Site icon Vistara News

Karnataka Election 2023: ಮದ್ಯ ಪ್ರಿಯರೇ ಎಚ್ಚರ; ನಕಲಿ ಬ್ರಾಂಡೆಡ್ ಲಿಕ್ಕರ್ ಮಾರಾಟ ಜಾಲ ಪತ್ತೆ: ಇದು ಟಾರ್ಗೆಟ್‌ ಎಲೆಕ್ಷನ್!

Fake branded liquor sale racket busted in the run up to elections and Target election Karnataka Election 2023 update

ರಾಯಚೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Karnataka Election 2023) ಹೊಸ್ತಿಲಲ್ಲಿ ರಾಯಚೂರು ಜಿಲ್ಲೆಯಲ್ಲಿ ನಕಲಿ ಬ್ರಾಂಡೆಡ್ ಮದ್ಯ ಮಾರಾಟದ ನೆಟ್ವರ್ಕ್‌ ಚುರುಕಾಗಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ಲಿಂಕ್ ಹೊಂದಿರುವ ದೊಡ್ಡ ಜಾಲವನ್ನು ಭೇದಿಸಲಾಗಿದೆ. ಅಬಕಾರಿ ಪೊಲೀಸರು ಈ ಪ್ರಕರಣದಲ್ಲಿ ಒಬ್ಬನನ್ನು ವಶಕ್ಕೆ ಪಡೆದಿದ್ದು, ನಾಲ್ಕು ಕಡೆ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಕಿಂಗ್‌ಪಿನ್‌ ಬಂಧನಕ್ಕೆ ಬಲೆ ಬೀಸಿದ್ದಾರೆ.

ಈ ಜಾಲದ ಮೂಲಕ ಬ್ರಾಂಡೆಡ್ ಮದ್ಯ ಪ್ರಿಯರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮುಂಬೈನಿಂದ ನಕಲಿ ಬ್ರಾಂಡೆಡ್ ಕ್ಯಾಪ್, ಲೇಬಲ್ ತರಿಸಿಕೊಂಡು ಈ ಕೃತ್ಯ ಎಸಗುತ್ತಿರುವುದು ಗೊತ್ತಾಗಿದೆ. ರಾಯಚೂರು ಅಬಕಾರಿ‌ ಇಲಾಖೆ ಅಧಿಕಾರಿಗಳು ಒಟ್ಟು ನಾಲ್ಕು ಕಡೆ‌ ದಾಳಿ ನಡೆಸಿಸಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ 500ಕ್ಕೂ ಹೆಚ್ಚು ನಕಲಿ ಕ್ಯಾಪ್, ಲೇಬಲ್‌ಗಳು, 80 ಲೀಟರ್‌ಗೂ ಹೆಚ್ಚು ಮದ್ಯ, ಹೋಂಡಾ ಆಕ್ಟಿವಾ ಬೈಕ್ ಹಾಗೂ ಆಟೋವನ್ನು ಜಪ್ತಿ ಮಾಡಿದ್ದಾರೆ. 200 ರೂಪಾಯಿ ಮುಖ ಬೆಲೆಯ ಬ್ರಾಂಡೆಡ್ ಮದ್ಯದ ಖಾಲಿ ಬಾಟಲ್‌ಗೆ, ಅತಿ ಕಡಿಮೆ ಬೆಲೆಯ (60-80 ರೂ.) ಮದ್ಯವನ್ನು ತುಂಬುವಾಗ ಆರೋಪಿಯನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ಇನ್ನು ವಶಕ್ಕೆ ಪಡೆಯಲಾಗಿರುವ ಆರೋಪಿ ರಾಮ ಆಂಜನೇಯ ಅಲಿಯಾಸ್ ಆಂಜನೇಯ ಎನ್ನಲಾಗಿದೆ. ಈತ ಸ್ಕೂಟರ್‌ನಲ್ಲಿ ನಕಲಿ ಕ್ಯಾಪ್‌ಗಳನ್ನು ರವಾನೆ ಮಾಡುತ್ತಿದ್ದ. ಇದು ಅಬಕಾರಿ ಪೊಲೀಸರಿಗೆ ಅನುಮಾನ ಮೂಡಿಸಿದ್ದು, ಆತನ ಮೇಲೆ ನಿಗಾ ವಹಿಸಲಾಗಿತ್ತು.

ಇದನ್ನೂ ಓದಿ: Karnataka Election 2023: ಯತೀಂದ್ರ ಸಿದ್ದರಾಮಯ್ಯಗೆ ಅಪ್ಪನ ಸೋಲಿನ ಭಯ?; ಮತಯಾಚನೆ ವೇಳೆ ಅವರು ಹೇಳಿದ್ದೇನು?

ರಾಮ ಆಂಜನೇಯನ ಸ್ಕೂಟರ್ ಅನ್ನು ತಪಾಸಣೆ ನಡೆಸಿದಾಗ ನಕಲಿ ಕ್ಯಾಪ್‌ಗಳು ಪತ್ತೆಯಾಗಿದೆ. ಇದರ ಬಗ್ಗೆ ಕೇಳಿದಾಗ ತಡಬಡಾಯಿಸಿದ್ದಾನೆ. ಬಳಿಕ ಆತನನ್ನು ವಿಚಾರಣೆಗೊಳಪಡಿಸಿದಾಗ ಸತ್ಯಾಂಶವನ್ನು ಬಾಯಿ ಬಿಟ್ಟಿದ್ದಾನೆ. ಅದರಲ್ಲೂ ಪ್ರಮುಖವಾಗಿ ಈ ನೆಟ್ವರ್ಕ್ ಆಂಧ್ರ-ತೆಲಂಗಾಣ ಗಡಿ ಭಾಗದಲ್ಲಿ ಆ್ಯಕ್ಟಿವ್ ಆಗಿ‌ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಅಬಕಾರಿ ಇಲಾಖೆಯ ಡಿಸಿ ಲಕ್ಷ್ಮಿ ಹೇಳಿದ್ದಾರೆ.

ಎರಡು ದಿನಗಳಿಂದ ಕಡಗಂದೊಡ್ಡಿ, ಎಲ್‌.ಕೆ. ದೊಡ್ಡಿ, ಹೊಸೂರು ಸೇರಿ ನಾಲ್ಕು ಕಡೆ ದಾಳಿ ಮಾಡಲಾಗಿದೆ. ಈಗಾಗಲೇ ನಕಲಿ ಬ್ರಾಂಡೆಡ್ ಮಾರಾಟ ಜಾಲದ ಒಂದು ತಂಡವನ್ನು ವಶಕ್ಕೆ ಪಡೆಯಲಾಗಿದೆ. ಈಗ ಇಡೀ ಜಾಲದ ಇಂಟರ್ ಲಿಂಕ್ ಪತ್ತೆಯಾಗಿದೆ‌. ಚುನಾವಣೆ ಹಿನ್ನೆಲೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ ಎಂದು ಲಕ್ಷ್ಮಿ ಹೇಳಿದ್ದಾರೆ.

ರಸ್ತೆಯ ಮಧ್ಯಗಳಲ್ಲಿ ಇರುವ ಡಾಬಾಗಳ ಮೂಲಕ‌ ಮಾರಾಟಕ್ಕೆ ಸಂಚು ರೂಪಿಸಲಾಗಿತ್ತು. ಅಲ್ಲಿ ಈ ನಕಲಿ ಬ್ರಾಂಡ್‌ಗಳನ್ನು ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುವ ಪ್ಲ್ಯಾನ್‌ ಅನ್ನು ಹೊಂದಲಾಗಿತ್ತು ಎಂಬ ಸಂಗತಿ ರಿವೀಲ್ ಆಗಿದೆ‌. ಈ ಪ್ರಕರಣದ ಕಿಂಗ್‌ಪಿನ್‌ಗಾಗಿ ಪೊಲೀಸರು ಹುಡುಕಾಟದಲ್ಲಿದ್ದಾರೆ.

ಇದನ್ನೂ ಓದಿ: Karnataka Election 2023: ಕಾಂಗ್ರೆಸ್‌ ಟಿಕೆಟ್ ಪಡೆದಾಗ ನಿಮ್ಮ ಗಂಡಸ್ತನ ಎಲ್ಲಿತ್ತು?; ಆನಂದ್‌ ಸಿಂಗ್‌ಗೆ ಶೈಲಜಾ ಹಿರೇಮಠ ಪ್ರಶ್ನೆ

ಬ್ರಾಂಡೆಡ್ ಮದ್ಯ ಮತ್ತು ಕಡಿಮೆ ದರದ ಮದ್ಯದ ಕಲರ್ ಹೊಂದಿಕೆಯಾಗಿದೆ. ದುಡ್ಡು ಮಾಡುವ ಸಲುವಾಗಿ ಈ ಕೃತ್ಯವನ್ನು ಮಾಡಲಾಗುತ್ತಿದೆ. ಇದರ ಜತೆಗೆ ಯಾರು ಯಾರು ಕೈಜೋಡಿಸಿದ್ದಾರೆ ಎಂಬ ಬಗ್ಗೆ ಮತ್ತಷ್ಟು ತನಿಖೆಯಾಗಬೇಕಿದೆ. ಇಂತಹ ಪ್ರಕರಣಗಳಿಂದ ಮದ್ಯ ಪ್ರಿಯರು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Exit mobile version