Site icon Vistara News

CM Siddaramaiah : ಸಿದ್ದರಾಮಯ್ಯ ಮನೆಗೆ ಬೃಹತ್‌ ಗಾತ್ರದ ಹಲಸಿನ ಹಣ್ಣು ತಂದ ರೈತ

Farmer brings big sized jack fruit to siddaramaiahs house

Farmer brings big sized jack fruit to siddaramaiahs house

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಜನರ ಅಭಿಮಾನ ಮಾತ್ರ ಕಡಿಮೆ ಆಗುವುದೇ ಇಲ್ಲ. ಈಗ ಅವರು ಐದು ವರ್ಷದ ನಂತರ ಮತ್ತೆ ಸಿಎಂ ಆಗಿದ್ದಾರೆ ಅಂದ ಮೇಲೆ ಕೇಳಬೇಕಾ? ಅಭಿಮಾನ (Siddaramaiah fans) ಪ್ರೀತಿ ಉಕ್ಕಿ ಹರಿಯುತ್ತದೆ. ಹೀಗಾಗಿಯೇ ಹೋದಲ್ಲೆಲ್ಲ ಜನ ಮುತ್ತಿಕೊಳ್ಳುತ್ತಾರೆ, ಮನೆಗೆ ಬಂದು ತಮ್ಮ ನಾಯಕನಿಗೆ ಕೈ ಬೀಸಿ ಹೋಗುತ್ತಾರೆ.

ಗುರುವಾರ ಅವರ ಮನೆಗೆ ಹೀಗೆ ಅಭಿಮಾನದಿಂದಲೇ ಒಬ್ಬ ರೈತರು ಬಂದಿದ್ದರು. ಅವರು ಬರಿಗೈನಲ್ಲಿ ಬಂದಿರಲಿಲ್ಲ. ಪ್ರೀತಿಯಿಂದ ಹಲಸಿನ ಹಣ್ಣು (Jack fruit) ಹೊತ್ತು ತಂದಿದ್ದರು. ಅವರು ತಂದಿದ್ದ ಎರಡು ಹಲಸಿನ ಹಣ್ಣುಗಳ ಗಾತ್ರ ನೋಡಿಯೇ ಅಲ್ಲಿದ್ದ ಪೊಲೀಸರು ಅಚ್ಚರಿಪಟ್ಟರು.

ಹೀಗೆ ಪ್ರೀತಿಯಿಂದ ಹಲಸಿನ ಹಣ್ಣು ಹೊತ್ತು ತಂದವರು ರೈತ ಲಕ್ಷ್ಮಣ. ಅವರು ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನುಗ್ಗೇನಹಳ್ಳಿಯಿಂದ ಬಂದಿದ್ದರು! ಅವರು ತಮ್ಮ ಊರಿಂದ ದ್ವಿಚಕ್ರ ವಾಹನದಲ್ಲೇ ಎರಡು ಬೃಹತ್ ಗಾತ್ರದ ಹಲಸಿನ ಹಣ್ಣುಗಳನ್ನು ಕಟ್ಟಿಕೊಂಡು ಬಂದಿದ್ದರು.

ಕುರುಬ ಸಮುದಾಯಕ್ಕೆ ಸೇರಿದವರಾಗಿರುವ ರೈತ ಲಕ್ಷ್ಮಣ್ (Farmer laxman) ಈ ಹಿಂದೆ ಸಿದ್ದರಾಮಯ್ಯ ಅವರಿಗೆ ಬೆಣ್ಣೆ ತಂದು ಕೊಡುತ್ತಿದ್ದರು. ಈಗ ತಮ್ಮ ಜಮೀನಿನಲ್ಲಿ ಬೆಳೆದ ಹಲಸಿನ ಹಣ್ಣು ಹಿಡಿದುಕೊಂಡು ಬಂದಿದ್ದಾರೆ.

ಶಿವಾನಂದ ಸರ್ಕಲ್‌ ಬಳಿ ಇರುವ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಬಂದ ಅವರನ್ನು ಪೊಲೀಸರು ಕೂಡಾ ಆದರಪೂರ್ವಕವಾಗಿ ಕರೆಸಿಕೊಂಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿರುವುದು ತುಂಬಾ ಸಂತೋಷವಾಗಿದೆ ಎಂದಿದ್ದಾರೆ ರೈತ ಲಕ್ಷ್ಮಣ.

ಇದನ್ನೂ ಓದಿ: CLP Meeting : ಲೋಕಸಭಾ ಚುನಾವಣೆಗೆ ಈಗಿಂದಲೇ ರೆಡಿಯಾಗಲು ಕೈ ಶಾಸಕರಿಗೆ ಸಿದ್ದರಾಮಯ್ಯ ಸೂಚನೆ

Exit mobile version