Site icon Vistara News

Evm Machine : ಡೆಮಾಲಿಷನ್‌ ವೇಳೆ ಎಂಜಿನಿಯರ್ ಮನೆಯಲ್ಲಿ ಇವಿಎಂ ಯೂನಿಟ್‌ಗಳು ಪತ್ತೆ!

EVM units

ಬೆಂಗಳೂರು ಗ್ರಾಮಾಂತರ: ಇಲ್ಲಿನ ದೊಡ್ಡಬಳ್ಳಾಪುರ ತಾಲೂಕಿನ ಮೋಪರಹಳ್ಳಿ ಗ್ರಾಮದಲ್ಲಿ ಮನೆ ಡೆಮಾಲಿಷನ್ ವೇಳೆ ಇವಿಎಂ ಕಂಟ್ರೋಲ್‌ ಯೂನಿಟ್‌ಗಳು (Evm Control Units ) ಪತ್ತೆ ಆಗಿವೆ. ದೊಡ್ಡಬಳ್ಳಾಪುರ ನಿರ್ಮಿತಿ ಕೇಂದ್ರದ ಎಂಜಿನಿಯರ್ ಶಿವಕುಮಾರ್ ಎಂಬುವವರ ಮನೆಯಲ್ಲಿ (Evm Machine) ಪತ್ತೆ ಆಗಿದೆ.

2018ರ ಚುನಾವಣೆಯಲ್ಲಿ ಬಳಸಿ ರಿಜೆಕ್ಟ್‌ ಆಗಿದ್ದ ಇವಿಎಂ ಕಂಟ್ರೋಲ್ ಯೂನಿಟ್ ಮಿಷನ್‌ಗಳು ಎನ್ನಲಾಗಿದೆ. ಅಂದಹಾಗೇ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಮನೆಯನ್ನು ಡೆಮಾಲಿಷನ್ ಮಾಡಲಾಗುತ್ತಿತ್ತು. ಈ ವೇಳೆ ಮನೆಯ ಅವಶೇಷಗಳಲ್ಲಿ ಇವಿಎಂ ಕಂಟ್ರೋಲ್‌ ಯೂನಿಟ್‌ ಪತ್ತೆ ಆಗಿವೆ. ಯೂನಿಟ್‌ಗಳು ಪತ್ತೆಯಾದ ಹಿನ್ನೆಲೆ ಸ್ಥಳಕ್ಕೆ ತಹಸೀಲ್ದಾರ್‌ ಮೋಹನ ಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಂಜಿನಿಯರ್‌ ಮನೆ ಡೆಮಾಲಿಷನ್‌ ವೇಳೆ ಇವಿಎಂ ಯೂನಿಟ್‌ಗಳು ಪತ್ತೆ

ಮನೆಯ ಅವಶೇಷದಡಿ 7 ಯೂನಿಟ್‌ಗಳು ಪತ್ತೆ ಆಗಿದ್ದು, ತಹಸೀಲ್ದಾರ್‌ ಎಲ್ಲವನ್ನೂ ವಶಕ್ಕೆ ಪಡೆದು ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ. ತಹಸೀಲ್ದಾರ್‌ ಮೋಹನ ಕುಮಾರಿ ಮುಂದಿನ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಶಿವಶಂಕರ್ ಅವರಿಗೆ ವರದಿಯನ್ನು ನೀಡಿದ್ದಾರೆ. ಸದ್ಯ, ರಿಜೆಕ್ಟ್‌ ಆಗಿರುವ ಇವಿಎಂ ಕಂಟ್ರೋಲ್‌ ಯೂನಿಟ್‌ ಮಿಷನ್‌ಗಳನ್ನು ಯಾಕಾಗಿ ಮನೆಯಲ್ಲಿ ಇರಿಸಿಕೊಂಡಿದ್ದರು ಎಂಬ ಪ್ರಶ್ನೆ ಕಾಡುತ್ತಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version