Site icon Vistara News

Family Dispute: ನಾನೇನು ಮಾಡಲಿ ಸ್ವಾಮಿ ನನ್ನ ಪತ್ನಿ ಡ್ರಗ್‌ ಪ್ರೇಮಿ; ಠಾಣಾ ಮೆಟ್ಟಿಲೇರಿದ ನಟ ಕಂ ನಿರ್ಮಾಪಕ

Actor Producer chandhrashekar

ಬೆಂಗಳೂರು: ಪತ್ನಿ ಮಾದಕ ವ್ಯಸನಿ ಆಗಿದ್ದು, ಡ್ರಗ್ಸ್‌ಗಾಗಿ ಡ್ರಗ್ ಪೆಡ್ಲರ್‌ ಜತೆಗೆ ಅನೈತಿಕ ಸಂಬಂಧ (illicit relationship) ಹೊಂದಿದ್ದಾಳೆ ಎಂದು ನಟ ಕಂ ನಿರ್ಮಾಪಕರೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೀಗೊಂದು ದಿನ ಹಾಗೂ ಅಪ್ಪುಗೆ ಎಂಬ ಚಿತ್ರಗಳ ನಿರ್ಮಾಪಕನಾಗಿರುವ ಚಂದ್ರಶೇಖರ್ ಎಂಬಾತ ಪತ್ನಿ ನಮೀತಾ ವಿರುದ್ಧ ದೂರು ನೀಡಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಚಂದ್ರಶೇಖರ್‌ ನಮೀತಾರನ್ನು ವಿವಾಹವಾಗಿದ್ದರು. ಆದರೆ ಇತ್ತೀಚೆಗೆ ನಮಿತಾ ಮಾದಕ ವಸ್ತುಗಳ ವ್ಯಸನಿಯಾಗಿದ್ದಾಳೆ. ವ್ಯಸನ ಬಿಡಿಸಲು ಬಹಳ ಸಾರಿ ಪ್ರಯತ್ನ ಪಟ್ಟರೂ ಕದ್ದು ಮುಚ್ಚಿ ಡ್ರಗ್ಸ್‌ ಸೇವನೆ ಮಾಡುತ್ತಿದ್ದಳು ಎಂದು ಚಂದ್ರಶೇಖರ್‌ ದೂರಿದಿದ್ದಾರೆ.

ಠಾಣಾ ಮೆಟ್ಟಿಲೇರಿದ ಚಂದ್ರಶೇಖರ್‌

ಇತ್ತೀಚೆಗೆ ಲಕ್ಷ್ಮೀಶ ಪ್ರಭು ಎಂಬ ಡ್ರಗ್ ಪೆಡ್ಲರ್‌ನ ಪರಿಚಯ ಮಾಡಿಕೊಂಡಿರುವ ಪತ್ನಿ ನಮಿತಾ ಆತನೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಾಳೆ ಎಂದು ಚಂದ್ರಶೇಖರ್‌ ಆರೋಪಿಸಿದ್ದಾರೆ. ನಾನು ಇಲ್ಲದ ಸಮಯದಲ್ಲಿ ನಮಿತಾ ಹಾಗೂ ಲಕ್ಷ್ಮೀಶ ಪ್ರಭು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಪ್ರಶ್ನೆ ಮಾಡಿದ್ದಕ್ಕೆ ಇಬ್ಬರು ಸೇರಿ ಮನಸೋ ಇಚ್ಛೆ ಥಳಿಸಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಚಂದ್ರಶೇಖರ್‌ ದೂರು ನೀಡಿದ್ದಾರೆ.

ಮರು ದೂರು ನೀಡಿದ ಪತ್ನಿ

ಇತ್ತ ಪತಿ ಚಂದ್ರಶೇಖರ್‌ ವಿರುದ್ಧ ನಮಿತಾ ಕೂಡ ದೂರು ನೀಡಿದ್ದಾರೆ. ಚಂದ್ರಶೇಖರ್‌ಗೆ ಈ ಮೊದಲೇ ಮದುವೆಯಾಗಿ ಮಗು ಇದ್ದರೂ, ವಿಚ್ಛೇಧನ ನೀಡಿದ್ದಾಗಿ ಹೇಳಿ ನನ್ನನ್ನು ಮದುವೆ ಆಗಿದ್ದರು. ಕಳೆದ ಜೂ. 16ರಂದು ಪತಿ ಚಂದ್ರಶೇಖರ್‌ ಅವರ ಸ್ನೇಹಿತರಾದ ಅರುಣ್, ಹೇಮಂತ್‌ ಸೇರಿಕೊಂಡು ನನ್ನ ಸ್ನೇಹಿತ ಲಕ್ಷ್ಮೀಶ ಪ್ರಭುಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ ಹೊಡೆಯುತ್ತಿದ್ದರು. ಇದನ್ನೂ ಪ್ರಶ್ನಿಸಿದ್ದಕ್ಕೆ ನನ್ನ ಪತಿ ಚಂದ್ರಶೇಖರ್‌ ಹಲ್ಲೆ ಮಾಡಲು ಮುಂದಾದರೂ ಆಗ ನಾನು ತಪ್ಪಿಸಿಕೊಂಡು ಮನೆಯೊಳಗೆ ಓಡಿ ಹೋದೆ. ಆದರೂ ಮನೆಯೊಳಗೆ ನುಗ್ಗಿದ ಈ ಮೂವರು, ನನಗೂ ಲಕ್ಷ್ಮೀಶ ಪ್ರಭುಗೆ ಅಫೇರ್ ಇದೆ ಎಂದು ಬಿಂಬಿಸಿದರು. ಮಾತ್ರವಲ್ಲದೆ ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ತಿವಿದರು.

ಇದನ್ನೂ ಓದಿ: Road Accident: ಚಾಲಕನ ನಿಯಂತ್ರಣ ತಪ್ಪಿ ಹೈಡ್ರಾಲಿಕ್ ಕ್ರೇನ್‌ ಪಲ್ಟಿ; ಒಬ್ಬ ಸಾವು

ತಾವೇ ಮನೆಯಲ್ಲಿ ಡ್ರಗ್ ತಂದಿಟ್ಟು, ನಿನ್ನನ್ನು ಡ್ರಗ್ಸ್ ಕೇಸಿನಲ್ಲಿ ಜೈಲಿಗೆ ಕಳುಹಿಸುತ್ತೇನೆಂದು ಎಂದು ಬೆದರಿಕೆ ಹಾಕಿದ್ದಾರೆ. ಮಾತ್ರವಲ್ಲದೆ ನನ್ನ ಸ್ನೇಹಿತ ಲಕ್ಷ್ಮೀಶನ ಬಟ್ಟೆಯನ್ನು ಬಿಚ್ಚಿಸಿ ಚಂದ್ರಶೇಖರ್ ವೀಡಿಯೊ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಈ ಸಂಬಂಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್ ಮಾಡಿ

Exit mobile version