ಚಿಕ್ಕೋಡಿ: ʻʻರಾಜ್ಯದಲ್ಲಿ ಸರ್ಕಾರ ನಡೆಯುತ್ತಿಲ್ಲ. ತಳ್ಳುತ್ತಿದ್ದೇವೆ ಮ್ಯಾನೇಜ್ ಮಾಡ್ತಿದ್ದೇವೆʼ ಎಂಬ ಸಚಿವ ಮಾಧುಸ್ವಾಮಿ ಅವರ ಹೇಳಿಕೆಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ತೇಪೆ ಹಚ್ಚಲು ಯತ್ನಿಸಿದ್ದಾರೆ. ಅವರ ಹೇಳಿಕೆಯನ್ನು ಅಲ್ಲಗಳೆಯದೆಯೇ ಅದರ ಹಿಂದಿನ ಅರ್ಥದ ವಿಶ್ಲೇಷಣೆಯಾಗಲಿ ಎಂದಿದ್ದಾರೆ.
ಅಥಣಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮಾಧು ಸ್ವಾಮಿ ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೋ ಅದನ್ನು ಮೊದಲು ತಿಳಿದುಕೊಳ್ಳಬೇಕು ಎಂದರು.
ನಮ್ಮ ಸರಕಾರ ಬಂದು ಮೂರು ವರ್ಷವಾಯಿತು. ಸರ್ಕಾರ ಬಂದ ಹೊಸ್ತಿಲಲ್ಲೆ ಅತಿವೃಷ್ಟಿ ಆಯ್ತ, ಅನಾವೃಷ್ಟಿ ಆಯಿತು. ಆದಾದ ಬಳಿಕ ಎರಡು ವರ್ಷ ಕೊರೊನಾ ಬಂತು. ಆರ್ಥಿಕವಾಗಿ ಬಹಳಷ್ಟು ಕಷ್ಟದಲ್ಲಿ ಸರ್ಕಾರ ನಡೆಸಿಕೊಂಡು ಬಂದಿದ್ದು ನಾಡಿನ ಜನರಿಗೂ ಗೊತ್ತಿದೆ. ಹೀಗಾಗಿ ಮಾಧುಸ್ವಾಮಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ನಾವು ತಿಳಿದುಕೊಂಡು ಮಾತನಾಡುವುದು ಉತ್ತಮ ಎಂದರು ಸವದಿ.
ʻʻಮಾಧುಸ್ವಾಮಿ ಕಾನೂನು ಸಚಿವರಾಗಿದ್ದಾರೆ. ರಾಜಕೀಯದ ಅರಿವು, ಅನುಭವ ಅವರಿಗಿದೆ. ಯಾವುದೇ ಒಂದು ತರ್ಕವಿಲ್ಲದೆ ಅವರು ಮಾತನಾಡುವುದಿಲ್ಲ. ಯಾವುದೇ ಸಂದರ್ಭ ಮತ್ತು ಸನ್ನಿವೇಶ ನೋಡಿ ಮಾತಾಡಿರ್ತಾರೆ, ಅದನ್ನು ಅಪಾರ್ಥ ಮಾಡಿಕೊಳ್ಳುವುದು ಬೇಡʼʼ ಎಂದರು ಮಾಜಿ ಡಿಸಿಎಂ ಸವದಿ.
Audio Viral | ಸರ್ಕಾರ ನಡೀತಾ ಇಲ್ಲ, ಕಾಲ ತಳ್ತಾ ಇದ್ದೀವಿ ಅಷ್ಟೆ: ಮುಜುಗರ ತಂದ ಸಚಿವ ಮಾಧುಸ್ವಾಮಿ ಮಾತು