Site icon Vistara News

Leopard Attack: ಮಾಲೀಕನ ಕೊಲ್ಲಲು ಬಂದ ಚಿರತೆಯನ್ನು ಕೊಂಬಿನಿಂದ ತಿವಿದು ಓಡಿಸಿದ ಹಸು!

Leopard Attack

ದಾವಣಗೆರೆ/ರಾಮನಗರ: ರಾಜ್ಯದಲ್ಲಿ ಚಿರತೆ ದಾಳಿ (Leopard Attack) ಮುಂದುವರಿದಿದೆ. ದಾವಣಗೆರೆಯ ಚನ್ನಗಿರಿ ತಾಲೂಕಿನ ಉಬ್ರಾಣಿ ಹೋಬಳಿಯ ಕೊಡಗೀಕೆರೆ ಗ್ರಾಮದಲ್ಲಿ ಹಸು ಮೇಯಿಸಲು ಹೋಗಿದ್ದ ರೈತನ ಮೇಲೆ ಚಿರತೆ ದಾಳಿ ಮಾಡಿದೆ. ಕರಿಹಾಲಪ್ಪ ಎಂಬುವವರು ಚಿರತೆ ದಾಳಿಗೆ ಒಳಗಾದವರು.

ರೈತ ಕರಿಹಾಲಪ್ಪ ಹಾಗೂ ಅವರು ಸಾಕಿರುವ ನಾಯಿ ಮೇಲೆ ಚಿರತೆ ದಾಳಿ ಮಾಡಿದೆ.

ಕರಿಹಾಲಪ್ಪ ಹಸು ಮೇಯಿಸಲು ಹೋದಾಗ ಹಿಂಬದಿಯಿಂದ ಚಿರತೆ ದಾಳಿ ಮಾಡಿ, ಬಳಿಕ ಅವರು ಸಾಕು ನಾಯಿ ಮೇಲೂ ಎರಗಿದೆ. ಇದಾದ ಬಳಿಕ ಹಸುವಿನ ಮೇಲೆ ಎರಗಲು ಹೋದಾಗ ಕೊಂಬಿನಿಂದ ತಿವಿದು ಚಿರತೆಯನ್ನು ಓಡಿಸಿದೆ. ಸದ್ಯ ರೈತ ಕರಿಹಾಲಪ್ಪ ಬೆನ್ನಿಗೆ ಸಣ್ಣ-ಪುಟ್ಟ ಗಾಯವಾಗಿದೆ. ಅದೃಷ್ಟವಶಾತ್ ಯಾವುದೇ ಗಂಭೀರ ಗಾಯವಾಗದೆ ಕರಿಹಾಲಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡ ಸುದ್ದಿ ಹರಿದಾಡುತ್ತಿದ್ದಂತೆ ಗ್ರಾಮಸ್ಥರಲ್ಲಿ ಆತಂಕಕ್ಕೆ ಹೆಚ್ಚಿದೆ. ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೆ.ಆರ್‌.ಸರ್ಕಲ್‌ ಅಂಡರ್‌ಪಾಸ್‌ ದುರಂತ; ಟೆಸ್ಟ್‌ ಮಾಡೋಕೆ ಟ್ಯಾಂಕರ್‌ನಲ್ಲಿ ನೀರು ಹರಿಸಿದರು!

ರಾಮನಗರದಲ್ಲೂ ಚಿರತೆ ಹಾವಳಿ

ರಾಮನಗರದ ದೊಡ್ಡಗಂಗವಾಡಿ ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಿದೆ. ಚಿರತೆ ಹಸುವಿನ ಮೇಲೆ ದಾಳಿ ಮಾಡಿ ಬಲಿ ಪಡೆದಿದೆ. ರೈತ‌ ಭದ್ರಯ್ಯ ಎಂಬುವವರಿಗೆ ಸೇರಿದ ಹಸು ಮೃತಪಟ್ಟಿದ್ದು, ಜೀವನಕ್ಕೆ ಆಸರೆಯಾಗಿದ್ದ ಹಸು ಕಳೆದುಕೊಂಡು ಕಂಗಾಲಾಗಿದ್ದಾರೆ. ಸರ್ಕಾರ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಜತೆಗೆ ಚಿರತೆಯನ್ನು ‌ಸೆರೆ‌ ಹಿಡಿಯುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version