Site icon Vistara News

Online fraud : ಆನ್‌ಲೈನ್‌ ವಂಚನೆ ಜಾಲಕ್ಕೆ ಪೊಲೀಸರ ಬಲೆ, 70 ಜನ ವಶಕ್ಕೆ

Exclusive

ಬೆಂಗಳೂರು : ಆನ್‌ಲೈನ್‌ ಮೂಲಕ ವಂಚನೆ ಮಾಡುತ್ತಿದ್ದ ಕಂಪನಿಗಳ ಮೇಲೆ ಗುರುವಾರ (ಜು.೭) ತಡರಾತ್ರಿ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದಾರೆ.

ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಸೆನ್ ಠಾಣೆಯ ಪೊಲೀಸರು, ಮಹದೇವಪುರ ಹಾಗೂ ವೈಟ್‌ ಫೀಲ್ಡ್‌ ಠಾಣೆಯ ಪೊಲೀಸರೊಂದಿಗೆ ಸೇರಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಸಾಯಿಬಾಬ ಆಸ್ಪತ್ರೆ ಬಳಿಯಿರುವ ಕಟ್ಟಡವೊಂದರ ಮೇಲೆ ದಾಳಿ ನಡೆಸಿ 60ರಿಂದ 70 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | ಗಾಣಗಾಪುರ ದೇವಾಲಯದಲ್ಲಿ ನಕಲಿ ವೆಬ್‌ಸೈಟ್‌ ರಚಿಸಿ ವಂಚನೆ ಮಾಡಿದ್ದ ಅರ್ಚಕರಿಗೆ ನಿರೀಕ್ಷಣಾ ಜಾಮೀನು

ಇಲ್ಲಿ ಕಾರ್ಯನಿರ್ವಹಿಸುತ್ತಿದ್ದವರು ಸಾರ್ವಜನಿಕರಿಗೆ ಕರೆ ಮಾಡಿ, ಎಸ್‌ಎಂಎಸ್ ಹಾಗೂ ಲಿಂಕ್ ಕಳಿಸುವ ಮೂಲಕ ವಂಚನೆ ಮಾಡುತ್ತಿದ್ದರು ಎನ್ನಲಾಗಿದೆ. ಒಟಿಪಿಗಳನ್ನು ಪಡೆದು ಸಾರ್ವಜನಿಕರ ಹಣಕ್ಕೆ ವಂಚಕರು ಕನ್ನ ಹಾಕುತ್ತಿದ್ದರು. ಅಲ್ಲದೆ ಬ್ಯಾಂಕ್‌ ಹಾಗೂ ಆರ್ಥಿಕ ವ್ಯವಹಾರಗಳ ಅಧಿಕಾರಿ ಮತ್ತು ಸಿಬ್ಬಂದಿ ಸೋಗಿನಲ್ಲಿ ಆರೋಪಿಗಳು ವಂಚಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಸೂಕ್ತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ.

ಸಿಲಿಕಾನ್‌ ಸಿಟಿ ಅಷ್ಟೇ ಅಲ್ಲದೇ ವಂಚಕರಿಗೆ ರಾಜ್ಯ, ಹೊರರಾಜ್ಯ, ವಿದೇಶಗಳ ಸಂಪರ್ಕ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸದ್ಯ ತಡರಾತ್ರಿ ಶೋಧ ನಡೆಸಿರುವ ಪೊಲೀಸರು ವಂಚನೆ ಮಾಡಲು ಬಳಸುತ್ತಿದ್ದ ತಾಂತ್ರಿಕ ವಸ್ತುಗಳು ಮತ್ತು ಕಂಪ್ಯೂಟರ್, ಮೊಬೈಲ್ ಹಾಗೂ ಮಹತ್ವದ ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆ. ಸಂಸ್ಥೆಯ ಒಡೆತನ ಮತ್ತಿತರ ವಿಚಾರಗಳ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ | Good news: ಬ್ಯಾಂಕ್‌ಗಳಲ್ಲಿ 100 ಕೋಟಿ ರೂ.ಗೂ ಹೆಚ್ಚಿನ ವಂಚನೆಯ ಪ್ರಕರಣಗಳ ಸಂಖ್ಯೆ ಇಳಿಕೆ

Exit mobile version