ಕೋಲಾರ: ಇಲ್ಲಿನ ಎಂಜಿ ರಸ್ತೆಯಲ್ಲಿ ಒಂಟಿ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಮಚ್ಚಿನಿಂದ ಹಲ್ಲೆ ನಡೆಸಿರುವ (Family dispute) ಘಟನೆ ನಡೆದಿದೆ. ಕವಿತಾ ಎಂಬುವವರು ಹಲ್ಲೆಗೆ ಒಳಗಾದವರು. ಕವಿತಾಳ ಸಂಬಂಧಿಯಾಗಿರುವ ಶ್ರೀನಿವಾಸ್ ಎಂಬಾತನೇ ಮನಸೋ ಇಚ್ಛೆ ಮಚ್ಚಿನಿಂದ ಬೀಸಿ ಗಾಯಗೊಳಿಸಿದ್ದಾನೆ.
ತೀವ್ರ ಗಾಯಗೊಂಡ ಕವಿತಾ ರಕ್ತದ ಮಡುವಿನಲ್ಲಿ ಕುಸಿದು ಬಿದ್ದು ಒದ್ದಾಡುತ್ತಿದ್ದರು. ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದ ಕವಿತಾಳನ್ನು ಸ್ಥಳೀಯರೇ ಎಸ್ಎನ್ಆರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಲ್ಲೆ ಮಾಡಿದ ಆರೋಪಿ ಶ್ರೀನಿವಾಸ್‌ನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೋಲಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆಗೆ ಕೌಟುಂಬಿಕ ಕಲಹ ಕಾರಣ ಎಂದು ತಿಳಿದು ಬಂದಿದೆ. ಕವಿತಾ ಮೇಲೆ ಹಲ್ಲೆ ಮಾಡಿದ ಶ್ರೀನಿವಾಸ್ ಆಕೆಯ ಬಾವ ಎಂದು ತಿಳಿದು ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಎಷ್ಟು ಪೌಡರ್ ಹಾಕಿದರೂ ಬಿಳಿ ಆಗಲ್ಲ ಎಂದ ಪತಿ ಮಾಡಿದ್ದೇನು ಗೊತ್ತಾ?
ಕಲಬುರಗಿ: ʻʻನೀನು ಕಪ್ಪಗಿದ್ದೀಯಾ, ಎಷ್ಟು ಪೌಡರ್ ಹಾಕಿದರೂ ಬಿಳಿ ಆಗಲ್ಲʼʼ ಎಂದು ಆಗಾಗ ಅವಹೇಳನ ಮಾಡುತ್ತಿದ್ದ ಗಂಡನೊಬ್ಬ ಇದೀಗ ಆಕೆಯನ್ನು ಕೊಂದೇ (Murder case) ಹಾಕಿದ್ದಾನೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೆಲ್ಲೂರ್ ಗ್ರಾಮದಲ್ಲಿ ಘಟನೆ ನಡೆದಿದೆ. ಫರ್ಜಾನಾ ಬೇಗಂ (28) ಎಂಬಾಕೆಯೇ ತನ್ನ ಗಂಡ ಖಾಜಾ ಪಟೇಲ್‌ನಿಂದ ಕೊಲೆಯಾದ ದುರ್ದೈವಿ.
ಜೇವರ್ಗಿ ತಾಲೂಕಿನ ಕೆಲ್ಲೂರ್ ಗ್ರಾಮದ ಖಾಜಾ ಪಟೇಲ್ ಮತ್ತು ಫರ್ಜಾನಾ ಬೇಗಂ ನಡುವೆ ಏಳು ವರ್ಷಗಳ ಹಿಂದೆ ಮದುವೆ ಆಗಿತ್ತು. ಮದುವೆಯಾದ ದಿನದಿಂದಲೇ ಫರ್ಜಾನಾ ಬೇಗಂಗೆ ನಾನಾ ಕಾರಣ ನೀಡಿ ನಿತ್ಯ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ. ಖಾಜಾ ಪಟೇಲ್ ಮತ್ತು ಆತನ ಕುಟುಂಬಸ್ಥರು ನೀನು ಕಪ್ಪಗಿದ್ದೀಯಾ, ಎಷ್ಟು ಪೌಡರ್ ಹಾಕಿದರೂ ಬಿಳಿ ಆಗಲ್ಲ ಎಂದೆಲ್ಲ ಹೀಯಾಳಿಸುತ್ತಿದ್ದರು. ಜತೆಗೆ ವರದಕ್ಷಿಣೆ ತರುವಂತೆ ಗಂಡ ನಿತ್ಯ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಈ ನಡುವೆ ಹಿಂಸೆ ವಿಪರೀತ ಮಟ್ಟಕ್ಕೇರಿದ್ದು, ಅಂತಿಮವಾಗಿ ಖಾಜಾ ಪಟೇಲ್ ಹೆಂಡತಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆಯೇ ಫರ್ಜಾನಾ ಮನೆಯವರು ಆಕೆ ಎದುರಿಸುತ್ತಿದ್ದ ಹಿಂಸೆಯನ್ನು ಒಂದೊಂದಾಗಿ ಬಿಚ್ಚಿಡುತ್ತಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: BBMP Reforms: ಬಿಬಿಎಂಪಿ ಆದಾಯ ಹೆಚ್ಚಳಕ್ಕೆ ಜಾರಿ ಕೋಶ ರಚಿಸಿ: ಆಡಳಿತ ಸುಧಾರಣಾ ಆಯೋಗದ ಶಿಫಾರಸು
ಕೊಲೆ ಮಾಡಿದ ಬಳಿಕ ಖಾಜಾ ಪಟೇಲ್ ಮತ್ತು ಕುಟುಂಬದವರು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ