ಕೋಲಾರ: ಹೆದ್ದಾರಿ ನಿರ್ಮಾಣಕ್ಕೆ ಭೂಸ್ವಾಧೀನ ಇಲಾಖೆಯಿಂದ ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಮಾಲೂರು ತಾಲೂಕು ಕಚೇರಿ ಎದುರು ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮಾಲೂರು ತಾಲೂಕಿನ ಎಡಗಿನಬೆಲೆ ಗ್ರಾಮದ ನಾರಾಯಣಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ ರೈತ. ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಭೂಸ್ವಾಧೀನ ಇಲಾಖೆಯಿಂದ ರೈತನ ೧.೨೦ ಎಕರೆ ಜಮೀನು ಒತ್ತುವರಿ ಮಾಡಿಕೊಳ್ಳಲಾಗಿದೆ. ಇದಕ್ಕೆ ೭೬ ಲಕ್ಷ ರೂಪಾಯಿ ಕಂದಾಯ ಇಲಾಖೆಯಿಂದ ಬರಬೇಕಿತ್ತು. ಆದರೆ, ಪರಿಹಾರ ನೀಡಿಲ್ಲ ಎಂದು ನೊಂದು ರೈತ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | Murder News: ಸಾಲ ನೀಡಿದ, ವಾಪಸು ಕೇಳಿದ್ದಕ್ಕೆ ಕೊಲೆಯಾದ
ಪಿ ನಂಬರ್ ಎಂದು ಭೂಸ್ವಾಧೀನ ಇಲಾಖೆಯಿಂದ ರೈತನಿಗೆ ಪರಿಹಾರ ನೀಡಿಲ್ಲ ಎನ್ನಲಾಗಿದೆ. ಈ ಬಗ್ಗೆ ತಹಸೀಲ್ದಾರ್ ಬಳಿ ಅಳಲು ತೋಡಿಕೊಂಡರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಜೀವನಕ್ಕೆ ಆಸರೆಯಾದ ಭೂಮಿಯೂ ಇಲ್ಲದೆ, ಪರಿಹಾರ ಇಲ್ಲದೆ ಹತಾಶೆಯಿಂದ ರೈತ ವಿಷ ಸೇವಿಸಿದ್ದಾರೆ. ಸ್ಥಳಕ್ಕೆ ಮಾಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.