Site icon Vistara News

Fake note | ಚಿಂತಾಮಣಿಯಲ್ಲಿ ಖೋಟಾ ನೋಟು ದಂಧೆ ಪತ್ತೆ, ಮೂವರ ಬಂಧನ

fake note

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿಯಲ್ಲಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಸುಮಾರು 60 ಲಕ್ಷ ರೂ.ಗೂ ಹೆಚ್ಚು ನಕಲಿ ಮುಖಬೆಲೆಯ ಖೋಟಾ ನೋಟುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಆಂಧ್ರ ಕರ್ನಾಟಕ ಗಡಿನಾಡು ಚಿಂತಾಮಣಿ ನಗರದಲ್ಲಿ ಈ ಖೋಟಾ ನೋಟು ಜಾಲ ಪತ್ತೆಯಾಗಿದೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮೂವರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಖೋಟಾ ನೋಟು ಪ್ರೀಂಟ್ ಮಾಡಲು ಬಳಸಿದ್ದ ಯಂತ್ರೋಪಕರಣಗಳನ್ನು ಜಪ್ತಿ ಮಾಡಲಾಗಿದೆ.

ಚಿಂತಾಮಣಿ ನಗರ ಹೊರವಲಯದ ಬಾರ್ನ್ ಪೌಂಡೇಷನ್‌ನ ಪಾಳುಬಿದ್ದ ಕಟ್ಟಡದಲ್ಲಿ ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಚಿಂತಾಮಣಿ ಎಎಸ್ಪಿ ಕುಶಾಲ್ ಚೌಕ್ಸಿ ನೇತೃತ್ವದಲ್ಲಿ ದಾಳಿ ಮಾಡಿದ್ದರು. ಅಸಲಿ ನೋಟನ್ನು ಸ್ಕ್ಯಾನ್ ಮಾಡಿ ಅದೇ ಮಾದರಿಯಲ್ಲಿ ಕಲರ್ ಝೆರಾಕ್ಸ್ ಮಾಡುತ್ತಿದ್ದ ಆರೋಪಿಗಳು, ಆಂಧ್ರ- ಕರ್ನಾಟಕ ಗಡಿಯಲ್ಲಿ ಅಮಾಯಕರು, ರೈತರು, ಅವಿದ್ಯಾವಂತರಿಗೆ ಈ ನೋಟುಗಳನ್ನು ದಾಟಿಸುತ್ತಿದ್ದರು.

ಇದನ್ನೂ ಓದಿ | Fake note gang | ಬೆಂಗಳೂರಲ್ಲಿ ಖೋಟಾ ನೋಟು ಗ್ಯಾಂಗ್; ಚಾಲಾಕಿ ಲೇಡಿ ಬಂಧನ!

Exit mobile version