Site icon Vistara News

Excise Department: ಮದ್ಯದ ಭದ್ರತಾ ಚೀಟಿ ವೆಚ್ಚದ ಆದೇಶ ವಾಪಸ್

liquor bottles

#image_title

ಬೆಂಗಳೂರು: ಮದ್ಯದ ಬಾಟಲ್‌ಗಳ ಮುಚ್ಚಳದ ಮೇಲೆ ಅಂಟಿಸುವ ಭದ್ರತಾ ಚೀಟಿ (ಇಎಎಲ್‌) ವೆಚ್ಚವನ್ನು ಮದ್ಯ ತಯಾರಕರ ಬದಲಿಗೆ ಗ್ರಾಹಕರಿಗೆ ವರ್ಗಾಯಿಸುವ ಆದೇಶವನ್ನು ವಾಪಸ್ ಪಡೆಯಲಾಗಿದೆ. ಈ ಬಗ್ಗೆ ಅಬಕಾರಿ ಇಲಾಖೆ ಆದೇಶ (Excise Department) ಹೊರಡಿಸಿದೆ.

ಈ ಹಿಂದೆ ಭದ್ರತಾ ಚೀಟಿ ವೆಚ್ಚ ಸೇರಿ ಮದ್ಯದ ಬಾಟಲ್‌ ಮೇಲೆ ಎಂಆರ್‌ಪಿ ದರ ನಿಗದಿಯಾಗುತ್ತಿತ್ತು. ಮದ್ಯ ತಯಾರಕರೇ ಭದ್ರತಾ ಚೀಟಿ ವೆಚ್ಚ ಭರಿಸಬೇಕಿತ್ತು. ಆದರೆ, ಈ ವೆಚ್ಚವನ್ನು ಮದ್ಯದ ಬಾಟಲಿಯ ಎಂಆರ್‌ಪಿಯಿಂದ ಹೊರತುಪಡಿಸಿ ಮೇ 22ರಂದು ಆದೇಶ ಹೊರಡಿಸಲಾಗಿತ್ತು. ಇದರಿಂದ ಪ್ರತಿ ಮದ್ಯದ ಬಾಟಲ್‌ ಮೇಲೆ 31.74 ಪೈಸೆಯನ್ನು ಗ್ರಾಹಕರು ಹೆಚ್ಚುವರಿ ಪಾವತಿಸಬೇಕಿತ್ತು.

ಇದನ್ನೂ ಓದಿ | Street Dogs Survey: ಡ್ರೋನ್‌ನಲ್ಲೇ ಬೀದಿ ನಾಯಿಗಳ ಗಣತಿ; ಮೈಕ್ರೋ ಚಿಪ್‌ ಅಳವಡಿಕೆಗೆ ಪಾಲಿಕೆ ಸಜ್ಜು

ಇಎಎಲ್ ವೆಚ್ಚವನ್ನು ಮದ್ಯ ತಯಾರಕರಿಂದ ಗ್ರಾಹಕರಿಗೆ ವರ್ಗಾಯಿಸಿರುವುದರ ಹಿಂದೆ ಅವ್ಯವಹಾರ ನಡೆದಿದೆ ಎಂದು ಆರೋಪಗಳು ಕೇಳಿಬಂದಿದ್ದರಿಂದ ಇಎಎಲ್ ವೆಚ್ಚಕ್ಕೆ ಸಂಬಂಧಿಸಿದ ಆದೇಶವನ್ನು ಅಬಕಾರಿ ಇಲಾಖೆ ಹಿಂಪಡೆದಿದೆ.

Exit mobile version