Site icon Vistara News

Fact Check: ಹಿಂದುಗಳಿಂದ ಸರಕು ಖರೀದಿಸಬೇಡಿ ಎಂದು ಬೆಂಗಳೂರಲ್ಲಿ ಮುಸ್ಲಿಮ್ ವ್ಯಕ್ತಿ ಹೇಳಿದ್ದು ನಿಜವೇ?

Fact Check

ಬೆಂಗಳೂರು, ಕರ್ನಾಟಕ: ಹಿಂದುಗಳಿಂದ ಸರಕುಗಳನ್ನು (Boycott) ಖರೀದಿಸದಂತೆ ಮುಸ್ಲಿಮ್ ಧರ್ಮದ ವ್ಯಕ್ತಿಯೊಬ್ಬರು ಬೆಂಗಳೂರಲ್ಲಿ ಭಾಷಣ ಮಾಡಿದ್ದಾರೆಂಬ ಎಂಬ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು(Video Viral). ಆದರೆ, ಕರ್ನಾಟಕ ಪೊಲೀಸರ ಪ್ರಕಾರ ಈ ಆ ವಿಡಿಯೋ ಫೇಕ್ ಆಗಿದ್ದು, ರಾಜಸ್ಥಾನದಲ್ಲಿನ ವಿಡಿಯೋವನ್ನು ಬೆಂಗಳೂರಲ್ಲಾದ ವಿಡಿಯೋ ಎಂದು ಬಿಂಬಿಸಿ ಷೇರ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ವಿಡಿಯೋದ ಅಸಲಿಯತ್ತನ್ನು (Fact Check) ಕರ್ನಾಟಕ ಪೊಲೀಸರು ಪತ್ತೆ ಹಚ್ಚಿದ್ದಾರೆ ಮತ್ತು ಇದೊಂದು ಫೇಕ್ ವಿಡಿಯೋ ಆಗಿದ್ದು, ಷೇರ್ ಮಾಡದಂತೆ ಸೂಚಿಸಿದ್ದಾರೆ.

ರಾಕೇಶ್ ಕೃಷ್ಣನ್ ಸಿಂಹ ಟ್ವಿಟರ್‌ ಖಾತೆಯಲ್ಲಿ ಷೇರ್ ಆದ ಫೇಕ್ ವಿಡಿಯೋ

ಬೆಂಗಳೂರಲ್ಲಿ ಹೇಳಿದ್ದಾರೆನ್ನಲಾದ ವಿಡಿಯೋವನ್ನು ರಾಜಸ್ಥಾನದ ಬೊಜಾರಿಯಾ ಹಳ್ಳಿಯಲ್ಲಿ 2019ರಲ್ಲಿ ಶೂಟ್ ಮಾಡಲಾಗಿದೆ. ಪೆಟ್ರೋಲ್ ಪಂಪ್ ಬಳಿ ಖಾಸಗಿ ಬಸ್ ಅಪಘಾತವಾಗಿತ್ತು. ಈ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು, ಮೂವರು ಗಾಯಗೊಂಡಿದ್ದರು. ಈ ವೇಳೆ ಮೃತನ ಕುಟುಂಬದವರು ಪ್ರತಿಭಟನೆ ನಡೆಸಿದ್ದರು. ಆಗ ಮುಸ್ಲಿಮ್ ವ್ಯಕ್ತಿಯೊಬ್ಬ ಹಿಂದೂಗಳಿಂದ ಖರೀದಿಸಬಾರದು ಎಂಬ ರೀತಿಯಲ್ಲಿ ಭಾಷಣ ಮಾಡಿದ್ದ. ಈ ಕುರಿತು ರಾಜಸ್ಥಾನ ಪೊಲೀಸರು ಕ್ರಮ ಕೂಡ ಕೈಗೊಂಡಿದ್ದರು.

Fact Check : ರಾಜಸ್ಥಾನದ ಬಾರ್ಮರ್ ಪೊಲೀಸರ ಟ್ವೀಟ್

ಈ ಸುದ್ದಿಯನ್ನೂ ಓದಿ: Fact Check Unit: ಪೊಲೀಸರಿಂದಲೇ ಫ್ಯಾಕ್ಟ್ ಚೆಕ್ ಯುನಿಟ್, ಇನ್ನು ಫೇಕ್ ನ್ಯೂಸ್‌ ಹರಡಿದ್ರೆ ಹುಷಾರ್!

ಈ ವಿಡಿಯೋ ಬೆಂಗಳೂರಿಗೆ ಸಂಬಂಧಿಸಿದ್ದಲ್ಲ ಎಂದು ರಾಜಸ್ಥಾನದ ಬಾರ್ಮರ್ ಪೊಲೀಸರು ಕೂಡ ಟ್ವೀಟ್ ಮಾಡಿದ್ದಾರೆ. ಹಾಗಾಗಿ, ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳದಂತೆ ಪೊಲೀಸರಿಗೆ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳು ಷೇರ್ ಆಗುತ್ತಿವೆ. ಇದರಿಂದ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದ್ದು, ಈ ಕುರಿತು ಫ್ಯಾಕ್ಟ್ ಚೆಕ್ ಘಟಕ ಆರಂಭಿಸಲಾಗುವುದು ಎಂದು ಕೆಲವು ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು. ಅದರಂತೆ, ಕರ್ನಾಟಕ ಪೊಲೀಸರು ಈಗ ಫ್ಯಾಕ್ಟ್ ಚೆಕ್ ಕಾರ್ಯವನ್ನು ಶುರು ಮಾಡಿದ್ದಾರೆ.

ಸ್ವತಂತ್ರವಾಗಿ ಫ್ಯಾಕ್ಟ್ ಚೆಕ್ ಮಾಡುವ ಜುಬೈರ್ ಅವರ ಟ್ವೀಟ್

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version