಿ ಸೌಲಭ್ಯದ ಯೋಜನೆಯ ಹೊಸ ದರ ಜಿಯೋದಲ್ಲಿ 3599 ರೂ. ಗಳು ಆಗಿದೆ. ಇನ್ನು ಏರ್‌ಟೆಲ್ ಹಾಗೂ ವಿ ಟೆಲಿಕಾಂಗಳ 3599 ರೂ. ಬೆಲೆಯ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ವಾರ್ಷಿಕ ವ್ಯಾಲಿಡಿಟಿ ಪ್ರಯೋಜನ ಲಭ್ಯವಾದರೂ, ಪ್ರತಿದಿನ 2GB ಡೇಟಾ ಸೌಲಭ್ಯ ಸಿಗಲಿದೆ. ಈ ವಾರ್ಷಿಕ ವ್ಯಾಲಿಡಿಟಿ ಯೋಜನೆಯಲ್ಲಿ ಜಿಯೋ ಗ್ರಾಹಕರಿಗೆ ಶೇ. 20% ರಷ್ಟು ಹೆಚ್ಚುವರಿ ಡೇಟಾ ಸಿಗಲಿದೆ.
ಇದನ್ನೂ ಓದಿ: Karnataka Rain : ಮುಂದುವರಿದ ಮಳೆ ಅಬ್ಬರ; ಸಿಡಿಲು ಬಡಿದು ಹೊತ್ತಿ ಉರಿದ ಮನೆ, ಸೇತುವೆ ಮುಳುಗಡೆ
ಅದೇ ರೀತಿ ಜಿಯೋ ಟೆಲಿಕಾಂನ 30GB ಡೇಟಾ ಸೌಲಭ್ಯದ ಪೋಸ್ಟ್‌ಪೇಯ್ಡ್ ಯೋಜನೆಯ ಬೆಲೆಯು 349ರೂ.ಆಗಿದೆ. ಆದರೆ ಏರ್‌ಟೆಲ್ ಹಾಗೂ ವಿ ಟೆಲಿಕಾಂಗಳ ಆರಂಭಿಕ ಪೋಸ್ಟ್‌ಪೇಯ್ಡ್ ಯೋಜನೆಯು 449ರೂ. ಗಳ ದರದಲ್ಲಿ ಕಾಣಿಸಿಕೊಂಡಿವೆ. ಹಾಗೆಯೇ ಜಿಯೋದ 75GB ಡೇಟಾ ಸೌಲಭ್ಯದ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಬೆಲೆಯು 449 ರೂ. ಆಗಿದೆ. ಆದರೆ ಏರ್‌ಟೆಲ್ ಹಾಗೂ ವಿ ಟೆಲಿಕಾಂನ 75GB ಡೇಟಾ ಪ್ರಯೋಜನದ ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಬೆಲೆಯು 549 ರೂ. ಗಳು ಆಗಿದೆ ಎಂದು ಜಿಯೊ ಪ್ರಕಟಣೆ ತಿಳಿಸಿದೆ.