ಮಂಗಳೂರು: ನಿರಂತರ ಮಳೆಯಿಂದ ನಂದಿನಿ ನದಿ ಉಕ್ಕಿ ಹರಿದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪಂಜ ಉಳಿಯ ಗ್ರಾಮದಲ್ಲಿ ಜನರ ಬದುಕು ಅಕ್ಷರಶಃ ನರಕದಂತಾಗಿದೆ. ನದಿಗೆ ತಡೆಗೋಡೆ ಇಲ್ಲದೆ ಗ್ರಾಮಕ್ಕೆ ನೀರು ನುಗ್ಗಿದ್ದರಿಂದ ನೆರೆ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ದೋಣಿಯಲ್ಲೇ ಸಂಚಾರ ಮಾಡಬೇಕಾಗಿದೆ.
ಇನ್ನು ನದಿ ನೀರು ನುಗ್ಗಿರುವುದರಿಂದ ಸದ್ಯ ದ್ವೀಪದಂತಾಗಿರುವ ಊರಲ್ಲಿ ಮನೆ ಸೇರಲು ದೋಣಿಯೇ ಆಸರೆಯಾಗಿದೆ. ಅದೇ ರೀತಿ ಎಕರೆಗಟ್ಟಲೇ ಭತ್ತದ ಗದ್ದೆಗಳು ನೀರು ತುಂಬಿ ಲಕ್ಷಾಂತರ ಮೌಲ್ಯದ ಬೆಳೆ ಹಾನಿಯಾಗುವ ಆತಂಕವಿದೆ. ಭತ್ತದ ಗದ್ದೆ ಮುಳುಗಿದ ಹಿನ್ನೆಲೆಯಲ್ಲಿ ಮನೆ ಸೇರಲು ದೋಣಿಯಲ್ಲೇ ಸಾಗಬೇಕಾದ ಅನಿವಾರ್ಯತೆ ಇದೆ. ತಕ್ಷಣ ಸರ್ಕಾರ ಬೆಳೆ ನಷ್ಟ ಪರಿಹಾರ ಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | Rain fury: ಮುಂಗಾರು ಅಬ್ಬರಕ್ಕೆ ನಲುಗಿದ ಗುಜರಾತ್, ಮಹಾರಾಷ್ಟ್ರ, ತೆಲಂಗಾಣ; ಇನ್ನೂ ಇದೆ ಭಾರಿ ಮಳೆ