Site icon Vistara News

Family Dispute: ಕ್ಷುಲ್ಲಕ ಕಾರಣಕ್ಕೆ ನಡುರಸ್ತೆಯಲ್ಲಿ ಪತ್ನಿಯ ಕೈಗಳನ್ನೇ ಕತ್ತರಿಸಿದ ಪಾಪಿ ಪತಿ

Husband assaults wife, cuts off wife's hands

Husband assaults wife, cuts off wife's hands

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ತಾಲೂಕಿನ ಗೊಬ್ಬರಗುಂಟೆ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ (Family Dispute) ಪತಿಯೊಬ್ಬ ಪತ್ನಿಯ ಎರಡು ಕೈಗಳನ್ನು ಮಚ್ಚಿನಿಂದ ಕತ್ತರಿಸಿ ಪೈಶಾಚಿಕ ಕೃತ್ಯ ಎಸಗಿರುವ ಘಟನೆ ನಡೆದಿದೆ. ಮುನಿಕೃಷ್ಣಪ್ಪ ಎಂಬಾತ ತನ್ನ ಪತ್ನಿ ಚಂದ್ರಕಲಾ (45) ಮೇಲೆ ಅಟ್ಟಹಾಸ ತೋರಿದ್ದಾನೆ.

ಈ ಇಬ್ಬರು ಮದುವೆ ಆಗಿ 20 ವರ್ಷಗಳು ಕಳೆದಿದ್ದು, ಮೂವರು ಮಕ್ಕಳಿದ್ದಾರೆ. ನಿತ್ಯ ಒಂದಲ್ಲ ಒಂದು ವಿಚಾರಕ್ಕೆ ಕ್ಯಾತೆ ತೆಗೆದು ಮುನಿಕೃಷ್ಣಪ್ಪ ಜಗಳವಾಡುತ್ತಿದ್ದ. ಜಗಳದಿಂದ ಬೇಸತ್ತು ಮೂರು ತಿಂಗಳ ಹಿಂದೆ ಗಂಡನನ್ನು ಬಿಟ್ಟು ಮಕ್ಕಳೊಂದಿಗೆ ಬಾಡಿಗೆ ಮನೆಯೊಂದರಲ್ಲಿ ಚಂದ್ರಕಲಾ ವಾಸವಿದ್ದರು.

ಇದನ್ನೂ ಓದಿ: Ramadan 2023: ರಂಜಾನ್‌ ವೇಳೆ ಮಸೀದಿಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕೋರಿದ ಮುಸ್ಲಿಂ ಮುಖಂಡರು

ಗಾರ್ಮೆಂಟ್ಸ್‌ಗೆ ಹೋಗಿ ಜೀವನ ನಿರ್ವಹಣೆ ಮಾಡುತ್ತಿರುವ ಚಂದ್ರಕಲಾ ಸೋಮವಾರ ಸಂಜೆ ಕೆಲಸಕ್ಕೆ ಹೋಗಿ ವಾಪಸ್ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ರಾಕ್ಷಸನಂತೆ ಬಂದವನೇ ಮಚ್ಚಿನಿಂದ ಎರಡು ಕೈಗಳನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾನೆ. ತೀವ್ರ ಹಲ್ಲೆಗೊಳಗಾದ ಚಂದ್ರಕಲಾಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.‌

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version