Site icon Vistara News

Karnataka election 2023: ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚನ್ನಾರೆಡ್ಡಿ ಪಾಟೀಲ ಗೆಲುವಿಗಾಗಿ ಕುಟುಂಬಸ್ಥರ ಮತಬೇಟೆ

Karnataka election 2023 Family vote hunting for Congress candidate Channareddy Patil from Yadgiri constituency

ಯಾದಗಿರಿ: ಸಾರ್ವತ್ರಿಕ ವಿಧಾನಸಭಾ ಚುನಾವಣೆ (Karnataka election 2023) ಹಿನ್ನೆಲೆಯಲ್ಲಿ ಯಾದಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರ ಗೆಲುವಿಗಾಗಿ ಇಡೀ ಕುಟುಂಬಸ್ಥರು ಕಾಲಿಗೆ ಚಕ್ರಕಟ್ಟಿಕೊಂಡಂತೆ ಭರ್ಜರಿ ಪ್ರಚಾರ ನಡೆಸಿ ಮತಯಾಚಿಸುತ್ತಿದ್ದಾರೆ.

ಚತುಷ್ಕೋನ ಸ್ಪರ್ಧೆ

ಯಾದಗಿರಿ ವಿಧಾನಸಭೆ ಕ್ಷೇತ್ರದಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ ಪಕ್ಷದಿಂದ ಚನ್ನಾರೆಡ್ಡಿ ಪಾಟೀಲ ತುನ್ನೂರು, ಬಿಜೆಪಿಯಿಂದ ವೆಂಕಟರೆಡ್ಡಿ ಮುದ್ನಾಳ, ಜೆಡಿಎಸ್‌ನಿಂದ ಡಾ. ಎ.ಬಿ. ಮಾಲಕರೆಡ್ಡಿ, ಜೆಡಿಎಸ್ ಟಿಕೆಟ್ ವಂಚಿತ ಹಣಮೇಗೌಡ ಬೀರನಕಲ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ನಾಲ್ಕು ಪಕ್ಷದ ಅಭ್ಯರ್ಥಿಗಳು ಯಾದಗಿರಿ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದು, ಯಾದಗಿರಿ ಕ್ಷೇತ್ರದಲ್ಲಿ ಈ ಬಾರಿ ಚತುಷ್ಕೋನ ಸ್ಪರ್ಧೆ ಕಣವಾಗಿ ಏರ್ಪಟ್ಟಿದೆ.

ಇದನ್ನೂ ಓದಿ: Lionel Messi: ಸೌದಿ ಪ್ರವಾಸಕ್ಕೆ ಕ್ಷಮೆಯಾಚಿಸಿದ ಲಿಯೋನೆಲ್‌ ಮೆಸ್ಸಿ

ಕುಟುಂಬಸ್ಥರ ಕ್ಯಾಂಪೇನ್

ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಮೊದಲ ಬಾರಿಗೆ ಯಾದಗಿರಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ. ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಈಗ ಯಾದಗಿರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಒಂದು ಕಡೆ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಅಬ್ಬರದ ಕ್ಯಾಂಪೇನ್ ನಡೆಸಿ ಮತಯಾಚಿಸುತ್ತಿದ್ದರೆ, ಮತ್ತೊಂದೆಡೆ ತುನ್ನೂರು ಅವರ ಗೆಲುವಿಗಾಗಿ ಇಡೀ ಕುಟುಂಬದ ಸದಸ್ಯರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಪತಿ ಚನ್ನಾರೆಡ್ಡಿ ಪರವಾಗಿ ಪತ್ನಿ ವೀಣಾ ಪಾಟೀಲ, ತಂದೆ ಪರವಾಗಿ ಪುತ್ರಿ ಡಾ.ಜ್ಯೋತಿ ಪಾಟೀಲ, ಹಾಗೂ ಮಾವನ ಪರವಾಗಿ ಸೊಸೆಯಂದಿರಾದ ಪೂರ್ಣಿಮಾ ಪಾಟೀಲ, ನಮೃತಾ ಪಾಟೀಲ, ತಂದೆ ಪರವಾಗಿ ಸನ್ನಿಗೌಡ ಪಾಟೀಲ ಪ್ರಚಾರ ಮಾಡಿ ಮತಯಾಚಿಸುತ್ತಿದ್ದಾರೆ.

ಯಾದಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಅವರ ಪುತ್ರಿ ಡಾ.ಜ್ಯೋತಿ ಪಾಟೀಲ ಕ್ಷೇತ್ರದ ವಿವಿಧೆಡೆ ಭರ್ಜರಿ ಪ್ರಚಾರ ನಡೆಸಿದರು.

ಇದನ್ನೂ ಓದಿ: Health Tips: ಅತಿಯಾಗಿ ಉಂಡು ಹೊಟ್ಟೆಯುಬ್ಬರವೇ? ಹೊಟ್ಟೆ ಹಗುರಾಗಲು ಹೀಗೆ ಮಾಡಿ!

ವಿವಿಧೆಡೆ ಮತಯಾಚನೆ

ಯಾದಗಿರಿ ನಗರದ ಬಸವೇಶ್ವರ ನಗರ, ಲಕ್ಷ್ಮೀನಗರ ಸೇರಿದಂತೆ ವಿವಿಧ ಬಡಾವಣೆಯಲ್ಲಿ ಮತದಾರರ ಮನೆ ಬಾಗಿಲಿಗೆ ತೆರಳಿ ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಯೋಜನೆ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿ, ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ತರಬೇಕೆಂದು ಮತಯಾಚಿಸಿದರು.

Exit mobile version