ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ವಸತಿ ಸಚಿವ ವಿ.ಸೋಮಣ್ಣಗೆ ಮತ್ತೆ ಸೋಲಿನ ರುಚಿಯನ್ನು ತೋರಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಪಾಲಿಕೆ ಸದಸ್ಯ ಡಿ.ಉಮಾಶಂಕರ್ ನೇತೃತ್ವದ ತಂಡವನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ನನ್ನ ಮುಖ್ಯಮಂತ್ರಿ ಅವಧಿಯಲ್ಲಿ ಕ್ಷೇತ್ರದಲ್ಲಿ ಅನುಮೋದನೆ ದೊರೆತಿರುವ ಕಾಮಗಾರಿಗಳು ನಡೆಯದಂತೆ ಅಡ್ಡಗಾಲು ಹಾಕಿ ಸೋಮಣ್ಣ ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎಂ.ಕೃಷ್ಣಪ್ಪ ಅವರು ವಸತಿ ಸಚಿವರಾಗಿದ್ದಾಗ ಒಂದು ಲಕ್ಷ ಮನೆಗಳನ್ನು ಬಡವರಿಗೆ ನೀಡಲು ಯೋಜನೆ ಮಾಡಿದ್ದೆವು. 50 ಸಾವಿರ ಮನೆಗಳಿಗೂ ಟೆಂಡರ್ ಕರೆದು ಜಮೀನು ಕೂಡ ಖರೀದಿ ಮಾಡಿದ್ದೆವು. ಆದರೆ ಸೋಮಣ್ಣ ವಸತಿ ಸಚಿವ ಆದ ನಂತರ ಸಿದ್ದರಾಮಯ್ಯ ಮತ್ತು ಕೃಷ್ಣಪ್ಪನಿಗೆ ಹೆಸರು ಬರುತ್ತದೆ ಎಂದು ಅದನ್ನು ನಿಲ್ಲಿಸಿಬಿಟ್ಟರು ಎಂದು ಹೇಳಿದ ಅವರು, ಇಲ್ಲಿ ಸೇರಿರುವ ಜನಸ್ತೋಮವೇ ಮುಂದಿನ ಚುನಾವಣೆಯ ಗೆಲುವಿನ ಫಲಿತಾಂಶವನ್ನು ತೋರಿಸುತ್ತದೆ. ಬರಿ ಸುಳ್ಳು ಹೇಳಿಕೊಂಡು ಜನರನ್ನು ವಂಚಿಸುತ್ತಿರುವ ಸೋಮಣ್ಣಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಹರಿಹಾಯ್ದರು.
ಇದನ್ನೂ ಓದಿ | CM Bommai | ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳ ಉದ್ಯೋಗಕ್ಕಾಗಿ 10 ಲಕ್ಷ ರೂ. ಸ್ಕೀಮ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ