Site icon Vistara News

Family Dispute: ಗಂಡ-ಹೆಂಡತಿ ಜಗಳದಲ್ಲಿ ಬಡವಾದ ಬೆಂಗಳೂರು ಪೊಲೀಸರು! ಏನಿದು ಗಲಾಟೆ ಸಂಸಾರ?

husband and wife

ಬೆಂಗಳೂರು: ದಂಪತಿಯ ಗಲಾಟೆ ಸಂಸಾರಕ್ಕೆ ಪೊಲೀಸರು ಸುಸ್ತಾಗಿ ಹೋಗಿದ್ದಾರೆ. ಪತ್ನಿ ಕಾಣೆ (Missing Case) ಆಗಿದ್ದಾಳೆ ಎಂದು ಪತಿ ಠಾಣಾ ಮೆಟ್ಟಿಲೇರಿದ್ದ. ಅವಳನ್ನು ಹುಡುಕಿಕೊಟ್ಟರಾಯಿತು ಅನ್ನುವಷ್ಟರಲ್ಲಿ ಪತಿಯನ್ನು ಹುಡುಕಿಕೊಡಿ ಎಂದು ಪತ್ನಿ ಪೊಲೀಸರ ಮೊರೆ ಹೋಗಿದ್ದಾಳೆ. ಇವರಿಬ್ಬರ ಮುಸುಕಿನ ಗುದ್ದಾಟಕ್ಕೆ ಪೊಲೀಸರೇ ಬಡವಾಗಿದ್ದಾರೆ.

ಸುಕನ್ಯಾ ಹಾಗೂ ಅಶೋಕ್‌ ದಂಪತಿ ಮುನಿಸು ಪೊಲೀಸರನ್ನು ಹೈರಾಣಾಗಿಸಿದೆ. ಪತ್ನಿ ಫೋನ್‌ನಲ್ಲಿ ಹೆಚ್ಚು ಮಾತನಾಡುತ್ತಿರುತ್ತಾಳೆ ಎಂದು ಅಸಮಾಧಾನಗೊಂಡ ಅಶೋಕ್‌ ನಿತ್ಯ ಜಗಳವಾಡುತ್ತಿದ್ದ. ಹೀಗೆ ಮಾರ್ಚ್‌ 9ರಂದು ಫೋನ್‌ ವಿಚಾರಕ್ಕೆ ಜಗಳವಾಗಿದೆ. ಇದರಿಂದ ಬೇಸತ್ತ ಪತ್ನಿ ʻನಾನು ಹೋಗುತ್ತಿದ್ದೇನೆ, ಮತ್ತೆ ಯಾವತ್ತೂ ಬರುವುದಿಲ್ಲ. ಮಕ್ಕಳನ್ನು ಚೆನ್ನಾಗಿ ನೋಡಿಕೋ. ಮನೆಯಲಿ ಇಬ್ಬರೇ ಇದ್ದಾರೆ, ಬೇಗ ಮನೆಗೆ ಹೋಗು. ಇದೇ ಕೊನೇ ಮೆಸೇಜ್‌, ಜೀವನದಲ್ಲಿ ಇನ್ನು ಯಾವತ್ತೂ ಸಿಗುವುದಿಲ್ಲ. ನಾನು ತಾಳ್ಮೆ ಕಳೆದುಕೊಂಡು ಬಿಟ್ಟಿದ್ದೇನೆʼ ಎಂದು ವಾಟ್ಸ್‌ಆ್ಯಪ್‌ ಸಂದೇಶವನ್ನು ಕಳುಹಿಸಿ ಮನೆ ಬಿಟ್ಟು ಹೋಗಿದ್ದಾಳೆ.

ಪತ್ನಿಯ ಈ ಸಂದೇಶದಿಂದ ಆತಂಕಕೊಂಡ ಪತಿ ಅಶೋಕ್‌ ಸಂಬಂಧಿಕರು, ಸ್ನೇಹಿತರ ಮನೆಯಲ್ಲಿ ಎಲ್ಲ ವಿಚಾರಿಸಿದ್ದಾನೆ. ಎಲ್ಲೂ ಸಿಗದೆ ಇದ್ದಾಗ ಕೂಡಲೇ ಕೋಣನಕುಂಟೆ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿ ಪತ್ನಿಯನ್ನು ಹುಡುಕಿಕೊಡುವಂತೆ ದುಂಬಾಲು ಬಿದ್ದಿದ್ದಾನೆ. ಈತನ ದೂರು ದಾಖಲಿಸಿಕೊಂಡ ಪೊಲೀಸರು ಉತ್ತರ ಕನ್ನಡದ ಶಿರಸಿಯಲ್ಲಿದ್ದ ಪತ್ನಿ ಸುಕನ್ಯಾಳನ್ನು ಮೂರು ದಿನಗಳಲ್ಲಿ ಹುಡುಕಿದ್ದಾರೆ. ಬಳಿಕ ಹೀಗೆ ಮಾಡದಂತೆ ಸುಕನ್ಯಾಳಿಗೆ ಬುದ್ಧಿವಾದ ಹೇಳಿ ಕಳಿಸಿದ್ದಾರೆ.

ಇದನ್ನೂ ಓದಿ: Fire Accident: ಕೊಟ್ಟಿಗೆಯಲ್ಲಿ ಅಗ್ನಿ ಅವಘಡದಿಂದಾಗಿ ಹಸುಗಳೆರಡು ದಾರುಣ ಸಾವು; ರಕ್ಷಿಸಲು ಹೋದ ರೈತನಿಗೆ ಗಂಭೀರ ಗಾಯ

ಪತ್ನಿ ಸಿಕ್ಕ ಎರಡೇ ದಿನಕ್ಕೆ ಪತಿ ನಾಪತ್ತೆ

ಪತ್ನಿ ಮರಳಿ ಸಿಕ್ಕ ಎರಡೇ ದಿನದಲ್ಲಿ ಪತಿ ಅಶೋಕ್ ಕೆಲಸಕ್ಕೆ ಹೋಗದೆ ಮನೆಯಲ್ಲಿ ಇದ್ದವರು, ಸಂಜೆ ಸಮಯ ಮಗನ ಕೈಯಲ್ಲಿ ಮೊಬೈಲ್ ಕೊಟ್ಟು ಹೋಗಿದ್ದಾರೆ. ಮನೆಗೆ ವಾಪಸ್‌ ಬಾರದೆ ಇದ್ದಾಗ ಈಗ ತನ್ನ ಪತಿಯನ್ನು ಹುಡುಕಿಕೊಡಿ ಎಂದು ಪತ್ನಿ ಸುಕನ್ಯಾ ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ. ಇವರಿಬ್ಬರ ಮುನಿಸಿನಿಂದ ಕೋಣನಕುಂಟೆ ಪೊಲೀಸರು ಹೈರಾಣಾಗಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version