Site icon Vistara News

ಅತಿವೃಷ್ಟಿಯಿಂದ ಬೆಳೆ ನಾಶ: ಸಾಲದ ಸಂಕಷ್ಟದಿಂದ ಬೇಸತ್ತು ನೇಣು ಬಿಗಿದುಕೊಂಡ ಅನ್ನದಾತ

suicide

ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಸಾಲಬಾಧೆಯಿಂದ ಸಂಕಷ್ಟಕ್ಕೆ ಒಳಗಾದ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೊಸ ಶಿಡೆನೂರ ಗ್ರಾಮದ 63 ವರ್ಷದ ಗಿರಿಯಪ್ಪ ರುದ್ರಪ್ಪ ಯೋಗಿಕೊಪ್ಪದ ಆತ್ಮಹತ್ಯೆಗೆ ಶರಣಾದವರು. ಗಿರಿಯಪ್ಪ ತನ್ನ ಮನೆಯಲ್ಲಿಯೇ ಶುಕ್ರವಾರ ಬೆಳಗಿನ ಜಾವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಾಗಿದ್ದಾರೆ.

ಇವರು ಕೆನರಾ ಬ್ಯಾಂಕ್ ನಲ್ಲಿ 3 ಲಕ್ಷ ರೂ. ಸಾಲ ಮಾಡಿ ಕೃಷಿ ಚಟುವಟಿಕೆ ಆರಂಭಿಸಿದ್ದರು. ಆದರೆ, 8 ಎಕರೆ ಜಮೀನಿನಲ್ಲಿ ಬೆಳೆದ ಬೆಳೆ ಅತಿವೃಷ್ಟಿ ಯಿಂದಾಗಿ ಹಾಳಾಗಿತ್ತು. ಅತ್ತ ಬೆಳೆಯೂ ಇಲ್ಲ. ಇತ್ತ ಸಾಲವೂ ಹೊರೆಯಾಗಿ ಅವರು ಸಂಕಷ್ಟಕ್ಕೆ ಸಿಲುಕಿದರು. ಇದರಿಂದ ತೀವ್ರವಾಗಿ ಮನನೊಂದ ಅವರು ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಘಟನೆ ಕುರಿತಂತೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಇದನ್ನೂ ಓದಿ| Suicide case | ಸಾಲ ಭಾದೆ ತಾಳದೆ ಯುವ ರೈತ ಆತ್ಮಹತ್ಯೆ

Exit mobile version