Site icon Vistara News

Kottur Manjunath: ನಕಲಿ ಜಾತಿ ಪ್ರಮಾಣ ಪತ್ರ; ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಕೊತ್ತೂರು ಮಂಜುನಾಥ್‌ಗೆ ಸುಪ್ರೀಂ ಅವಕಾಶ

kottur manjunat ನಕಲಿ ಜಾತಿ ಪ್ರಮಾಣ ಪತ್ರ ವಿವಾದ

ಕೋಲಾರ: ಮುಳಬಾಗಿಲು ಮಾಜಿ ಶಾಸಕ‌ ಕೊತ್ತೂರು ಮಂಜುನಾಥ್‌ಗೆ (Kottur Manjunath) ಸಂಬಂಧಿಸಿದ ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣವು ಮತ್ತೆ ಹೈಕೋರ್ಟ್ ಅಂಗಳಕ್ಕೆ ಬಂದಿದೆ. ಈ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ ಮೊರೆಹೋಗಿದ್ದ ಮಂಜುನಾಥ್‌ ಅವರಿಗೆ ಜಿಲ್ಲಾಧಿಕಾರಿ ನೇತೃತ್ವದ ತಂಡ ನೀಡಿದ್ದ ಜಾತಿ ವರದಿಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶ ನೀಡಲಾಗಿದೆ.

ಈ ಹಿಂದೆ, ಮಂಜುನಾಥ್‌ ವಿರುದ್ಧ ಹೈಕೋರ್ಟ್‌ನಲ್ಲಿ ತೀರ್ಪು ಬಂದಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಕೊತ್ತೂರು ಮಂಜುನಾಥ್ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿತ್ತು. ಈ ಪ್ರಕರಣ ಸಂಬಂಧ ಕೋಲಾರ ಜಿಲ್ಲಾಡಳಿತದಿಂದ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಕೆಯಾಗಿತ್ತು. ಜಿಲ್ಲಾಧಿಕಾರಿಗಳು ಮಂಜುನಾಥ್‌ ವಿರುದ್ಧ ವರದಿ ನೀಡಿದ್ದರು. ಜಿಲ್ಲಾಧಿಕಾರಿ ವರದಿ ಬಗ್ಗೆ ಮಂಜುನಾಥ್‌ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ವಾದ ವಿವಾದ ಆಲಿಸಿದ ನ್ಯಾ. ಬಿ.ಆರ್. ಗವಾಯಿ, ನ್ಯಾ. ವಿಕ್ರಮ್ ನಾಥ್ ಅವರ ಪೀಠವು, ಹೈಕೋರ್ಟ್‌ನಲ್ಲಿ ಜಾತಿ ವರದಿಯನ್ನು ಪ್ರಶ್ನೆ ಮಾಡಲು ಒಪ್ಪಿಗೆ ನೀಡಿ ಆದೇಶಿಸಿದೆ.

ಹೈಕೋರ್ಟ್‌ ಆದೇಶವು, ಮಂಜುನಾಥ್‌ ವಿರುದ್ಧ ಇದ್ದದ್ದರಿಂದ ಇದೀಗ ಪ್ರಕರಣವು ಅದೇ ಹಂತಕ್ಕೆ ಬಂದು ನಿಂತಿದೆ. ಜಿಲ್ಲಾಧಿಕಾರಿಯ ವರದಿಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಲು ಅವಕಾಶ ನೀಡಿದೆ.

ಇದನ್ನೂ ಓದಿ | Protest for toilet : ಗ್ರಾಮದಲ್ಲಿ ಶೌಚಾಲಯಕ್ಕಾಗಿ ಮಹಿಳೆಯರ ಪ್ರತಿಭಟನೆ: ನಾಡಕಚೇರಿ, ಗ್ರಾಪಂಗೆ ಬೀಗ‌ ಜಡಿದು ಆಕ್ರೋಶ

Exit mobile version